ಹರೀಶ್ ಪೊಲೀಸರ ವಿರುದ್ಧ ಮಾತಾಡಿದ್ದು ತಪ್ಪು, ಇದನ್ನೇ ನೆಪವಾಗಿಸಿಕೊಂಡು ಅವರನ್ನು ಬಂಧಿಸುವುದು ಸರಿಯಲ್ಲ: ಬಿವೈ ವಿಜಯೇಂದ್ರ

|

Updated on: May 22, 2024 | 4:07 PM

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಪೊಲೀಸರ ವಿರುದ್ಧ ಮಾತಾಡಿದ್ದು ತಪ್ಪು ಅಂತ ಹೇಳುವ ವಿಜಯೇಂದ್ರ ಪಕ್ಷದ ಕಾರ್ಯಕರ್ತನನ್ನು ಬಂಧಿಸಿದಕ್ಕೆ ಆವೇಶಗೊಂಡು ಅವರು ಹಾಗೆ ಮಾತಾಡಿರುತ್ತಾರೆ, ಅದರೆ ಇದನ್ನೇ ನೆಪವಾಗಿಸಿಕೊಂಡು ಪೊಲೀಸರು ಹರೀಶ್ ಬಂಧನಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ವಿಜಯೇಂದ್ರ ಹೇಳಿದರು.

ಬೆಂಗಳೂರು: ಹರೀಶ್ ಪೂಂಜಾ (Harish Poonja) ಬಂಧನದ ಸಾಧ್ಯತೆ ಅಥವಾ ಬಂಧನ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮತ್ತೊಂದು ಸುತ್ತಿನ ಕೆಸರೆರಚಾಟಕ್ಕೆ ವೇದಿಕೆಯಾಗುವುದು ನಿಶ್ಚಿತ ಅನಿಸುತ್ತಿದೆ. ಹರೀಶ್ ಬಂಧನ ಸಾಧ್ಯತೆ ಬಗ್ಗೆ ಇಂದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಿವೈ ವಿಜಯೇಂದ್ರ (BY Vijayendra), ರಾಜಕಾರಣಿಗಳ ಒತ್ತಡಕ್ಕೆ ಮಣಿದು ಪೊಲೀಸರು ಬಿಜೆಪಿ ಮುಖಂಡರು (BJP leaders) ಮತ್ತು ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ, ಕಲಬುರಗಿಯಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬನ ಹತ್ಯೆಯಾಗಿದೆ ಮತ್ತು ಕೊಡಗಿನಲ್ಲಿ ತಮ್ಮ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಂತೂ ವಿನಾನಾರಣ ಬಿಜೆಪಿ ಮುಖಂಡರನ್ನು ಟಾರ್ಗೆಟ್ ಮಾಡಲಾಗುತ್ತಿದೆ, ಇದನ್ನೆಲ್ಲ ನಾವು ಸಹಿಸಿಕೊಳ್ಳುವುದು ಸಾಧ್ಯವಿಲ್ಲ, ಗೃಹ ಸಚಿವರು ತಮ್ಮ ಅಧಿಕಾರಿಗಳೊಂದಿಗೆ ಮಾತಾಡಿ ಇದನ್ನು ನಿಲ್ಲಿಸಬೇಕು ಎಂದು ವಿಜಯೇಂದ್ರ ಹೇಳಿದರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಪೊಲೀಸರ ವಿರುದ್ಧ ಮಾತಾಡಿದ್ದು ತಪ್ಪು ಅಂತ ಹೇಳುವ ವಿಜಯೇಂದ್ರ ಪಕ್ಷದ ಕಾರ್ಯಕರ್ತನನ್ನು ಬಂಧಿಸಿದಕ್ಕೆ ಆವೇಶಗೊಂಡು ಅವರು ಹಾಗೆ ಮಾತಾಡಿರುತ್ತಾರೆ, ಅದರೆ ಇದನ್ನೇ ನೆಪವಾಗಿಸಿಕೊಂಡು ಪೊಲೀಸರು ಹರೀಶ್ ಬಂಧನಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ವಿಜಯೇಂದ್ರ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಎಫ್​ಐಆರ್​​ ಆಯ್ತು, ಹರೀಶ್ ಪೂಂಜಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಮುಂದಾದ ಕಾಂಗ್ರೆಸ್​

Follow us on