My India My Life Goals: ಹಸಿರು ಹೆಚ್ಚಿಸುವ ಕೆಲಸ ಜನಾಂದೋಲನವಾಗಿ ಪರಿವರ್ತನೆಯಾಗಿದ್ದನ್ನು ದೇವೆಂದರ್ ಸುರಾ ವಿವರಿಸಿದ್ದಾರೆ

| Updated By: Digi Tech Desk

Updated on: Jun 22, 2023 | 2:39 PM

ಅವರ ಯೋಜನೆಯಲ್ಲಿ ಅಪರಿಮಿತ ಉತ್ಸಾಹ ತೋರಿದ್ದರಿಂದ ಸಸಿ ನೆಡುವ ಕೆಲಸ ಯುದ್ಧೋಪಾದಿಯಲ್ಲಿ ನಡೆದು ಅದೊಂದು ಜನಾಂದೋಲನವಾಗಿ ಪರಿವರ್ತನೆಗೊಂಡಿತು ಎಂದು ದೇವೆಂದರ್ ಸುರಾ ಹೇಳುತ್ತಾರೆ.

ಬೆಂಗಳೂರು: ತಮ್ಮ ಪರಿಸರ ಪ್ರೇಮ ಹೇಗೆ ಜನಾಂದೋಲನವಾಗಿ ಪರಿವರ್ತನೆಯಾಯಿತು ಅನ್ನೋದನ್ನು ಚಂಡೀಗಢ್ ಪೊಲೀಸ್ ಕಾನ್ ಸ್ಟೇಬಲ್ ದೇವೆಂದರ್ ಸುರಾ (Devender Sura) ಈ ವಿಡಿಯೋದಲ್ಲಿ ವಿವರಿಸಿದ್ದಾರೆ. 2020 ರಲ್ಲಿ ಭಾರತವೂ ಸೇರಿದಂತೆ ಇಡೀ ವಿಶ್ವವನ್ನೇ ಕೊರೋನಾ ಮಹಾಮಾರಿ (Pandemic) ಅಪ್ಪಳಿಸಿದಾಗ ಆಕ್ಸಿಜನ್ ಸಿಲಿಂಡರ್ ಗಳ (oxygen cylinders) ಕೊರತೆಯಿಂದ ಲಕ್ಷಾಂತರ ಜನ ಸಾವನ್ನಪ್ಪಿದ್ದು ದೇವೆಂದರ್ ಮೇಲೆ ಭಾರೀ ದೊಡ್ಡ ಪರಿಣಾಮ ಬೀರಿತ್ತು. ಆಮ್ಲಜನಕ್ಕಾಗಿ ಆಸ್ಪತ್ರೆಗಳ ಮೊರೆ ಹೋಗುವ ಬದಲು ನಮ್ಮದೇ ಆದ ಜೀವವಾಯು ಕೋಟೆ ಕಟ್ಟಿಕೊಳ್ಳುವುದು ಒಳಿತು ಅನ್ನೋ ಯೋಚನೆ ತಲೆಗೆ ಬಂದ ಕೂಡಲೇ ಅವರು ಕಾರ್ಯೋನ್ಮುರಾಗಿ ಆ ದಿಶೆಯೆಡೆ ಗ್ರಾಮಸ್ಥರನ್ನು ಪ್ರೇರೇಪಿಸಿದರು. ಹಳ್ಳಿಯ ಜನರೆಲ್ಲ ಅವರ ಯೋಜನೆಯಲ್ಲಿ ಅಪರಿಮಿತ ಉತ್ಸಾಹ ತೋರಿದ್ದರಿಂದ ಸಸಿ ನೆಡುವ ಕೆಲಸ ಯುದ್ಧೋಪಾದಿಯಲ್ಲಿ ನಡೆದು ಅದೊಂದು ಜನಾಂದೋಲನವಾಗಿ ಪರಿವರ್ತನೆಗೊಂಡಿತು ಎಂದು ದೇವೆಂದರ್ ಸುರಾ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 2:32 pm, Wed, 7 June 23

Follow us on