ಕಟ್ಟಿಕೊಂಡ ಹೆಂಡತಿಯ ಮೇಲೆ ಸಂಶಯಪಟ್ಟು ಚಿತ್ರಹಿಂಸೆ ನೀಡುತ್ತಿರುವ ವ್ಯಕ್ತಿ ವೃತ್ತಿಯಲ್ಲಿ ಪೊಲೀಸ್!
ವಿಜಯಪುರದ ತಿಕೋಟಾ ಪೊಲೀಸ್ ಠಾಣೆಯಲ್ಲಿ ಯಲ್ಲಪ್ಪ ಸೇವೆ ಸಲ್ಲಿಸುತ್ತಿದ್ದಾನೆ ಮತ್ತು ಅವನ ಹೆಂಡತಿ ತನ್ನ ಮೂರು ಮಕ್ಕಳೊಂದಿಗೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕುನ್ನಾಳ ಗ್ರಾಮದಲ್ಲಿ ನೆಲೆಸಿದ್ದಾರೆ. ಯಲ್ಲಪ್ಪನ ಇಬ್ಬರು ಸಹೋದರಿಯರು ಸಹ ಪ್ರತಿಭಾಗೆ ಚಿತ್ರಹಿಂಸೆ ನೀಡುತ್ತಾರಂತೆ.
ಬೆಳಗಾವಿ: ಈ ಗೃಹಿಣಿಯ ಅವಸ್ಥೆಯನ್ನೊಮ್ಮೆ ನೋಡಿ. ಕೇವಲ ಮುಖ ಮಾತ್ರವಲ್ಲ, ಮೈತುಂಬ ಸುಟ್ಟ ಬರೆಗಳು, ಹೊಡೆದ ಗಾಯಗಳು. ಇವರ ಹೆಸರು ಪ್ರತಿಭಾ ಅಸಗಿ, ಗಂಡ ಯಲ್ಲಪ್ಪ ಅಸಗಿ ವೃತ್ತಿಯಲ್ಲಿ ಪೊಲೀಸ್ ಪೇದೆ. ಹೆಂಡತಿಯ ಮೇಲೆ ವಿನಾಕಾರಣ ಸಂಶಯಪಟ್ಟು ಕಳೆದ 6 ತಿಂಗಳಿಂದ ಹೊಲದಲ್ಲಿರುವ ಶೆಡ್ ವೊಂದರಲ್ಲಿ ಚಿತ್ರಹಿಂಸೆ ಕೊಡುತ್ತಿದ್ದಾನಂತೆ ಪೊಲೀಸಪ್ಪ. ರೂಮಿನಲ್ಲಿ ಬಂಧಿಯಾಗಿದ್ದ ಪ್ರತಿಭಾ ಹೇಗೋ ತಪ್ಪಿಸಿಕೊಂಡು ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದು ಮಾಧ್ಯಮದವರ ಮುಂದೆ ತನ್ನ ಕತೆ ಹೇಳಿಕೊಂಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮೂರು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ, ಆದರೆ ಈಗ ಪತ್ನಿಗೆ ಚಿತ್ರಹಿಂಸೆ ನೀಡ್ತಿದ್ದಾನಂತೆ