ಮೂರು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ, ಆದರೆ ಈಗ ಪತ್ನಿಗೆ ಚಿತ್ರಹಿಂಸೆ ನೀಡ್ತಿದ್ದಾನಂತೆ

Assaulting Wife: 3 ವರ್ಷ ಹಿಂದೆ ಪ್ರೀತಿಸಿ ಮದುವೆಯಾಗಿದ್ದವ ಈಗ ನಿತ್ಯ ಕಿರುಕುಳ ನೀಡುತ್ತಿದ್ದಾನೆಂದು ಪತ್ನಿ ಸುಮಿತ್ರಾ ಆರೋಪಿಸಿದ್ದಾರೆ. ಮದ್ಯಪಾನ ಮಾಡಿ ಸಿಗರೇಟ್ ನಿಂದ ಕೈಗೆ ಮೈಗೆ ಸುಡುವುದು, ಕಚ್ಚುವುದು... ತನ್ನ ಪತಿಯ ಕಾಯಕವಾಗಿದೆ ಎಂದು ತುಮಕೂರಿನ ಪಂಡಿನತಹಳ್ಳಿ‌ ನಿವಾಸಿ ಸುಮಿತ್ರಾ ಎನ್ನುವರು ಪತಿ ಗೋವಿಂದರಾಜು ವಿರುದ್ಧ ಗಂಭೀರ ಆರೋಪ‌ ಮಾಡಿದ್ದಾರೆ.

ಮೂರು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ, ಆದರೆ ಈಗ ಪತ್ನಿಗೆ ಚಿತ್ರಹಿಂಸೆ ನೀಡ್ತಿದ್ದಾನಂತೆ
ಪ್ರೀತಿಸಿ ಮದುವೆಯಾಗಿದ್ದ, ಈಗ ಪತ್ನಿಗೆ ಚಿತ್ರಹಿಂಸೆ ನೀಡ್ತಿದ್ದಾನಂತೆ
Follow us
ಮಹೇಶ್ ಇ, ಭೂಮನಹಳ್ಳಿ
| Updated By: ಸಾಧು ಶ್ರೀನಾಥ್​

Updated on: Oct 27, 2023 | 10:22 AM

ತುಮಕೂರು, ಅಕ್ಟೋಬರ್​ 27: ಆತ ವೃತ್ತಿಯಲ್ಲಿ ಚಾಲಕ, ಪ್ರೀತಿಸಿ ‌ಮದುವೆಯೂ (love marriage) ಆಗಿದ್ದ, ಆದ್ರೆ ಪ್ರೀತಿ ಮಾಡಿ ಮದುವೆಯಾದ ಪತ್ನಿಯನ್ನೇ (wife) ಅನುಮಾನಿಸಿ ನಿತ್ಯ ಕಾಟ ಕೊಡುತ್ತಿದ್ದಾನಂತೆ. ಮದ್ಯಪಾನ ಮಾಡಿ ಬಂದು ‌ಸಿಕ್ಕ ಸಿಕ್ಕ ಕಡೆ ಹೊಡೆಯುವುದು, ಸಿಗರೇಟ್ ನಿಂದ ಮೈಯೆಲ್ಲಾ ಸುಟ್ಟು ಚಿತ್ರ ಹಿಂಸೆ (torture) ‌‌ನೀಡುವುದು ಈತನ ಕಾಯಕವಾಗಿದೆ.

ಹೌದು.. ತುಮಕೂರಿನ ಪಂಡಿನತಹಳ್ಳಿ‌ ನಿವಾಸಿಯಾಗಿರುವ ಸುಮಿತ್ರಾ ಎನ್ನುವರು ತನ್ನ ಪತಿ ಗೋವಿಂದರಾಜು ವಿರುದ್ಧ ಗಂಭೀರ ಆರೋಪ‌ ಮಾಡಿದ್ದಾರೆ. ಪ್ರೀತಿಸಿ ಮೂರು ವರ್ಷಗಳ ಹಿಂದೆ ಮದುವೆಯಾಗಿ ದಿನನಿತ್ಯ ಕಿರುಕುಳ ನೀಡುತ್ತಿದ್ದಾನೆಂದು ಪತ್ನಿ ಸುಮಿತ್ರಾ ಆರೋಪಿಸಿದ್ದಾರೆ.

ಮದ್ಯಪಾನ ಮಾಡಿ ಸಿಗರೇಟ್ ನಿಂದ ಕೈಗೆ ಮೈಗೆ ಸುಡುವುದು, ಕಚ್ಚುವುದು ಜೊತೆಗೆ ಕಟ್ಟಿಗೆಯಿಂದ ಹಲ್ಲೆ ಮಾಡುವುದು… ತನ್ನ ಪತಿಯ ಕಾಯಕವಾಗಿದೆ. ತನ್ನ ಪತಿಯ ಕಾಟಕ್ಕೆ ಬೇಸತ್ತು ಪತ್ನಿ ಸುಮಿತ್ರಾ ಹೆಬ್ಬೂರು ಹಾಗೂ ಮಹಿಳಾ ಪೊಲೀಸ್ ಠಾಣೆ ಗೆ ಮೊರೆ ಹೋದರೆ, ಪೊಲೀಸರು ಮಾತ್ರ ದೂರು ದಾಖಲಿಸಿಕೊಳ್ಳದೇ ರಾಜಿಗೆ ಪ್ರಯತ್ನ ಮಾಡುತ್ತಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ.

ತನ್ನ ಪತಿ ಕಿರುಕುಳ ನೀಡಿರುವ ಬಗ್ಗೆ ಗಾಯಗಳು ತೋರಿಸಿದರೂ ಕೂಡ ಅವನ ಜೊತೆ ಹೋಗಿ ಬಾಳಬೇಕೆಂದು ರಾಜಿಗೆ ಯತ್ನ ಮಾಡಿದ್ದಾರೆಂದು ಟಿವಿ9 ಮುಂದೆ ಸುಮಿತ್ರಾ ಹೆಬ್ಬೂರು ಅಳಲು ತೋಡಿಕೊಂಡಿದ್ದಾರೆ. ಇದೇ ವೇಳೆ ಮೂರು ವರ್ಷವಾದರೂ ಮಕ್ಕಳು ಆಗಿಲ್ಲ ಅಂತಾ ಮನ ಬಂದಂತೆ ನಿಂದಿಸಿ ಹಲ್ಲೆ ಮಾಡಿದ್ದಾನೆ ಎಂದು ಬಾಧಿತ ಮಹಿಳೆ ಹಾಗೂ ಅವರ ಸಂಬಂಧಿಕರು ಗಂಭೀರವಾಗಿ ಆರೋಪಿಸಿದ್ದಾರೆ.

Also read: ಪ್ರೇಮ ವಿವಾಹವಾಗಿದ್ದ ವೈದ್ಯೆ ಆತ್ಮಹತ್ಯೆ: ಮಗಳ ಸಾವಿಗೆ ವೈದ್ಯ ಗಂಡನೇ ಕಾರಣ ಅಂತ ಪೋಷಕರ ಆರೋಪ, ನಡೆದಿದ್ದೇನು?

ಸದ್ಯ ತುಮಕೂರು ಮಹಿಳಾ ಪೊಲೀಸರು ಕೂಡ ನಿರ್ಲಕ್ಷ್ಯ ಮಾಡಿದ್ದು ಇದು ಎಲ್ಲಿಗೆ ಮುಟ್ಟುತ್ತೋ ಕಾದು ನೋಡಬೇಕಿದೆ. ಪೊಲೀಸರು ಈಗಲಾದ್ರೂ ದೂರು ದಾಖಲಿಸಿಕೊಂಡು ಮಹಿಳೆಗೆ ನ್ಯಾಯ ಒದಗಿಸಬೇಕು ಎಂಬುದು ಪ್ರಜ್ಞಾವಂತರ ಅಹವಾಲು ಆಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್