ಸಿಸಿಬಿ ದಾಳಿ: ಜೂಜಾಟದಲ್ಲಿ ತೊಡಗಿದ್ದು ಒಂದೂವರೆ ಲಕ್ಷ ರೂ. ಮಾತ್ರ, ಆದರೆ ಫ್ಲ್ಯಾಟ್ ನಿಂದ ಬರಾಮತ್ತಾಗಿದ್ದು ರೂ 86,87,800!

ಅರುಣ್​ ಕುಮಾರ್​ ಬೆಳ್ಳಿ

Updated on: Jan 09, 2024 | 1:17 PM

ಜೂಜಾಟ ನಡೆಯುತ್ತಿದ್ದಿದ್ದು ನಿಜ ಮತ್ತು ಅದರಲ್ಲಿ ಭಾಗಿಯಾಗಿದದ್ದವರು ಇದೇ 6 ಜನ. ಅಂದರ್ ಬಾಹರ್ ಆಡುತ್ತಿದ್ದ ಅವರಿಂದ ಬರಾಮತ್ತಾಗಿದ್ದು ಕೇವಲ ರೂ.1,48,300 ಮಾತ್ರ. ಇವತ್ತಿನ ಜಮಾನಾದಲ್ಲಿ ಒಂದೂವರೆ ಲಕ್ಷ ಯಾವ ದೊಡ್ಡ ಮೊತ್ತ ಮಾರಾಯ್ರೇ. ಆದರೆ, ಪೊಲೀಸರು ಜಾಲಾಡಿದಾಗ ಆ ಮನೆಯಲ್ಲಿ ಸಿಕ್ಕಿದ್ದು ದಾಖಲೆರಹಿತ ರೂ. 86,87,800.

ಬೆಂಗಳೂರು: ಬೆಂಗಳೂರಿನ ಜೆಜೆ ನಗರದಲ್ಲಿರುವ (JJ Nagar) ಅಪಾರ್ಟ್ಮೆಂಟ್ ನ ಫ್ಲ್ಯಾಟೊಂದರಲ್ಲಿ ಜೂಜಾಟ (gambling) ನಡೆಯುತ್ತಿದೆ ಎಂಬ ಖಚಿತ ಮಾಹಿತಿಯನ್ನಾಧರಿಸಿ ದಾಳಿ ನಡೆಸಿದ ನಗರ ಅಪರಾಧ ದಳದ ಪೊಲೀಸರಿಗೆ (CCB) ಅಚ್ಚರಿ ಕಾದಿತ್ತು. ಜೂಜಾಟ ನಡೆಯುತ್ತಿದ್ದಿದ್ದು ನಿಜ ಮತ್ತು ಅದರಲ್ಲಿ ಭಾಗಿಯಾಗಿದದ್ದವರು ಇದೇ 6 ಜನ. ಅಂದರ್ ಬಾಹರ್ ಆಡುತ್ತಿದ್ದ ಅವರಿಂದ ಬರಾಮತ್ತಾಗಿದ್ದು ಕೇವಲ ರೂ.1,48,300 ಮಾತ್ರ. ಇವತ್ತಿನ ಜಮಾನಾದಲ್ಲಿ ಒಂದೂವರೆ ಲಕ್ಷ ಯಾವ ದೊಡ್ಡ ಮೊತ್ತ ಮಾರಾಯ್ರೇ. ಆದರೆ, ಪೊಲೀಸರು ಜಾಲಾಡಿದಾಗ ಆ ಮನೆಯಲ್ಲಿ ಸಿಕ್ಕಿದ್ದು ದಾಖಲೆರಹಿತ ರೂ. 86,87,800. ಆ ಹಣ ಜೂಜಾಟದಲ್ಲಿ ತೊಡಗಿರಲಿಲ್ಲವೆಂದು ಗೊತ್ತಾಗಿದೆ. ಹಾಗಾದರೆ, ಇಷ್ಟು ದೊಡ್ಡ ಮೊತ್ತದ ಹಣ ಎಲ್ಲಿಂದ ಬಂತು ಅನ್ನೋದು ಪೊಲೀಸರ ತಲೆಬಿಸಿಮಾಡಿದೆ. ಪೊಲೀಸ ಮೂಲಗಳ ಪ್ರಕಾರ, ಫ್ಲ್ಯಾಟ್ ಮಾಲೀಕ ನಾಪತ್ತೆಯಾಗಿದ್ದು ಪೊಲೀಸ್ ಶೋಧ ಕಾರ್ಯಾಚರಣೆ ಶುರುಮಾಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.