‘ದರ್ಶನ್ ಕೇಸಲ್ಲಿ ನೀನು ತಲೆ ತೂರಿಸಬೇಡ’: ಧನ್ವೀರ್ ಗೌಡಗೆ ಪೊಲೀಸ್ ವಾರ್ನಿಂಗ್

Updated on: Aug 17, 2025 | 12:07 PM

ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ನಟ ಧನ್ವೀರ್ ಗೌಡ ಆಪ್ತವಾಗಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಕೇಸ್​​ನಲ್ಲಿ ಕಾನೂನಿನ ಸಂಕಷ್ಟ ಎದುರಿಸುತ್ತಿರುವ ದರ್ಶನ್​​ಗೆ ಧನ್ವೀರ್ ಸಾಕಷ್ಟು ಸಹಾಯ ಮಾಡುತ್ತಿದ್ದಾರೆ. ಇತ್ತೀಚೆಗೆ ದರ್ಶನ್ ಅವರನ್ನು ಬಂಧಿಸಲು ಬಂದ ಪೊಲೀಸರ ಜೊತೆ ಮಾತನಾಡಲು ಧನ್ವೀರ್ ಗೌಡ ಮುಂದಾಗಿದ್ದರು.

ನಟ ದರ್ಶನ್ (Darshan) ಜೊತೆ ಧನ್ವೀರ್ ಗೌಡ ಆಪ್ತವಾಗಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಕಾನೂನಿನ ಸಂಕಷ್ಟ ಎದುರಿಸುತ್ತಿರುವ ದರ್ಶನ್​​ಗೆ ಅವರು ಸಾಕಷ್ಟು ಸಹಾಯ ಮಾಡುತ್ತಿದ್ದಾರೆ. ಇತ್ತೀಚೆಗೆ ದರ್ಶನ್ ಅವರನ್ನು ಪೊಲೀಸರು ಬಂಧಿಸಲು ಬಂದಾಗ ಧನ್ವೀರ್ ಗೌಡ (Dhanveer Gowda) ಮಾತನಾಡಲು ಮುಂದಾಗಿದ್ದರು. ಆಗ ಪೊಲೀಸರು ಖಡಕ್ ವಾರ್ನಿಂಗ್ ನೀಡಿದರು. ‘ನೀನು ದರ್ಶನ್ ಪ್ರಕರಣದಲ್ಲಿ ಹೆಚ್ಚು ತಲೆ ತೂರಿಸಬೇಡ. ಕಾನೂನು ಕ್ರಮ ಜರುಗಿಸಬೇಕಾಗುತ್ತದೆ’ ಎಂದು ಪೊಲೀಸರು ವಾರ್ನಿಂಗ್ ನೀಡಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.