ಮಂಡ್ಯ: ಪ್ರಶ್ನೆ ಮಾಡಿದ್ದಕ್ಕೆ ವ್ಯಕ್ತಿಯ ಮೇಲೆ ಪೊಲೀಸರಿಂದ ದೌರ್ಜನ್ಯ!
ದೊಡ್ಡವರನ್ನು ಬಿಟ್ಟು ಕಳಿಸುತ್ತೀರಿ, ನಮ್ಮನ್ನ ಏಕೆ ಬಿಡಲ್ಲ. ನಮ್ಮಂತಹವರಿಗೆ ಏಕೆ ಹೀಗೆ ಮಾಡುತ್ತೀರಿ ಅಂತ ವ್ಯಕ್ತಿ ಪೊಲೀಸರ ವಿರುದ್ಧ ಗರಂ ಆಗಿದ್ದಾನೆ. ಇಷ್ಟಕ್ಕೇ ಪೊಲೀಸರು ಸವಾರನನ್ನು ಠಾಣೆಗೆ ಕರೆದೊಯ್ದಿದ್ದಾರೆ.
ಮಂಡ್ಯ: ಪ್ರಶ್ನೆ ಮಾಡಿದ್ದಕ್ಕೆ ವ್ಯಕ್ತಿಯ ಮೇಲೆ ಪೊಲೀಸರು ದೌರ್ಜನ್ಯ ಎಸಗಿರುವ ಘಟನೆ ಮಂಡ್ಯ ನಗರದ ಸಂಜಯ್ ಸರ್ಕಲ್ನಲ್ಲಿ ನಡೆದಿದೆ. ವ್ಯಕ್ತಿಯೊಬ್ಬರು ಕೊವಿಡ್ ಕೇರ್ ಸೆಂಟರ್ನಿಂದ (Covid Care Centre) ತಂದೆಯನ್ನ ಕರೆತರುತ್ತಿದ್ದರು. ಈ ವೇಳೆ ವ್ಯಕ್ತಿಯ ದ್ವಿಚಕ್ರ ವಾಹನವನ್ನು ಪೊಲೀಸರು ತಡೆದಿದ್ದಾರೆ. ಕೊವಿಡ್ ಕೇರ್ ಸೆಂಟರ್ನಿಂದ ಬರುತ್ತಿರುವುದಾಗಿ ಮಾಹಿತಿ ನೀಡುತ್ತಾರೆ. ಆಗ ಪಕ್ಕದಲ್ಲಿ ನಿಲ್ಲುವಂತೆ ಬೈಕ್ ಸವಾರನಿಗೆ ಪೊಲೀಸರು ಹೇಳುತ್ತಾರೆ. ಇದಕ್ಕೆ ವ್ಯಕ್ತಿ ಪೊಲೀಸರಿಗೆ ಪ್ರಶ್ನೆ ಮಾಡಿದ್ದಾನೆ.
ದೊಡ್ಡವರನ್ನು ಬಿಟ್ಟು ಕಳಿಸುತ್ತೀರಿ, ನಮ್ಮನ್ನ ಏಕೆ ಬಿಡಲ್ಲ. ನಮ್ಮಂತಹವರಿಗೆ ಏಕೆ ಹೀಗೆ ಮಾಡುತ್ತೀರಿ ಅಂತ ವ್ಯಕ್ತಿ ಪೊಲೀಸರ ವಿರುದ್ಧ ಗರಂ ಆಗಿದ್ದಾನೆ. ಇಷ್ಟಕ್ಕೇ ಪೊಲೀಸರು ಸವಾರನನ್ನು ಠಾಣೆಗೆ ಕರೆದೊಯ್ದಿದ್ದಾರೆ. ಸವಾರನ ತಂದೆಯನ್ನು ರಸ್ತೆಯಲ್ಲೇ ಬಿಟ್ಟು ಮಗನನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ಮಂಡ್ಯ ಪೊಲೀಸರ ವಿರುದ್ಧ ಮಹಿಳೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊರೊನಾದಿಂದ ಬೊಮ್ಮೇಗೌಡ ಎಂಬಾತ ಗುಣಮುಖರಾಗಿದ್ದರು. ಹೀಗಾಗಿ ಕೊವಿಡ್ ಕೇರ್ ಸೆಂಟರ್‌ನಿಂದ ಡಿಸ್ಚಾರ್ಜ್ ಆಗಿದ್ದರು. ಡಿಸ್ಚಾರ್ಜ್ ಆಗಿದ್ದ ವ್ಯಕ್ತಿಯನ್ನು ಪುತ್ರ ಮನೆಗೆ ಕರೆದೊಯ್ಯುತ್ತಿದ್ದರು. ಈ ವೇಳೆ ಪೊಲೀಸರು ಮೋಹನ್‌ನನ್ನು ವಶಕ್ಕೆ ಪಡೆದ ಹಿನ್ನೆಲೆ ತಂದೆ ಬೊಮ್ಮೇಗೌಡನನ್ನು ನಡು ರಸ್ತೆಯಲ್ಲಿ ಬಿಟ್ಟು ಹೋಗಿದ್ದರು. ಹೀಗಾಗಿ ಪೊಲೀಸರ ವಿರುದ್ಧ ಬೊಮ್ಮೇಗೌಡ ಪುತ್ರಿ ಕಿಡಿಕಾರಿದ್ದಾರೆ. ಪೊಲೀಸರು ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ನನ್ನ ತಂದೆ ಕೂಡ ಪೊಲೀಸ್ ಕೆಲಸದಿಂದ ನಿವೃತ್ತಿಯಾಗಿರುವವರು. ಇದೀಗ ನನ್ನ ತಮ್ಮನನ್ನ ಪೊಲೀಸರು ಕರೆದೊಯ್ದಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ
‘ಸಮನ್ವಿಗೆ ದೃಷ್ಟಿ ಬಿದ್ದಿತ್ತು ಅನಿಸುತ್ತೆ’; ನನ್ನಮ್ಮ ಸೂಪರ್ ಸ್ಟಾರ್ ಸ್ಪರ್ಧಿಯ ಮಾತು
Tecno Pop 5 LTE: ಅತಿ ಕಡಿಮೆ ಬೆಲೆಯ ಟೆಕ್ನೋ ಪಾಪ್ 5 LTE ಫೋನ್ ಮೊದಲ ಸೇಲ್: ಇದರ ಬೆಲೆ ಕೇವಲ 6,299 ರೂ.