Virat Kohli Test Captaincy: ಟೆಸ್ಟ್ ನಾಯಕತ್ವ ತ್ಯಜಿಸುವ ಬಗ್ಗೆ ಕೊಹ್ಲಿ ಮೊದಲು ಹೇಳಿದ್ದು ಯಾರಿಗೆ ಗೊತ್ತಾ?
Team India Test Captain: ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಭಾರತ ಟೆಸ್ಟ್ ಕ್ರಿಕೆಟ್ ನಾಯಕತ್ವವನ್ನು ತ್ಯಜಿಸುವ ನಿರ್ಧಾರವನ್ನು ಪ್ರಕಟಿಸಿ ಕ್ರಿಕೆಟ್ ಜಗತ್ತಿಗೆ ಆಘಾತ ನೀಡಿದರು. ರಾಜೀನಾಮೆ ಬಗ್ಗೆ ಟ್ವೀಟ್ ಮಾಡುವ ಕೊಹ್ಲಿ ಈ ವಿಚಾರವನ್ನ ಮೊದಲಿಗೆ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಬಳಿ ಹೇಳಿದರಂತೆ.
ವಿರಾಟ್ ಕೊಹ್ಲಿ (Virat Kohli) ಭಾರತ ಟೆಸ್ಟ್ ತಂಡದ ನಾಯಕತ್ವವನ್ನೂ ತ್ಯಜಿಸುವುದರೊಂದಿಗೆ ಟೀಮ್ ಇಂಡಿಯಾದಲ್ಲಿ ಕಳೆದ 7 ವರ್ಷಗಳ ನಾಯಕತ್ವ ಅಧ್ಯಾಯಕ್ಕೆ ಸಂಪೂರ್ಣ ತೆರೆಬಿದ್ದಿದೆ. ಭಾರತ ಕ್ರಿಕೆಟ್ ಕಂಡ ಅತ್ಯಂತ ಆಕ್ರಮಣಕಾರಿ ನಾಯಕರೆನಿಸಿದ ಕೊಹ್ಲಿ ಅವರ ನಾಯಕತ್ವ ಯುಗ ಶನಿವಾರಕ್ಕೆ ಮುಕ್ತಾಯಗೊಂಡಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಸೋತ ಒಂದೇ ದಿನದಲ್ಲಿ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ನಿರ್ಧಾರವನ್ನು ಪ್ರಕಟಿಸಿ ಕ್ರಿಕೆಟ್ ಜಗತ್ತಿಗೆ ಆಘಾತ ನೀಡಿದರು. ರಾಜೀನಾಮೆ ಬಗ್ಗೆ ಟ್ವೀಟ್ ಮಾಡುವ ಕೊಹ್ಲಿ ಈ ವಿಚಾರವನ್ನ ಮೊದಲಿಗೆ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ (Rahul Dravid) ಬಳಿ ಹೇಳಿದರಂತೆ. ನಂತರ ತಂಡಕ್ಕೆ ತಿಳಿಸಿದರು. ನ್ಯೂಲ್ಯಾಂಡ್ಸ್ ಡ್ರೆಸ್ಸಿಂಗ್ ರೂಮ್‌ನಲ್ಲಿ ಪಂದ್ಯದ ನಂತರದ ತಂಡದ ಸಭೆಯಲ್ಲಿ ರಾಜೀನಾಮೆ ಬಗ್ಗೆ ಪ್ರಸ್ತಾಪಿಸಿ ಈ ವಿಷಯವನ್ನು ಹೊರಗೆ ಯಾರಿಗೂ ಹೇಳದಂತೆ ವಿನಂತಿ ಮಾಡಿಕೊಂಡಿದ್ದರಂತೆ. ಕೊಹ್ಲಿಯ ಪೋಸ್ಟ್ ನಲ್ಲಿ ಮಾಜಿ ಕೋಚ್ ರವಿ ಶಾಸ್ತ್ರಿ ಅವರನ್ನು ವಿಶೇಷವಾಗಿ ಉಲ್ಲೇಖಿಸಿದ್ದಾರೆ. ಧೋನಿಗೆ (MS Dhoni) ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ ಕೊಹ್ಲಿ, ಕೊನೆಯದಾಗಿ, ನಾಯಕನಾಗಿ ನನ್ನನ್ನು ನಂಬಿದ ಎಂಎಸ್ ಧೋನಿಗೆ ಧನ್ಯವಾದಗಳು. ಭಾರತೀಯ ಕ್ರಿಕೆಟ್ ಅನ್ನು ಮುಂದಕ್ಕೆ ಕೊಂಡೊಯ್ಯುವ ಸಮರ್ಥ ವ್ಯಕ್ತಿಯಾಗಿ ನನ್ನನ್ನು ಕಂಡುಕೊಂಡರು ಎಂದು ತಿಳಿಸಿದ್ದಾರೆ.