Indian Flag: ಜೈಸಲ್ಮೇರ್ ಗಡಿಯಲ್ಲಿ ಭಾರತದ ಅತ್ಯಂತ ದೊಡ್ಡ ಖಾದಿ ರಾಷ್ಟ್ರ ಧ್ವಜ ಪ್ರದರ್ಶನ
Army Day 2022: ಪಾಕಿಸ್ತಾನದ ಗಡಿಗೆ ಹೊಂದಿಕೊಂಡಿರುವ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಭಾರತೀಯ ಸೇನೆ ಸೇನಾದಿನಾಚರಣೆ ಅಂಗವಾಗಿ ಅತಿ ದೊಡ್ಡ ರಾಷ್ಟ್ರೀಯ ಧ್ವಜವನ್ನು ಪ್ರದರ್ಶಿಸಲಾಗಿದೆ.
ರಾಜಸ್ಥಾನ: ಭಾರತದಲ್ಲಿ ನಿನ್ನೆ ಅಂದರೆ ಜನವರಿ 15ರ ಶನಿವಾರ 74ನೇ ‘ಸೇನಾ ದಿನ’ವನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ರಾಜಸ್ಥಾನದ ಜೈಸಲ್ಮೇರ್ನ ಲಾಂಗೆವಾಲಾದ ಭಾರತ-ಪಾಕಿಸ್ತಾನ ಗಡಿಯಲ್ಲಿ ಖಾದಿಯಿಂದ ತಯಾರಿಸಿದ ವಿಶ್ವದ ಅತಿದೊಡ್ಡ ರಾಷ್ಟ್ರಧ್ವಜವಾದ ‘ಸ್ಮಾರಕ ರಾಷ್ಟ್ರೀಯ ಧ್ವಜ’ವನ್ನು ಪ್ರದರ್ಶಿಸಲಾಯಿತು. 1971ರ ಸಮಯದಲ್ಲಿ ಲಾಂಗೇವಾಲಾ ಕದನದ ಸ್ಥಳವಾಗಿತ್ತು. ಧ್ವಜವು ಸುಮಾರು 225 ಅಡಿ ಉದ್ದ ಮತ್ತು 150 ಅಡಿ ಅಗಲವಿದೆ.
ಲೊಂಗೆವಾಲಾದಲ್ಲಿನ ಈ ಸಾರ್ವಜನಿಕ ಪ್ರದರ್ಶನವು ಈ ಧ್ವಜದ ಐದನೇ ಪ್ರದರ್ಶನವಾಗಿದೆ. ಕಳೆದ ವರ್ಷ ಗಾಂಧಿ ಜಯಂತಿಯ ಸಂದರ್ಭದಲ್ಲಿ ಲೇಹ್‌ನಲ್ಲಿ ಈ ವಿಶೇಷ ಧ್ವಜದ ಪ್ರದರ್ಶನವನ್ನು ಉದ್ಘಾಟಿಸಲಾಯಿತು. ಎರಡನೇ ಸಾರ್ವಜನಿಕ ಪ್ರದರ್ಶನವು 8ನೇ ಅಕ್ಟೋಬರ್ 2021 ರಂದು ವಾಯುಪಡೆ ದಿನದಂದು ಹಿಂಡನ್ ವಾಯುನೆಲೆಯಲ್ಲಿ ನಡೆಯಿತು. ಅಕ್ಟೋಬರ್ 21 ರಂದು ಕೆಂಪು ಕೋಟೆಯಲ್ಲಿ ರಾಷ್ಟ್ರವು 100 ಕೋಟಿ ಕೋವಿಡ್ -19 ಲಸಿಕೆಗಳನ್ನು ಪೂರ್ಣಗೊಳಿಸಿದ ಸಂದರ್ಭದಲ್ಲಿ ಮೂರನೇ ಪ್ರದರ್ಶನ ನಡೆದಿತ್ತು. ಡಿಸೆಂಬರ್ 4 ರಂದು, ನೌಕಾಪಡೆಯ ದಿನದಂದು ಗೇಟ್‌ವೇ ಆಫ್ ಇಂಡಿಯಾ ಬಳಿಯೂ ಧ್ವಜವನ್ನು ಪ್ರದರ್ಶಿಸಲಾಗಿತ್ತು.
Rajasthan | The World’s largest national flag made of ‘khadi’ was displayed along the India- Pakistan border in Jaisalmer to celebrate Indian Army Day. The flag was 225 feet long and 150 feet wide. pic.twitter.com/24EbzPdVKc
— ANI (@ANI) January 15, 2022
ಇದನ್ನೂ ಓದಿ:
ಚಳಿ, ಮಳೆ, ಬಿಸಿಲು ಯಾವುದನ್ನೂ ಲೆಕ್ಕಿಸದೇ ಸೇವೆ ಸಲ್ಲಿಸುವ ಭಾರತೀಯ ಸೈನಿಕರು; ಇಲ್ಲಿವೆ ಮೈ ನವಿರೇಳಿಸುವ ಫೋಟೋಗಳು
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

