ಬಡ ವಾಹನ ಸವಾರರಿಂದ ಹಣ ವಸೂಲಿ ಮಾಡೋದನ್ನೇ ಪೊಲೀಸರು ಕಾಯಕ ಮಾಡಿಕೊಂಡಿದ್ದಾರೆ: ವಿನಯ್ ಕುಲಕರ್ಣಿ
ವಾಹನ ಓಡಿಸುವವರು ತಪ್ಪು ಮಾಡಿದ್ದರೆ, ಅವನಲ್ಲಿ ಸೂಕ್ತವಾದ ಕಾಗದ ಪತ್ರಗಳಿರದಿದ್ದರೆ ಪೊಲೀಸರು ದಂಡ ಹಾಕಿಸಿಕೊಳ್ಳಲಿ ಅದಕ್ಕೆ ಅಭ್ಯಂತರವೇನೂ ಇಲ್ಲ, ಆದರೆ ಎಲ್ಲ ಡಾಕ್ಯುಮೆಂಟ್ಗಳು ಸರಿಯಾಗಿದ್ದರೂ ಚಾಲಕರನ್ನು ಸುಲಿಯುತ್ತಾರೆ, ಸುಖಾಸುಮ್ಮನೆ ಅವನ ವಾಹನವನ್ನು ಹಿಡಿದಿಡಲಾಗುತ್ತದೆ, ಹಣ ಕೊಟ್ಟರೆ ವಾಹನ ರಿಲೀಸ್ ಮಾಡುತ್ತಾರೆ ಎಂದು ವಿನಯ್ ಕುಲಕರ್ಣಿ ಇಲ್ಲಿ ಹೇಳೋದನ್ನು ಕೇಳಿಸಿಕೊಳ್ಳಬಹುದು.
ಧಾರವಾಡ: ಆಡಳಿತ ಪಕ್ಷದ ಶಾಸಕರೊಬ್ಬರು ಪೊಲೀಸರ ವಿರುದ್ಧ ಮಾತಾಡೋದು, ಪೊಲೀಸ್ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಅಂತ ಹೇಳೋದು ಬಹಳ ಕಮ್ಮಿ. ಆದರೆ, ಧಾರವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಢಿಪರೆಂಟ್ ರಾಜಕಾರಣಿ ಅಂತ ಎಲ್ಲರಿಗೂ ಗೊತ್ತು. ಇವತ್ತು ನಗರದ ಹೊರವಲಯದಲ್ಲಿ ಅವರು ಪೊಲೀಸರ ಲೂಟಿಕೋರತನವನ್ನು ನೇರವಾಗಿ ಹೇಳುತ್ತಿದ್ದರೆ ಆ ಭಾಗದ ಪೊಲೀಸ್ ಅಧಿಕಾರಿಯೊಬ್ಬರು ಅಸಹಾಯಕರಾಗಿ ಶಾಸಕನ ಮುಖ ನೋಡುತ್ತಿದ್ದರು. ಬಡ ಆಟೋರಿಕ್ಷಾ ಮತ್ತು ಟಂಟಂಗಳ ಚಾಲಕರು ದಿನಕ್ಕೆ ₹1,000 ಕೂಡ ದುಡಿಯಲಾರರು, ಪೊಲೀಸರು ಅವರನ್ನು ನಿಲ್ಲಿಸಿ ಹತ್ತನ್ನೆರಡು ಸಾವಿರ ವಸೂಲಿ ಮಾಡುತ್ತಾರೆ, ಆ ಬಡಪಾಯಿ ಡ್ರೈವರ್ ಗಳು ಎಲ್ಲಿಂದ ಹಣ ತಂದಾರು ಎಂದು ವಿನಯ್ ಕುಲಕರ್ಣಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮಹಿಳೆ ದೂರು ನೀಡಿದರೂ ಶಾಸಕ ವಿನಯ್ ಕುಲಕರ್ಣಿ ಇನ್ನೂ ಯಾಕೆ ಅರೆಸ್ಟ್ ಆಗಿಲ್ಲ? ರವಿಕುಮಾರ್