ಮಂಡ್ಯದ ರಸ್ತೆಗಳಲ್ಲಿ ಒಂಟಿ ಮಹಿಳೆಯರ ಮೈಮುಟ್ಟಿ ಲೈಂಗಿಕ ಕಿರುಕುಳ ನೀಡುತ್ತಿದ್ದ ವಿಕೃತನ ಮೈಯನ್ನು ಈಗ ಪೊಲೀಸರು ತದುಕುತ್ತಿದ್ದಾರೆ!
ಸಾಮಾನ್ಯವಾಗಿ ನಿರ್ಜನ ಅಥವಾ ವಸತಿಪ್ರದೇಶಗಳ ರಸ್ತೆಗಳಲ್ಲಿ ಒಂಟಿಯಾಗಿ ಬರುವ ಮಹಿಳೆಯರಿಗಾಗಿ ಹೊಂಚು ಹಾಕಿ ಕಾಯುತ್ತಿದ್ದ ವಿಕೃತ ಮನಸ್ಸಿನ ಚಂದ್ರಶೇಖರ್ ಅವರು ಕಂಡಕೂಡಲೇ ದ್ವಿಚಕ್ರ ವಾಹನದಲ್ಲಿ ಹತ್ತಿರ ಹೋಗಿ ಅಂಗಾಗ ಮುಟ್ಟಿ ಪರಾರಿಯಾಗುತ್ತಿದ್ದ.
ಮಂಡ್ಯ: ಇವನದ್ದೆಂಥ ವಿಕೃತಿ ಅಂತ ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯದಲ್ಲಿ ನೋಡಿ. ಮಂಡ್ಯದ ರಸ್ತೆಗಳಲ್ಲಿ ನಡೆದಿರುವ ಘಟನೆಗಳಿವು. ತಲೆಗೆ ಹೆಲ್ಮೆಟ್ ಧರಿಸಿ ದ್ವಿಚಕ್ರವಾಹನವೊಂದರ ಮೇಲೆ ಬಂದು ರಸ್ತೆಯಲ್ಲಿ ನಡೆದುಹೋಗುತ್ತಿರುವ ಯುವತಿಯನ್ನು ಮುಟ್ಟಿ ಲೈಂಗಿಕ ಕಿರುಕುಳ (sexual harassment) ನೀಡಿ ಭುರ್ ಅಂತ ಪರಾರಿಯಾಗುವ ಕಾಮುಕನ ಹೆಸರು ಚಂದ್ರಶೇಖರ್ (Chandrashekar). ನಗರದಲ್ಲಿ ಸುಮಾರು ಒಂದು ತಿಂಗಳಿಂದ ಇಂಥ ನೀಚ ಕೃತ್ಯಗಳಲ್ಲಿ ತೊಡಗಿದ್ದನಂತೆ. ಸಾಮಾನ್ಯವಾಗಿ ನಿರ್ಜನ (deserted) ಅಥವಾ ವಸತಿಪ್ರದೇಶಗಳ ರಸ್ತೆಗಳಲ್ಲಿ ಒಂಟಿಯಾಗಿ ಬರುವ ಮಹಿಳೆಯರಿಗಾಗಿ ಹೊಂಚು ಹಾಕಿ ಕಾಯುತ್ತಿದ್ದ ವಿಕೃತ ಮನಸ್ಸಿನ ಚಂದ್ರಶೇಖರ್ ಅವರು ಕಂಡಕೂಡಲೇ ದ್ವಿಚಕ್ರ ವಾಹನದಲ್ಲಿ ಹತ್ತಿರ ಹೋಗಿ ಅಂಗಾಗ ಮುಟ್ಟಿ ಪರಾರಿಯಾಗುತ್ತಿದ್ದ. ಬುಧವಾರ ಸಾಯಂಕಾಲ ಅವನು ಮಹಿಳೆಯೊಬ್ಬರಿಗೆ ಕಿರುಕುಳ ನೀಡಿ ಪರಾರಿಯಾಗುತ್ತಿದ್ದುದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೇ ಕಾರ್ಯೋನ್ಮುಖರಾದ ಮಂಡ್ಯ ಪೂರ್ವ ಪೊಲೀಸ್ ಠಾಣೆಯ ಸಿಬ್ಬಂದಿ ವಿಕೃತ ಬೀದಿಕಾಮಣ್ಣನ ಬೇಟೆಯಾಡಿ ಸ್ಟೇಶನ್ ಗೆ ಕರೆತಂದು ಕೇಸ್ ದಾಖಲಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ