ಮೂಡಿಗೆರೆ: ಕಾಡಾನೆ ದಾಳಿಯಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದಕ್ಕೆ ಸ್ಥಳೀಯರ ಪ್ರತಿಭಟನೆ, ಪೊಲೀಸ್ ಲಾಠಿಚಾರ್ಜ್
ಅದೇ ಕೋಪದಲ್ಲಿ ಪ್ರತಿಭಟನಾಕಾರರು ಪೊಲೀಸ್ ವ್ಯಾನೊಂದನ್ನು ಕೆಡವಿ ಬೀಳಿಸಲು ಯತ್ನಿಸಿದಾಗ ಪೊಲೀಸರು ಅವರ ಮೇಲೆ ಲಾಠಿ ಚಾರ್ಜ್ ಮಾಡಿದರು.
ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆಯಲ್ಲಿ ಕಾಡಾನೆ (wild elephant) ದಾಳಿಯಿಂದ ವ್ಯಕ್ತಿಯೋರ್ವ ಮೃತಪಟ್ಟ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಸ್ಥಳೀಯರು ಪ್ರತಿಭಟನೆಗಿಳಿದರು. ಅರಣ್ಯ ಇಲಾಖೆ ಕಚೇರಿ (forest department office) ನುಗ್ಗುವ ಪ್ರಯತ್ನ ನಡೆಸಿದರು. ಪೊಲೀಸರು ಅವರನ್ನು ತಡೆದಂತೆಲ್ಲ ಅವರ ರೋಷ ಹೆಚ್ಚಿತು. ಅದೇ ಕೋಪದಲ್ಲಿ ಪ್ರತಿಭಟನಾಕಾರರು ಪೊಲೀಸ್ ವ್ಯಾನೊಂದನ್ನು ಕೆಡವಿ ಬೀಳಿಸಲು ಯತ್ನಿಸಿದಾಗ ಪೊಲೀಸರು ಅವರ ಮೇಲೆ ಲಾಠಿ ಚಾರ್ಜ್ (lathi charge) ಮಾಡಿದರು.