ಕರ್ನಾಟಕ ಬಂದ್: ಫ್ರೀಡಂ ಪಾರ್ಕ್ ಬರುತ್ತಿದ್ದಂತೆಯೇ ವಾಟಾಳ್ ನಾಗರಾಜ್​ರನ್ನು ವಶಕ್ಕೆ ಪಡೆದ ಪೊಲೀಸ್

ಅರುಣ್​ ಕುಮಾರ್​ ಬೆಳ್ಳಿ

Updated on: Mar 22, 2025 | 2:19 PM

ಕಾರಿನ ಡೋರ್ ಬಳಿ ನಿಂತಿದ್ದ ಒಬ್ಬ ಕನ್ನಡ ಪರ ಹೋರಾಟಗಾರನ್ನು ಪೊಲೀಸರು ಅನಾಮತ್ತಾಗಿ ಎತ್ತಿ ಬಸ್ಸಿನ ಕಡೆ ಒಯ್ಯುವುದನ್ನು ದೃಶ್ಯಗಳಲ್ಲಿ ನೋಡಬಹುದು. ವಾಟಾಳ್ ನಾಗರಾಜ್ ತಮ್ಮನ್ನು ಕರೆದೊಯ್ದ ಬಸ್ಸಿನ ಡೋರ್ ಬಳಿ ನಿಂತು ಪೊಲೀಸ್ ಗೂಂಡಾಗಿರಿಯನ್ನು ಸಹಿಸಲ್ಲ ಎನ್ನುತ್ತಾರೆ. ನಾಗರಾಜ್, ಬಂದ್ ಕರೆ ಯಶ ಕಂಡಿದೆ ಅಂತ ಹೇಳಿದರೆ ನಗರ ಪೊಲೀಸ್ ಕಮೀಶನರ್ ಜನಜೀವನ ಸಾಮಾನ್ಯವಾಗಿದೆ ಎನ್ನುತ್ತಾರೆ.

ಬೆಂಗಳೂರು, 22 ಮಾರ್ಚ್: ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು ಬೆಳಗಾವಿಯಿಂದ ಬ್ಯಾನ್ ಮಾಡುವುದು, ಮಹಾದಾಯಿ ಯೋಜನೆ ಜಾರಿ, ಕನ್ನಡಿಗರ ಹಿತರಕ್ಷಣೆ ಮೊದಲಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ವಿವಿಧ ಕನ್ನಡ ಪರ ಸಂಘಟನೆಗಳು ಇಂದು ಕರ್ನಾಟಕ ಬಂದ್ ನಡೆಸಿದ್ದು ಯಶಸ್ವೀಯಾಗಿದೆ ಎಂದು ವಾಟಾಳ್ ನಾಗರಾಜ್ ಹೇಳಿದರು. ಅವರು ಪ್ರತಿಭಟನೆಗೆ ಅಂತ ಫ್ರೀಡಂ ಪಾರ್ಕ್ ಬಳಿ ಬರುತ್ತಿದ್ದಂತೆಯೇ ಪೊಲೀಸರು ಅವರನ್ನು ಸೇರಿದಂತೆ ಸಾರಾ ಗೋವಿಂದು ಮತ್ತು ಇತರ ಹೋರಾಟಗಾರರನ್ನು ವಶಕ್ಕೆ ಪಡೆದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಯಾರೇನೇ ಹೇಳಿದರೂ ಮಾರ್ಚ್​ 22ಕ್ಕೆ ಕರೆ ನೀಡಿರುವ ಕರ್ನಾಟಕ ಬಂದ್ ನಿಲ್ಲಿಸಲಾಗದು: ವಾಟಾಳ್ ನಾಗರಾಜ್

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.