ನನ್ನ ವಿಚಾರಣೆಗೆ ಬಂದ ಪೊಲೀಸರು ವಿಧಾನ ಪರಿಷತ್ ಚೇರ್ಮನ್ ಅನುಮತಿ ಪಡೆಯದೆ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ: ಬಿಕೆ ಹರಿಪ್ರಸಾದ್, ಎಮ್ಮೆಲ್ಸಿ

|

Updated on: Jan 20, 2024 | 3:05 PM

ರಾಜ್ಯದ ರಾಜ್ಯಪಾಲರು ಕಸ್ಟೋಡಿಯನ್ ಆಫ್ ದಿ ಕಾನ್ಸ್ಟಿಟ್ಯೂಶನ್ ಆಗಿರುವುದರಿಂದ ವಿಚಾರಣೆಗೆ ಬರುವ ಪೊಲೀಸರು ರಾಜ್ಯದ ಮುಖ್ಯಮಂತ್ರಿ ಅಥವಾ ಗೃಹ ಸಚಿವರಿಗೆ ತಿಳಿಸುವ ಅಥವಾ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ಹರಿಪ್ರಸಾದ್ ಹೇಳಿದರು.

ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ (BK Hariprasad) ನೀಡಿದ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಶುಕ್ರವಾರ ಪೊಲೀಸರು ಕಾಂಗ್ರೆಸ್ ನಾಯಕನ ಮನೆಗೆ ತೆರಳಿ ವಿಚಾರಣೆ ನಡೆಸಿದ್ದಾರೆ. ಇಂದು ನಗರದಲ್ಲಿ ಟಿವಿ9 ವರದಿಗಾರನೊಂದಿಗೆ ಮಾತಾಡಿದ ಹರಿಪ್ರಸಾದ್ ವಿಷಯಕ್ಕೆ ಸಂಬಂಧಪಟ್ಟ ವಿವರ ನೀಡಿದರು. ಬಿಜೆಪಿ ನಾಯಕರು ರಾಜ್ಯಪಾಲರಿಗೆ (governor) ನೀಡಿದ ದೂರಿನ ಮೇರೆಗೆ ಪೊಲೀಸರು ತನ್ನ ವಿಚಾರಣೆಗೆ (enquiry) ಬಂದಿದ್ದರು ಮತ್ತು ಅವರಿಗೆ ಹೇಳಬೇಕಾಗಿದ್ದನ್ನು ಹೇಳಿ ಕಳಿಸಿದ್ದೇನೆ ಎಂದರು ಅವರು ಹೇಳಿದರು. ರಾಜ್ಯದ ರಾಜ್ಯಪಾಲರು ಕಸ್ಟೋಡಿಯನ್ ಆಫ್ ದಿ ಕಾನ್ಸ್ಟಿಟ್ಯೂಶನ್ ಆಗಿರುವುದರಿಂದ ವಿಚಾರಣೆಗೆ ಬರುವ ಪೊಲೀಸರು ರಾಜ್ಯದ ಮುಖ್ಯಮಂತ್ರಿ ಅಥವಾ ಗೃಹ ಸಚಿವರಿಗೆ ತಿಳಿಸುವ ಅಥವಾ ಅನುಮತಿ ಪಡೆಯುವ ಅಗತ್ಯವಿಲ್ಲ, ಅದರೆ ತಾನು ವಿಧಾವ ಪರಿಷತ್ ಸದಸ್ಯನಾಗಿರುವುದರಿಂದ ವಿಧಾನ ಪರಿಷತ್ ಚೇರ್ಮನ್ ಅವರ ಅನಮತಿ ಪಡೆಯಬೇಕಿತ್ತು, ಆದರೆ ಪೊಲೀಸರು ಹಾಗೆ ಮಾಡದೆ ಶಿಷ್ಟಾಚಾರವನ್ನು ಉಲ್ಲಂಘಿಸಿದ್ದಾರೆ ಎಂದು ಹರಿಪ್ರಸಾದ್ ಹೇಳಿದರು. ರಾಜ್ಯಪಾಲರ ಬಾಗಿಲಿಗೆ ಹೋಗುವ ಎಲ್ಲ ದೂರುಗಳ ವಿಚಾರಣೆ ಇಷ್ಟೇ ಕ್ಷಿಪ್ರಗತಿಯಲ್ಲಿ ನಡೆದರೆ, ಬಹಳ ಚೆನ್ನಾಗಿರುತ್ತದೆ ಎಂದು ಅವರು ಕುಹುಕವಾಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ