ಬಿಜೆಪಿ ಸದಸ್ಯರಿಂದ ಜೀವ ಬೆದರಿಕೆ: ವಿಧಾನ ಪರಿಷತ್ ಸಭಾಪತಿಗೆ ಬಿಕೆ ಹರಿಪ್ರಸಾದ್ ಪತ್ರ

ಬಿಜೆಪಿ ಸದಸ್ಯರಿಂದ ನಮಗೆ ಜೀವ ಬೆದರಿಕೆ ಇದೆ, ರಕ್ಷಣೆ ಕೊಡಿ ಎಂದು ಸಭಾಪತಿಗೆ ವಿಧಾನ ಪರಿಷತ್​ಗೆ ಕಾಂಗ್ರೆಸ್ ಪಕ್ಷದ​ ಪರಿಷತ್​ ಸದಸ್ಯರು ಪತ್ರ ಬರೆದಿದ್ದಾರೆ.

ಬಿಜೆಪಿ ಸದಸ್ಯರಿಂದ ಜೀವ ಬೆದರಿಕೆ: ವಿಧಾನ ಪರಿಷತ್ ಸಭಾಪತಿಗೆ ಬಿಕೆ ಹರಿಪ್ರಸಾದ್ ಪತ್ರ
ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಅವರನ್ನು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅಭಿನಂದಿಸಿದರು.
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 18, 2022 | 11:37 PM

ಬೆಂಗಳೂರು: ಬಿಜೆಪಿ ಸದಸ್ಯರಿಂದ ನಮಗೆ ಜೀವ ಬೆದರಿಕೆ ಇದೆ, ರಕ್ಷಣೆ ಕೊಡಿ ಎಂದು ಸಭಾಪತಿಗೆ ವಿಧಾನ ಪರಿಷತ್​ಗೆ ಕಾಂಗ್ರೆಸ್ ಪಕ್ಷದ​ ಪರಿಷತ್​ ಸದಸ್ಯರು ಪತ್ರ ಬರೆದಿದ್ದಾರೆ. ಬಿ.ಕೆ.ಹರಿಪ್ರಸಾದ್, ಪ್ರಕಾಶ್ ರಾಥೋಡ್, ಸಲೀಂ ಅಹ್ಮದ್ ಪತ್ರಕ್ಕೆ ಸಹಿ ಹಾಕಿದ್ದಾರೆ. ಸಭಾಪತಿಗಳಾದ ತಾವು ನಮಗೆ ರಕ್ಷಣೆ ನೀಡಬೇಕು ಎಂದು ಅವರು ಪತ್ರದಲ್ಲಿ ಮನವಿ ಸಲ್ಲಿಸಿದ್ದಾರೆ. ಈ ಕುರಿತು ಸೂಕ್ತ ಕ್ರಮವಹಿಸುವಂತೆ ವಿಧಾನ ಪರಿಷತ್ ಕಾರ್ಯದರ್ಶಿಗೆ ಸಭಾಪತಿ ಬಸವರಾಜ ಹೊರಟ್ಟಿ ಸೂಚನೆ ನೀಡಿದ್ದಾರೆ. ಕಾರ್ಯದರ್ಶಿ ಮೂಲಕ ಪೊಲೀಸ್ ಇಲಾಖೆಗೆ ಪತ್ರವನ್ನು ರವಾನಿಸಿ, ರಕ್ಷಣೆ ಕೊಡಿಸಲು ಸಭಾಪತಿ ಸೂಚನೆ ನೀಡಿದ್ದಾರೆ. ‘ಕಾಂಗ್ರೆಸ್​ನವರಿಗೆ ದನಿಯೆತ್ತಲು ಬಿಡಬೇಡಿ’ ಎಂದು ಬಿಜೆಪಿ ಕಚೇರಿಯಲ್ಲಿ ನಳಿನ್ ಕುಮಾರ್ ಕಟೀಲ್ ತಮ್ಮ ಪಕ್ಷದ ಶಾಸಕರಿಗೆ ಸೂಚಿಸಿದ್ದಾರೆ. ಇದು ಪರೋಕ್ಷವಾಗಿ ಕೊಲೆ ಬೆದರಿಕೆಗೆ ಪ್ರಚೋದನೆ ಮಾಡಿದಂತೆ ಇದೆ. ನಮಗೆ ಜೀವ ಬೆದರಿಕೆ ಇರುವುದರಿಂದ ರಕ್ಷಣೆ ಕೊಡಿ ಎಂದು ಹರಿಪ್ರಸಾದ್ ವಿನಂತಿಸಿದರು.

ಹರಿಪ್ರಸಾದ್​ಗೆ ಅಭಿನಂದನೆ

ಬೆಂಗಳೂರಿನ ಟೌನ್​ಹಾಲ್​ನಲ್ಲಿ ಬಿ.ಕೆ.ಹರಿಪ್ರಸಾದ್ ಅವರ ಅಭಿನಂದನಾ ಸಮಾರಂಭ ನಡೆಯಿತು. ನಾನು ಇಂದು ಈ ಮಟ್ಟಕ್ಕೆ ಬರಲು ಸಂವಿಧಾನವೇ ಕಾರಣ. ನಾನು ಮಾಜಿ ಪ್ರಧಾನಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಅವರ ಜೊತೆಗೆ ಕೆಲಸ ಮಾಡಿದ್ದೇನೆ. ಇದು ನಾನು ಬೆಲೆ ಕಟ್ಟಲಾಗದ ಆಸ್ತಿ ಎಂದು ಅಭಿನಂದನಾ ಸಮಾರಂಭದಲ್ಲಿ ಬಿ.ಕೆ.ಹರಿಪ್ರಸಾದ್ ಹೇಳಿದರು. ಹಣ ಇಲ್ಲದವರೂ ಕೂಡ ರಾಜಕಾರಣ ಮಾಡಬಹುದು. ನೀವು, ನಾವು ಎಲ್ಲರೂ ಬದುಕಬೇಕು ಎನ್ನುವುದು ಕಾಂಗ್ರೆಸ್ ಸಿದ್ಧಾಂತ. ತಾವೊಬ್ಬರೇ ಬದುಕಬೇಕು ಎಂಬ ಸಂಸ್ಕೃತಿ ಬಿಜೆಪಿಯಲ್ಲಿ ಮಾತ್ರ ಇದೆ. ಸಿಬಿಐ, ಇಡಿ ಏನೇ ಬಂದರೂ ನಾನು ಮೋದಿ ವಿರುದ್ಧ ಮಾತನಾಡುತ್ತೇನೆ. ನನಗೆ ಯಾವುದೇ ಭಯವಿಲ್ಲ ಎಂದು ಹೇಳಿದರು.

ನಾನು ಇಂದು ಈ ಮಟ್ಟಕ್ಕೆ ಬರಲು ಸಂವಿಧಾನವೇ ಕಾರಣ. ರಾಷ್ಟ್ರಧ್ವಜ, ರಾಷ್ಟ್ರಗೀತೆಗೆ ಗೌರವ‌ ಕೊಡಬೇಕು. ಹಣ ಇದ್ದವರಿಗೆ ಮಾತ್ರವೇ ರಾಜಕಾರಣ ಅಲ್ಲ. ಹಣ ಇಲ್ಲದವರೂ ರಾಜಕಾರಣ ಮಾಡಬಹುದು. ಅದರಲ್ಲೂ ನಿಷ್ಠಾವಂತರಿಗೆ ಒಳ್ಳೆಯ ಹುದ್ದೆ ಹುಡುಕಿಕೊಂಡು ಬರುತ್ತದೆ. ನೀವು ಹಾಗೂ ನಾವು ಬದುಕಬೇಕು ಎನ್ನುವುದು ಕಾಂಗ್ರೆಸ್ ಸಿದ್ಧಾಂತ. ಬಿಜೆಪಿಯಲ್ಲಿ ಮಾತ್ರ ತಾವೊಬ್ಬರೇ ಬದುಕಬೇಕು ಎಂಬ ಸಂಸ್ಕೃತಿ ಇದೆ. ಹಿಜಾಬ್ ವಿಚಾರವನ್ನು ದೊಡ್ಡದು ಮಾಡಿ ಸಣ್ಣ ಮಕ್ಕಳ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ನಮ್ಮ ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು ಸುಮ್ಮನೇ ಇರಬಾರದು. ಅವ್ರು ನಿಮ್ಮ ಮಕ್ಕಳು ಅಂತ ನಿಲ್ಲಬೇಕು ಎಂದು ಸಲಹೆ ಮಾಡಿದರು. ಕಾಂಗ್ರೆಸ್ ಹೈಕಮಾಂಡ್ ಸಣ್ಣ ನಾಯಕರನ್ನೂ ಗುರುತಿಸುತ್ತದೆ. ಏನನ್ನೂ ನಿರೀಕ್ಷೆ ಮಾಡದೆ ಜೊತೆಗೆ ನಿಂತು ಕಾಂಗ್ರೆಸ್ ಪಕ್ಷ ಬೆಳಸಬೇಕು ಎಂದು ಕರೆ ನೀಡಿದರು.

ಇದನ್ನೂ ಓದಿ: ಹರಿಪ್ರಸಾದ್ vs ಕೋಟ ಶ್ರೀನಿವಾಸ ಪೂಜಾರಿ: ಮಲಹೊರುವ ಪದ್ಧತಿ ಬಗ್ಗೆ ವಿಧಾನ ಪರಿಷತ್​ನಲ್ಲಿ ಕಾವೇರಿದ ಚರ್ಚೆ

ಇದನ್ನೂ ಓದಿ: ವಿಧಾನ ಪರಿಷತ್ ವಿಪಕ್ಷ ನಾಯಕನಾಗಿ ಅಧಿಕಾರ ಸ್ವೀಕರಿಸಿದ ಬಿ.ಕೆ ಹರಿಪ್ರಸಾದ್