ನಮ್ಮ ರಾಜಕಾರಣಿಗಳು ಕಾರವಾರದ ಡಿಸಿ ಮತ್ತು ಎಸ್​ ಪಿಯಿಂದ ಒಂದೆರಡು ಪಾಠಗಳನ್ನು ಹೇಳಿಸಿಕೊಳ್ಳಬೇಕಿದೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 06, 2022 | 6:42 PM

ನಮ್ಮ ರಾಜಕಾರಣಿಗಳಿಗೆ ಸೋಂಕು ತಡೆಯುವ ನಿಟ್ಟಿನಲ್ಲಿ ಇರುವ ಬದ್ಧತೆಯನ್ನು ನಾವು ಎಕ್ಸ್​​​ಪೋಸ್​ ಮಾಡುತ್ತಲೇ ಇದ್ದೇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಸ್ಕ್​ ಧರಿಸದೆ ಆಚೆ ಬರುವುದಿಲ್ಲ. ಆದರೆ ಅವರೊಂದಿಗೆ ಕಾಣಿಸಿಕೊಳ್ಳುವ ಬೇರೆ ಸಚಿವರು ಮತ್ತು ಇತರರು ಮಾಸ್ಕ್​ ಧರಿಸಿರುವುದಿಲ್ಲ.

ನಮ್ಮ ರಾಜಕಾರಣಿಗಳು ಈ ಅಧಿಕಾರಿಗಳನ್ನು ನೋಡಿ ಕಲಿಯುವುದು ಬಹಳಷ್ಟಿದೆ ಅನಿಸುತ್ತೆ. ಕಾರವಾರ ಜಿಲ್ಲಾಧಿಕಾರಿ ಎಮ್ ಪಿ ಮುಲೈ ಮುಹಿಲಿನ್ ಮತ್ತು ಪೊಲೀಸ್​ ವರಿಷ್ಠಾಧಿಕಾರಿ ಡಾ ಸುಮನ್ ಡಿ ಪೆನ್ನೇಕರ್ ಅವರನ್ನು ಕುರಿತು ನಾವು ಮಾತಾಡುತ್ತಿದ್ದೇವೆ. ಈ ವಿಡಿಯೋನಲ್ಲಿ ಅವರಿಬ್ಬರೂ ನಿಮಗೆ ಕಾಣಿಸುತ್ತಾರೆ. ಕಾರವಾರ ಮತ್ತು ಗೋವಾ ಗಡಿಭಾಗದಲ್ಲಿರುವ ಚೆಕ್​ ಪೋಸ್ಟ್​​ಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಅವರು ಪರಿಶೀಲಿಸುತ್ತಿದ್ದಾರೆ. ಉನ್ನತ ಅಧಿಕಾರಿಗಳು ತಮ್ಮ ಕಚೇರಿಗಳಿಂದ ಆದೇಶ ಹೊರಡಿಸಿದರೆ ಸಾಕು, ಕಿರಿಯ ಅಧಿಕಾರಿಗಳು ಅದನ್ನು ಜಾರಿಗೊಳಿಸುವೆಡೆ ಕಾರ್ಯನಿರತರಾಗುತ್ತಾರೆ. ಆದರೆ, ಈ ಯುವ ಜವಾಬ್ದಾರಿಯುತ ಅಧಿಕಾರಿಗಳು ಗೋವಾದಲ್ಲಿ ಕೋವಿಡ್​-19 ಸೋಂಕಿನ ಪ್ರಕರಣಗಳು ಒಂದೇ ಸಮ ಹೆಚ್ಚುತ್ತಿರುವುದರಿಂದ ಅಲ್ಲಿಂದ ಕರ್ನಾಟಕಕ್ಕೆ ಬರುವ ಜನರನ್ನು ಚೆಕ್​ ಪೋಸ್ಟ್​​​ನಲ್ಲಿ ಪರೀಕ್ಷಿಸುವ ಸಲುವಾಗಿ ಮಾಡಿರುವ ಏರ್ಪಾಟು ಗಮನಿಸಲು ಖುದ್ದು ಭೇಟಿ ನೀಡಿದ್ದರು.

ವಿಷಯ ಅದಲ್ಲ. ಮುಲೈ ಮುಹಿಲಿನ್ ಮತ್ತು ಸುಮನ್ ಅವರನ್ನು ನೀವು ಗಮನಿಸಿ. ಇಬ್ಬರ ಮುಖಗಳ ಮೇಲೆ ಮಾಸ್ಕ್​ ಇದೆ ಮತ್ತು ಅಲ್ಲಿರುವ ಎಲ್ಲ ಸಿಬ್ಬಂದಿ ಮತ್ತು ಕ್ಯಾಬಿನಲ್ಲಿರುವ ಪ್ರತಿಯೊಬ್ಬ ಆರೋಗ್ಯ ಕಾರ್ಯಕರ್ತೆ ಸಹ ಬಾಯಿ ಮತ್ತು ಮೂಗು ಸರಿಯಾಗಿ ಕವರ್​ ಆಗುವ ಹಾಗೆ ಮಾಸ್ಕ್​​ ಧರಿಸಿದ್ದಾರೆ. ಖುದ್ದು ಡಿಸಿ ಮತ್ತು ಎಸ್​ ಪಿ ಮಾಸ್ಕ್ ಧರಿಸಿದ್ದರೆ ಸಹಸಜವಾಗೇ ಕಿರಿಯ ಅಧಿಕಾರಿಗಳು ಮತ್ತು ಇತರ ಸಿಬ್ಬಂದಿ ಅವರನ್ನು ಅನುಕರಿಸುತ್ತಾರೆ.

ನಮ್ಮ ರಾಜಕಾರಣಿಗಳಿಗೆ ಸೋಂಕು ತಡೆಯುವ ನಿಟ್ಟಿನಲ್ಲಿ ಇರುವ ಬದ್ಧತೆಯನ್ನು ನಾವು ಎಕ್ಸ್​​​ಪೋಸ್​ ಮಾಡುತ್ತಲೇ ಇದ್ದೇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಸ್ಕ್​ ಧರಿಸದೆ ಆಚೆ ಬರುವುದಿಲ್ಲ. ಆದರೆ ಅವರೊಂದಿಗೆ ಕಾಣಿಸಿಕೊಳ್ಳುವ ಬೇರೆ ಸಚಿವರು ಮತ್ತು ಇತರರು ಮಾಸ್ಕ್​ ಧರಿಸಿರುವುದಿಲ್ಲ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ತಮ್ಮ ಪಾದಯಾತ್ರೆ ಆರಂಭಿಸುವ ಮೊದಲು ಮೊನ್ನೆ ಮೈಸೂರಲ್ಲಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಲು ಮಾಸ್ಕ್​ ಧರಿಸದೆ ಹೋಗಿದ್ದರು ಮತ್ತು ಅವರ ಜೊತೆಗಿದ್ದ ಪುಡಿ ನಾಯಕರಲ್ಲಿ ಯಾರೊಬ್ಬರೂ ಅದನ್ನು ಧರಿಸಿರಲಿಲ್ಲ.

ನಮ್ಮ ನಾಯಕರು ಈ ಯುವ ಅಧಿಕಾರಿಗಳಿಂದ ಪಾಠ ಕಲಿಯಬೇಕು ತಾನೆ?

ಇದನ್ನೂ ಓದಿ:   25 ವರ್ಷಗಳ ಹಿಂದೆ ಅಮೆಜಾನ್​ ವೆಬ್ಸೈಟ್​ ಬಗ್ಗೆ ಡೆಮೋ ನೀಡಿದ ವಿಡಿಯೋ ಹಂಚಿಕೊಂಡ ಸಂಸ್ಥಾಪಕ ಜೆಫ್ ಬೆಜೋಸ್​​

Published on: Jan 06, 2022 06:42 PM