ಬಿಕೋ ಎನ್ನುತ್ತಿವೆ ಚಿತ್ರಮಂದಿರಗಳು; ವೀಕೆಂಡ್ ಕರ್ಫ್ಯೂಗೂ ಮುನ್ನವೇ ಚಿತ್ರರಂಗ ಸೈಲೆಂಟ್
ಈಗಾಗಲೇ ಪ್ರದರ್ಶನ ಕಾಣುತ್ತಿದ್ದ ಸಿನಿಮಾಗಳಿಗೂ ಪ್ರೇಕ್ಷಕರ ಸಂಖ್ಯೆ ಕುಸಿದಿದೆ. ಬೆಂಗಳೂರಿನ ಹಲವು ಚಿತ್ರಮಂದಿರಗಳಲ್ಲಿ ಇದೇ ಪರಿಸ್ಥಿತಿ ನಿರ್ಮಾಣ ಆಗಿದೆ.
ಚಿತ್ರಮಂದಿರಗಳ ಕಡೆಗೆ ಪ್ರೇಕ್ಷಕರನ್ನು ಕರೆದುಕೊಂಡು ಬರುವುದು ಸುಲಭದ ಕೆಲಸವಲ್ಲ. ಅದಕ್ಕಾಗಿ ಸಿನಿಮಾ ಮಂದಿ ಸಿಕ್ಕಾಪಟ್ಟೆ ಕಸರತ್ತು ಮಾಡುತ್ತಾರೆ. ಆದರೆ ಆ ಎಲ್ಲ ಪ್ರಯತ್ನಗಳು ಈಗ ನೀರಿನಲ್ಲಿ ಹೋಮ ಮಾಡಿದಂತೆ ಆಗಿದೆ. ಎರಡು ಲಾಕ್ಡೌನ್ ಬಳಿಕ ಚೇತರಿಸಿಕೊಳ್ಳುತ್ತಿದ್ದ ಚಿತ್ರರಂಗಕ್ಕೆ ಮತ್ತೆ ಮಂಕು ಕವಿದಂತಾಗಿದೆ. ಒಮಿಕ್ರಾನ್ (Omicron) ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನೈಟ್ ಕರ್ಫ್ಯೂ (Night Curfew) ಮತ್ತು ವೀಕೆಂಡ್ ಕರ್ಫ್ಯೂ (Weekend Curfew) ಜಾರಿ ಆಗಿದೆ. ಅದರ ಪರಿಣಾಮವಾಗಿ ಯಾವುದೇ ಹೊಸ ಸಿನಿಮಾಗಳು ರಿಲೀಸ್ ಆಗುತ್ತಿಲ್ಲ. ಈಗಾಗಲೇ ಪ್ರದರ್ಶನ ಕಾಣುತ್ತಿದ್ದ ಸಿನಿಮಾಗಳಿಗೂ ಪ್ರೇಕ್ಷಕರ ಸಂಖ್ಯೆ ಕುಸಿದಿದೆ. ಬೆಂಗಳೂರಿನ ಹಲವು ಚಿತ್ರಮಂದಿರಗಳಲ್ಲಿ (Film Theatre) ಇದೇ ಪರಿಸ್ಥಿತಿ ನಿರ್ಮಾಣ ಆಗಿದೆ. ಶೇ. 50ರಷ್ಟು ಆಸನ ಮಿತಿ ನಿರ್ಬಂಧ ಹೇರಿರುವ ಕಾರಣದಿಂದಲೂ ಪ್ರೇಕ್ಷಕರ ಸಂಖ್ಯೆಯಲ್ಲಿ ಇಳಿಮುಖ ಆಗಿದೆ.
ಇದನ್ನೂ ಓದಿ:
ಮುಂದಿನ ವಾರವಾದ್ರೂ ಚೇತರಿಸಿಕೊಳ್ಳುತ್ತಾ ಚಿತ್ರರಂಗ? ವಾಣಿಜ್ಯ ಮಂಡಳಿಗೆ ‘ಡಿಎನ್ಎ’ ತಂಡದ ಮನವಿ
‘ವಿಕ್ರಾಂತ್ ರೋಣ’ ಪ್ಲ್ಯಾನ್ನಲ್ಲಿ ದೊಡ್ಡ ಬದಲಾವಣೆ; ಒಟಿಟಿ ಆಫರ್ ಬೆನ್ನಲ್ಲೇ ಟೀಸರ್ ರಿಲೀಸ್ ಮುಂದೂಡಿಕೆ?