AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂದಿನ ವಾರವಾದ್ರೂ ಚೇತರಿಸಿಕೊಳ್ಳುತ್ತಾ ಚಿತ್ರರಂಗ? ವಾಣಿಜ್ಯ ಮಂಡಳಿಗೆ ‘ಡಿಎನ್​ಎ’ ತಂಡದ ಮನವಿ

ಮುಂದಿನ ವಾರದೊಳಗಾದರೂ ವೀಕೆಂಡ್​ ಕರ್ಫ್ಯೂ ಸಡಿಲಿಸುವಂತೆ ಸರ್ಕಾರದ ಮನವೊಲಿಸಬೇಕು ಎಂದು ವಾಣಿಜ್ಯ ಮಂಡಳಿಗೆ ‘ಡಿಎನ್​ಎ’ ತಂಡ ಮನವಿ ಸಲ್ಲಿಸಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಜ.7ರಂದು ಈ ಚಿತ್ರ ರಿಲೀಸ್​ ಆಗಬೇಕಿತ್ತು.

ಮುಂದಿನ ವಾರವಾದ್ರೂ ಚೇತರಿಸಿಕೊಳ್ಳುತ್ತಾ ಚಿತ್ರರಂಗ? ವಾಣಿಜ್ಯ ಮಂಡಳಿಗೆ ‘ಡಿಎನ್​ಎ’ ತಂಡದ ಮನವಿ
ಡಿಎನ್​ಎ ಸಿನಿಮಾ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ
TV9 Web
| Edited By: |

Updated on: Jan 06, 2022 | 4:35 PM

Share

ಎರಡು ಲಾಕ್​ಡೌನ್​ ಪರಿಣಾಮದಿಂದ ಕಂಗೆಟ್ಟಿದ್ದ ಚಿತ್ರರಂಗಕ್ಕೆ ಈಗ ಮೂರನೇ ಬಾರಿಗೆ ಶಾಕ್​ ಎದುರಾಗಿದೆ. ದೇಶದಲ್ಲಿ ಒಮಿಕ್ರಾನ್​ ಪ್ರಕರಣಗಳ ಸಂಖ್ಯೆ (Omicron Cases in India) ಹೆಚ್ಚುತ್ತಿರುವ ಕಾರಣ ಕಠಿಣ ನಿಯಮಗಳನ್ನು ಜಾರಿ ಮಾಡಲಾಗಿದೆ. ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ ನೀಡಲಾಗಿದೆ. ನೈಟ್​ ಕರ್ಫ್ಯೂ ಜತೆಗೆ ವೀಕೆಂಡ್​ ಕರ್ಫ್ಯೂ (Weekend Curfew) ಕೂಡ ಜಾರಿ ಆಗಿರುವುದರಿಂದ ಅನೇಕ ಸಿನಿಮಾಗಳು ರಿಲೀಸ್​ ದಿನಾಂಕವನ್ನು ಮಂದೂಡಿಕೊಂಡಿವೆ. ಈ ವಾರ (ಜ.7) ರಿಲೀಸ್​ ಆಗಬೇಕಿದ್ದ ಕನ್ನಡದ ‘ಡಿಎನ್​ಎ’ (DNA Kannada Movie) ಚಿತ್ರಕ್ಕೂ ಇದೇ ಪರಿಸ್ಥಿತಿ ಬಂದೊದಗಿದೆ. ಮುಂದಿನ ವಾರವಾದರೂ ಸಮಸ್ಯೆ ಪರಿಹರಿಸುವಂತೆ ಕೋರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ (Karnataka Film Chamber of Commerce) ‘ಡಿಎನ್​ಎ’ ತಂಡ ಮನವಿ ಸಲ್ಲಿಸಿದೆ.

ಸದ್ಯದ ಪರಿಸ್ಥಿತಿಯಲ್ಲಿ ಸಿನಿಮಾ ಬಿಡುಗಡೆ ಮಾಡಲು ಎಲ್ಲರೂ ಹಿಂದೇಟು ಹಾಕುತ್ತಿದ್ದಾರೆ. ಹೀಗಿರುವಾಗ ‘ಡಿಎನ್​ಎ’ ತಂಡ ಧೈರ್ಯ ತೋರಿಸಿತ್ತು. ಬಹುನಿರೀಕ್ಷಿತ ‘ಆರ್​ಆರ್​ಆರ್​’ ಚಿತ್ರ ಕೂಡ ಜ.7ರಂದು ರಿಲೀಸ್​ ಮಾಡಲು ಹಿಂದೇಟು ಹಾಕಿದೆ. ಆದರೆ ಅದೇ ದಿನಾಂಕದಲ್ಲಿ ಬಿಡುಗಡೆಯಾಗಲು ‘ಡಿಎನ್​ಎ’ ಸಕಲ ಸಿದ್ಧತೆ ಮಾಡಿಕೊಂಡಿತ್ತು. ಅಷ್ಟರಲ್ಲಿ ವೀಕೆಂಡ್​ ಕರ್ಫ್ಯೂ ಜಾರಿ ಆಯಿತು. ಆ ಒಂದು ನಿಯಮದಿಂದಾಗಿ ‘ಡಿಎನ್​ಎ’ ತಂಡದ ನಿರ್ಧಾರವೇ ಬದಲಾಯಿತು.

ಜನರು ಸಿನಿಮಾಗೆ ಬರುವುದೇ ವೀಕೆಂಡ್​ಗಳಲ್ಲಿ. ಶನಿವಾರ ಮತ್ತು ಭಾನುವಾರ ಕರ್ಫ್ಯೂ ಹೇರಿದರೆ ಎಲ್ಲ ಚಿತ್ರಕ್ಕೆ ದೊಡ್ಡ ನಷ್ಟ ಉಂಟಾಗುತ್ತದೆ. ಹಾಗಾಗಿ ಜ.7ರಂದು ‘ಡಿಎನ್​ಎ’ ಸಿನಿಮಾವನ್ನು ರಿಲೀಸ್​ ಮಾಡದೇ ಇರಲು ನಿರ್ಮಾಪಕ ಎಂ. ಮೈಲಾರಿ ನಿರ್ಧರಿಸಿದ್ದಾರೆ. ಕನಿಷ್ಠ ಮುಂದಿನ ವಾರದೊಳಗಾದರೂ ವೀಕೆಂಡ್​ ಕರ್ಫ್ಯೂ ಸಡಿಲಿಸುವಂತೆ ಸರ್ಕಾರದ ಮನವೊಲಿಸಬೇಕು ಎಂದು ವಾಣಿಜ್ಯ ಮಂಡಳಿಗೆ ‘ಡಿಎನ್​ಎ’ ತಂಡ ಮನವಿ ಸಲ್ಲಿಸಿದೆ. ವೀಕೆಂಡ್​ನಲ್ಲಿ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಸಿಕ್ಕರೆ ಮುಂದಿನ ವಾರವೇ ಚಿತ್ರ ಬಿಡುಗಡೆ ಮಾಡುವ ಬಗ್ಗೆ ಆಲೋಚಿಸುತ್ತಿದ್ದಾರೆ ನಿರ್ಮಾಪಕರು.

ಈ ಚಿತ್ರಕ್ಕೆ ಪ್ರಕಾಶ್​ರಾಜ್​ ಮೇಹು ನಿರ್ದೇಶನ ಮಾಡಿದ್ದಾರೆ. ‘ಜನುಮದ ಜೋಡಿ’ ಸಿನಿಮಾದಿಂದಲೂ ಸಹ-ನಿರ್ದೇಶಕರಾಗಿ ಕೆಲಸ ಮಾಡಿಕೊಂಡು ಬಂದಿರುವ ಅವರು ಇದೇ ಮೊದಲ ಬಾರಿಗೆ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ತಮ್ಮ ಚೊಚ್ಚಲ ಸಿನಿಮಾ ‘ಡಿಎನ್​ಎ’ ಮೂಲಕ ಸದಭಿರುಚಿಯ ಕಥೆಯನ್ನು ಜನರಿಗೆ ತಲುಪಿಸಲು ಪ್ರಯತ್ನ ಮಾಡಿದ್ದಾರೆ. ಅದಕ್ಕೆ ಟ್ರೇಲರ್​ನಲ್ಲಿ ಸಾಕ್ಷಿ ಸಿಕ್ಕಿದೆ. ಆದರೆ ಸದ್ಯಕ್ಕೆ ಚಿತ್ರದ ಬಿಡುಗಡೆಗೆ ಒಮಿಕ್ರಾನ್​ ಅಡ್ಡಿಯಾಗಿದೆ. ಈ ಸಿನಿಮಾದಲ್ಲಿ ಎಸ್ತರ್​ ನರೋನಾ, ರೋಜರ್​ ನಾರಾಯಣ್​, ಅನಿತಾ ಭಟ್​, ಮಾಸ್ಟರ್​ ಆನಂದ್​, ಅಚ್ಯುತ್​ ಕುಮಾರ್​ ಮುಂತಾದ ಕಲಾವಿದರು ನಟಿಸಿದ್ದಾರೆ.

ಇದನ್ನೂ ಓದಿ:

‘ವಿಕ್ರಾಂತ್​ ರೋಣ’ ಪ್ಲ್ಯಾನ್​ನಲ್ಲಿ ದೊಡ್ಡ ಬದಲಾವಣೆ; ಒಟಿಟಿ ಆಫರ್​ ಬೆನ್ನಲ್ಲೇ ಟೀಸರ್​ ರಿಲೀಸ್​ ಮುಂದೂಡಿಕೆ?

‘ರಾಧೆ ಶ್ಯಾಮ್​’ ರಿಲೀಸ್​ ದಿನಾಂಕ ಮುಂದಕ್ಕೆ; ಸಂಕ್ರಾಂತಿ ರೇಸ್​ನಿಂದ ಹಿಂದೆ ಸರಿದ ಪ್ರಭಾಸ್ ಸಿನಿಮಾ

ಗಿಲ್ಲಿ ನನಗೆ ಹೊಡೆದಾಗ ಖುಷಿ ಆಗುತ್ತಿತ್ತು, ಎಂಜಾಯ್ ಮಾಡಿದೆ: ರಕ್ಷಿತಾ
ಗಿಲ್ಲಿ ನನಗೆ ಹೊಡೆದಾಗ ಖುಷಿ ಆಗುತ್ತಿತ್ತು, ಎಂಜಾಯ್ ಮಾಡಿದೆ: ರಕ್ಷಿತಾ
ಆಕಸ್ಮಿಕ ಬೆಂಕಿಗೆ ಹೊತ್ತಿ ಉರಿದ ಶಂಕಿತ ಬಾಂಗ್ಲಾ ವಲಸಿಗರ ಶೆಡ್​ಗಳು
ಆಕಸ್ಮಿಕ ಬೆಂಕಿಗೆ ಹೊತ್ತಿ ಉರಿದ ಶಂಕಿತ ಬಾಂಗ್ಲಾ ವಲಸಿಗರ ಶೆಡ್​ಗಳು
ಬಿಗ್​​ಬಾಸ್​​ಗೆ ಹೋಗಿದ್ದು ಏಕೆ? ಕಾವ್ಯಾ ಕೊಟ್ಟರು ಕಾರಣ
ಬಿಗ್​​ಬಾಸ್​​ಗೆ ಹೋಗಿದ್ದು ಏಕೆ? ಕಾವ್ಯಾ ಕೊಟ್ಟರು ಕಾರಣ
ಬಿಗ್​​ಬಾಸ್ ಬಳಿಕ ರಕ್ಷಿತಾ ಶೆಟ್ಟಿಯ ಮುಂದಿನ ಯೋಜನೆಗಳೇನು?
ಬಿಗ್​​ಬಾಸ್ ಬಳಿಕ ರಕ್ಷಿತಾ ಶೆಟ್ಟಿಯ ಮುಂದಿನ ಯೋಜನೆಗಳೇನು?
ಶಾಲಾ ಬಾಲಕಿಯನ್ನು ಹಿಂಬಾಲಿಸಿ ಮನೆ ಬಾಗಿಲಿಗೆ ಬಂದ ಆಗಂತುಕ!
ಶಾಲಾ ಬಾಲಕಿಯನ್ನು ಹಿಂಬಾಲಿಸಿ ಮನೆ ಬಾಗಿಲಿಗೆ ಬಂದ ಆಗಂತುಕ!
ಗಿಲ್ಲಿ ಬಗ್ಗೆ ಜನರಿಗೆ ಇರುವ ಕ್ರೇಜ್ ನೋಡಿ ಫಸ್ಟ್ ರಿಯಾಕ್ಷನ್ ಕೊಟ್ಟ ಕಾವ್ಯಾ
ಗಿಲ್ಲಿ ಬಗ್ಗೆ ಜನರಿಗೆ ಇರುವ ಕ್ರೇಜ್ ನೋಡಿ ಫಸ್ಟ್ ರಿಯಾಕ್ಷನ್ ಕೊಟ್ಟ ಕಾವ್ಯಾ
ಅಧಿಕಾರ ಬಿಟ್ಟಕೊಡಿ ಎಂದು ಕೇಳೋದು ಕಷ್ಟ: ಸಿಎಂಗೆ ಟಾಂಗ್ ಕೊಟ್ರಾ ಡಿಕೆಸು!
ಅಧಿಕಾರ ಬಿಟ್ಟಕೊಡಿ ಎಂದು ಕೇಳೋದು ಕಷ್ಟ: ಸಿಎಂಗೆ ಟಾಂಗ್ ಕೊಟ್ರಾ ಡಿಕೆಸು!
ನಿತಿನ್ ನಬಿನ್ ನನ್ನ ಬಾಸ್, ನಾನು ಕೇವಲ ಪಕ್ಷದ ಕಾರ್ಯಕರ್ತ: ಪ್ರಧಾನಿ ಮೋದಿ
ನಿತಿನ್ ನಬಿನ್ ನನ್ನ ಬಾಸ್, ನಾನು ಕೇವಲ ಪಕ್ಷದ ಕಾರ್ಯಕರ್ತ: ಪ್ರಧಾನಿ ಮೋದಿ
ಲಕ್ಕುಂಡಿ: ಉತ್ಖನನ ವೇಳೆ ಮನೆಯೊಂದರಲ್ಲಿ ಪುರಾತನ ದೇವಸ್ಥಾನ ಪತ್ತೆ!
ಲಕ್ಕುಂಡಿ: ಉತ್ಖನನ ವೇಳೆ ಮನೆಯೊಂದರಲ್ಲಿ ಪುರಾತನ ದೇವಸ್ಥಾನ ಪತ್ತೆ!
ಶ್ರೀಕೃಷ್ಣಮಠದಲ್ಲಿ ವಸ್ತ್ರಸಂಹಿತೆ ಜಾರಿ: ಇಲ್ಲಿದೆ ಭಕ್ತರಿಗೆ ಕೆಲ ಸೂಚನೆ
ಶ್ರೀಕೃಷ್ಣಮಠದಲ್ಲಿ ವಸ್ತ್ರಸಂಹಿತೆ ಜಾರಿ: ಇಲ್ಲಿದೆ ಭಕ್ತರಿಗೆ ಕೆಲ ಸೂಚನೆ