Ponniyin Selvan: ಚನ್ನಪಟ್ಟಣದ ಬೊಂಬೆ ನೋಡಿ ಖುಷಿ ಪಟ್ಟ ನಟಿ ತ್ರಿಷಾ
Ponniyin Selvan 2: ಪೊನ್ನಿಯಿನ್ ಸೆಲ್ವನ್ 2 ಸಿನಿಮಾದ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ ತ್ರಿಷಾಗೆ ಸಿಕ್ಕಿತು ಚನ್ನಪಟ್ಟಣದ ಬೊಂಬೆ. ಉಡುಗೊರೆ ಕಂಡು ಖುಷಿಯಾದ ತ್ರಿಷಾ
ಮಣಿರತ್ನಂ (Manirathnam) ನಿರ್ದೇಶಿಸಿರುವ ಪೊನ್ನಿಯಿನ್ ಸೆಲ್ವನ್ (Ponniyin Selvan 2) ಸಿನಿಮಾದ ಎರಡನೇ ಭಾಗ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಭಾರಿ ದೊಡ್ಡ ತಾರಾಗಣ ಈ ಸಿನಿಮಾದಲ್ಲಿದ್ದು, ಸಿನಿಮಾದ ಪ್ರಚಾರ ಕಾರ್ಯವನ್ನು ಎಲ್ಲ ಸ್ಟಾರ್ ನಟರು ಒಟ್ಟಿಗೆ ಸೇರಿ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ನಟಿಸಿರುವ ವಿಕ್ರಂ, ಕಾರ್ತಿ, ತ್ರಿಶಾ, ಜಯಂ ರವಿ ಅವರುಗಳು ಬೆಂಗಳೂರಿಗೆ ಬಂದು ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದರು. ಹೀಗೆ ಬಂದ ಅತಿಥಿಗಳಿಗೆ ಚನ್ನಪಟ್ಟಣದ ಬೊಂಬೆಯನ್ನು ಉಡುಗೊರೆಯಾಗಿ ನೀಡಲಾಯಿತು. ತಮಗೆ ನೀಡಲಾದ ಉಡುಗೊರೆ ಕಂಡು ಖುಷಿಯಾದರು ತ್ರಿಷಾ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Apr 22, 2023 10:31 PM
Latest Videos