Ponniyin Selvan: 4 ದಿನಕ್ಕೆ 250 ಕೋಟಿ ರೂಪಾಯಿ ಬಾಚಿದ ‘ಪೊನ್ನಿಯಿನ್​ ಸೆಲ್ವನ್’; ಇದು ಮಣಿರತ್ನಂ ಮ್ಯಾಜಿಕ್

Ponniyin Selvan Box Office Collection: ಪ್ಯಾನ್​ ಇಂಡಿಯಾ ಮಟ್ಟದಲ್ಲಿ ‘ಪೊನ್ನಿಯಿನ್​ ಸೆಲ್ವನ್’ ಸಿನಿಮಾ ರಿಲೀಸ್​ ಆಗಿದೆ. ತಮಿಳಿನ ಜೊತೆಗೆ ಕನ್ನಡ, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಪ್ರದರ್ಶನ ಕಾಣುತ್ತಿದೆ.

Ponniyin Selvan: 4 ದಿನಕ್ಕೆ 250 ಕೋಟಿ ರೂಪಾಯಿ ಬಾಚಿದ ‘ಪೊನ್ನಿಯಿನ್​ ಸೆಲ್ವನ್’; ಇದು ಮಣಿರತ್ನಂ ಮ್ಯಾಜಿಕ್
ಐಶ್ವರ್ಯಾ ರೈ ಬಚ್ಚನ್
Follow us
TV9 Web
| Updated By: ಮದನ್​ ಕುಮಾರ್​

Updated on:Oct 04, 2022 | 1:19 PM

ನಿರ್ದೇಶಕ ಮಣಿರತ್ನಂ (Mani Ratnam) ಅವರು ಮತ್ತೆ ಮ್ಯಾಜಿಕ್​ ಮಾಡಿದ್ದಾರೆ. ಮನಸೆಳೆಯುವ ಪ್ರೇಮಕಥೆಗಳನ್ನು ತೆರೆಗೆ ತರುವಲ್ಲಿ ಫೇಮಸ್​ ಆದ ಅವರು ಈ ಬಾರಿ ಐತಿಹಾಸಿಕ ಕಥಾಹಂದರದ ‘ಪೊನ್ನಿಯಿನ್​ ಸೆಲ್ವನ್​’ (Ponniyin Selvan) ಚಿತ್ರದ ಮೂಲಕ ಜನಮನ ಗೆದ್ದಿದ್ದಾರೆ. ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರ ಭರ್ಜರಿ ಕಮಾಯಿ ಮೂಡುತ್ತಿದೆ. ವಿಶ್ವಾದ್ಯಂತ 4 ದಿನಕ್ಕೆ 250 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿರುವುದು ‘ಪೊನ್ನಿಯಿನ್​ ಸೆಲ್ವನ್​’ ಚಿತ್ರದ ಹೆಚ್ಚುಗಾರಿಕೆ. ಈ ಸಿನಿಮಾ ನೋಡಿದ ಅಭಿಮಾನಿಗಳು ಭೇಷ್​ ಎನ್ನುತ್ತಿದ್ದಾರೆ. ಅಂತಿಮವಾಗಿ ಬಾಕ್ಸ್​ ಆಫೀಸ್​ ಕಲೆಕ್ಷನ್​ (Ponniyin Selvan Collection) ಎಷ್ಟಾಗಲಿದೆ ಎಂಬುದನ್ನು ತಿಳಿಯುವ ಕುತೂಹಲ ನಿರ್ಮಾಣ ಆಗಿದೆ.

ಹಲವು ಕಾರಣಗಳಿಂದಾಗಿ ಪ್ರೇಕ್ಷಕರು ‘ಪೊನ್ನಿಯಿನ್​ ಸೆಲ್ವನ್​’ ಸಿನಿಮಾ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದರು. ಆ ನಿರೀಕ್ಷೆಯ ಮಟ್ಟವನ್ನು ತಲುಪುವಲ್ಲಿ ಈ ಚಿತ್ರ ಯಶಸ್ವಿ ಆಗಿದೆ. ಸಿನಿಮಾ ನೋಡಿದ ಎಲ್ಲರೂ ಪಾಸಿಟಿವ್​ ಆಗಿ ಪ್ರತಿಕ್ರಿಯಿಸಿದ್ದಾರೆ. ಇದರಿಂದ ಚಿತ್ರಕ್ಕೆ ಉತ್ತಮವಾಗಿ ಬಾಯಿ ಮಾತಿನ ಪ್ರಚಾರ ಸಿಕ್ಕಿದೆ. ದಸರಾ ಹಬ್ಬದ ರಜಾ ದಿನಗಳು ಹಾಗೂ ವೀಕೆಂಡ್​ ಕೂಡ ಪಸ್ಲ್​ ಪಾಯಿಂಟ್​ ಆಗಿದೆ. ಈ ಎಲ್ಲ ಕಾರಣದಿಂದ ‘ಪೊನ್ನಿಯಿನ್​ ಸೆಲ್ವನ್​’ ಚಿತ್ರ ಜಯಭೇರಿ ಬಾರಿಸಿದೆ.

ಇದನ್ನೂ ಓದಿ
Image
Ponniyin Selvan: ಘಟಾನುಘಟಿಗಳ ‘ಪೊನ್ನಿಯಿನ್​ ಸೆಲ್ವನ್​’ ರಿಲೀಸ್​; ಹೇಗಿದೆ ಪ್ರೇಕ್ಷಕರ ಟ್ವಿಟರ್​ ವಿಮರ್ಶೆ?
Image
Aishwarya Rai: ವೇದಿಕೆ ಮೇಲೆ ಗುರು ಮಣಿರತ್ನಂ ಕಾಲಿಗೆ ನಮಸ್ಕಾರ ಮಾಡಿದ ಐಶ್ವರ್ಯಾ ರೈ​; ವಿಡಿಯೋ ವೈರಲ್​
Image
Ponniyin Selvan: 125 ಕೋಟಿ ರೂಪಾಯಿಗೆ ‘ಪೊನ್ನಿಯಿನ್​ ಸೆಲ್ವನ್​’ ಒಟಿಟಿ ಹಕ್ಕು ಮಾರಾಟ; ಮಣಿರತ್ನಂ ಚಿತ್ರಕ್ಕೆ ಭಾರಿ ಬಿಸ್ನೆಸ್​
Image
Ponniyin Selvan: ಮಣಿರತ್ನಂ ಚಿತ್ರದ ಆಫರ್​ ರಿಜೆಕ್ಟ್​ ಮಾಡಿದ್ದೇಕೆ ‘ಹೆಬ್ಬುಲಿ’ ನಟಿ ಅಮಲಾ ಪೌಲ್​?

ಈ ಸಿನಿಮಾದಲ್ಲಿ ಬಹುತಾರಾಗಣ ಇದೆ. ಐಶ್ವರ್ಯಾ ರೈ ಬಚ್ಚನ್​, ಚಿಯಾನ್​ ವಿಕ್ರಮ್​, ಕಾರ್ತಿ, ಜಯಂ ರವಿ, ತ್ರಿಶಾ​, ಪ್ರಕಾಶ್​ ರಾಜ್​ ಮುಂತಾದವರು ನಟಿಸಿರುವ ಕಾರಣ ಸಿನಿಮಾದ ಮೆರುಗು ಹೆಚ್ಚಿದೆ. ಚೋಳರ ಕಥೆಯನ್ನು ದೊಡ್ಡ ಪರದೆಯಲ್ಲಿ ನೋಡಿ ಪ್ರೇಕ್ಷಕರು ಥ್ರಿಲ್​ ಆಗಿದ್ದಾರೆ. ಇಂದಿಗೂ ಅನೇಕ ಕಡೆಗಳಲ್ಲಿ ಈ ಚಿತ್ರ ಹೌ​ಸ್​ಫುಲ್​ ಪ್ರದರ್ಶನ ಕಾಣುತ್ತಿದೆ.

ಟ್ರೇಡ್​ ಅನಲಿಸ್ಟ್​ ರಮೇಶ್​ ಬಾಲಾ ಅವರು ‘ಪೊನ್ನಿಯಿನ್​ ಸೆಲ್ವನ್​’ ಸಿನಿಮಾದ ಕಲೆಕ್ಷನ್​ ಬಗ್ಗೆ ಟ್ವೀಟ್​ ಮಾಡಿದ್ದಾರೆ. ವಿಶ್ವಾದ್ಯಂತ 4 ದಿನದಲ್ಲಿ ಈ ಸಿನಿಮಾ 250 ಕೋಟಿ ರೂಪಾಯಿ ಗಳಿಸಿದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ. ತಮಿಳಿನ ಈ ಸಿನಿಮಾ ತಮಿಳುನಾಡು ಪಾತ್ರವಲ್ಲದೇ ಬೇರೆ ರಾಜ್ಯಗಳಲ್ಲೂ ಉತ್ತಮ ಕಲೆಕ್ಷನ್​ ಮಾಡುತ್ತಿದೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ರಿಲೀಸ್​ ಆಗಿದ್ದು, ತಮಿಳಿನ ಜೊತೆಗೆ ಕನ್ನಡ, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಈ ಚಿತ್ರ ತೆರೆಕಂಡಿದೆ.

‘ಪೊನ್ನಿಯಿನ್​ ಸೆಲ್ವನ್​’ ಚಿತ್ರದ ಮೂಲಕ ಐಶ್ವರ್ಯಾ ರೈ ಬಚ್ಚನ್​ ಅವರು ಕಾಲಿವುಡ್​ಗೆ ಕಮ್​ಬ್ಯಾಕ್​ ಮಾಡಿದ್ದಾರೆ. ಬ್ಲಾಕ್​ ಬಸ್ಟರ್​ ಮೂಲಕ ಅವರು ರೀ-ಎಂಟ್ರಿ ನೀಡಿರುವುದು ತಮಿಳುನಾಡಿನಲ್ಲಿರುವ ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ವಿಮರ್ಶಕರು ಐಶ್ವರ್ಯಾ ನಟನೆಗೆ ಮೆಚ್ಚುಗೆ ಸೂಚಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 1:19 pm, Tue, 4 October 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್