ವಿವಾದಿತ ಮೈಸೂರು ಬಸ್ ನಿಲ್ದಾಣದ ಸ್ವರೂಪ ರಾತ್ರೋರಾತ್ರಿ ಬದಲು, ಗುಂಬಜ್ ಗಳ ಬಣ್ಣ ಬದಲಾವಣೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 16, 2022 | 10:52 AM

ಬಸ್ ಶೆಲ್ಟರ್ ಸ್ವರೂಪ ಬದಲಾಯಿಸುವಂತೆ ಸಂಸದ ಪ್ರತಾಪ್ ಸಿಂಹ ಹೇಳಿಕೆಗಳನ್ನು ನೀಡಿದ್ದರು ಆದರೆ ಅವರ ಪಕ್ಷದ ಶಾಸಕರೇ ಆಗಿರುವ ಎಸ್ ಎ ರಾಮದಾಸ್ ಸ್ವರೂಪವನ್ನು ಸಮರ್ಥಿಸಿಕೊಂಡಿದ್ದರು.

ಮೈಸೂರು-ಊಟಿ ರಸ್ತೆಯಲ್ಲಿರುವ ಬಸ್ ನಿಲ್ದಾಣದ (Bus Shelter) ಸ್ವರೂಪ ರಾತ್ರೋರಾತ್ರಿ ಬದಲಾಗಿದೆ. ಬಸ್ ಶೆಲ್ಟರ್ ಮಸೀದಿ ಮಾದರಿಯಲ್ಲಿ ನಿರ್ಮಿಸಲಾಗಿದೆ ಇದರ ಸ್ವರೂಪ ಬದಲಾಯಿಸುವಂತೆ ಸಂಸದ ಪ್ರತಾಪ್ ಸಿಂಹ (Pratap Simha) ಹೇಳಿಕೆಗಳನ್ನು ನೀಡಿದ್ದರು ಆದರೆ ಅವರ ಪಕ್ಷದ ಶಾಸಕರೇ ಆಗಿರುವ ಎಸ್ ಎ ರಾಮದಾಸ್ (SA Ramadas) ನಿರ್ಮಾಣದ ಸ್ವರೂಪವನ್ನು ಸಮರ್ಥಿಸಿಕೊಂಡಿದ್ದರು. ಕಳೆದ ರಾತ್ರಿ ಬಸ್ ನಿಲ್ದಾಣಕ್ಕೆ ಜೆ ಎಸ್ ಎಸ್ ಕಾಲೇಜು ಬಸ್ ನಿಲ್ದಾಣ ಅಂತ ಹೇಳುವ ಫಲಕ ಮತ್ತು ಅದರ ಮೇಲೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜೆ ಎಸ್ ಎಸ್ ಮಠದ ಮೂಲ ಮಠಾಧಿಪತಿಗಳಾಗಿದ್ದ ಶ್ರೀ ರಾಜೇಂದ್ರ ಶಿವಯೋಗಿ ಮತ್ತು ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ ಫೋಟೋಗಳನ್ನು ಹಾಕಲಾಗಿದೆ. ಶೆಲ್ಟರ್ ಸ್ವರೂಪ ಬದಲಾವಣೆ ಬಗ್ಗೆ ಟಿವಿ9 ಕನ್ನಡ ವಾಹಿನಿಯ ಮೈಸೂರು ವರದಿಗಾರ ರಾಮ್ ಸಮಗ್ರ ವಿವರಣೆಯನ್ನು ನೀಡಿದ್ದಾರೆ.