ಕುರ್ಚಿ ಕದನಕ್ಕೆ ಸ್ಫೋಟಕ ತಿರುವು:ವೈಲೆಂಟ್ ಆಗಿದ್ದ ಡಿಕೆಶಿ ಏಕಾಏಕಿ ಸಿದ್ದರಾಮಯ್ಯ ಬಗ್ಗೆ ಸೈಲೆಂಟ್ ಮಾತು

Updated on: Nov 24, 2025 | 7:34 PM

ಎರಡ್ಮೂರು ದಿನಗಳಿಂದ ಸಿಎಂ ಬಗ್ಗೆ ಮಾರ್ಮಿಕವಾಗಿ ಮಾತನಾಡುತ್ತ ಬಂದಿದ್ದ ಡಿಸಿಎಂ ಡಿಕೆ ಶಿವಕುಮಾರ್ ಇದೀಗ ಏಕಾಏಕಿ ವರಸೆ ಬದಲಿಸಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ಟಾಂಗ್ ಕೊಡುವ ರೀತಿಯಲ್ಲೇ ಮಾತನಾಡುತ್ತಿದ್ದ ಡಿಕೆಶಿ, ಈಗ ಸಿದ್ದರಾಮಯ್ಯ ಮಾರ್ಗದರ್ಶನದಲ್ಲಿ ಕೆಲಸ ಮಾಡ್ತೀವಿ, ಅವರು ಪಕ್ಷಕ್ಕೆ ದೊಡ್ಡ ಆಸ್ತಿ ಎಂದು ಸಾಫ್ಟ್​ ಹೇಳಿಕೆ ನೀಡಿದ್ದು, ಅಚ್ಚರಿಗೆ ಕಾರಣವಾಗಿದೆ. ದಿಢೀರ್ ಡಿಕೆಶಿ ಸಾಫ್ಟ್​ ಆಗಿದ್ಯಾಕೆ ಎನ್ನುವ ಕುತೂಹಲ ಮೂಡಿಸಿದೆ.

ಬೆಂಗಳೂರು, (ನವೆಂಬರ್ 24): ಕಳೆದ ಮೂರ್ನಾಲ್ಕು ದಿನದಿಂದ ರಾಜ್ಯ ಕಾಂಗ್ರೆಸ್​​ನ ಪಟ್ಟದ ಆಟ ರಂಗೇರುತ್ತಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಕಂಡು ಕಾಣದಂತೆ ತಂತ್ರ ಹೆಣೆಯುತ್ತಿದ್ದಾರೆ. ಈ ನಡುವೆ ಕನಕಪುರ ಬಂಡೆ ಬೆಂಬಲಿಗರು ಯಥಾ ಪ್ರಕಾರ, ದೆಹಲಿ ದಂಡಯಾತ್ರೆ ಮುಂದುವರೆಸಿದ್ದಾರೆ. ಡಿಕೆಯ ಎರಡನೇ ಬಣ ಇಂದು ರಾಷ್ಟ್ರ ರಾಜಕಾರಣದ ಹೆಡ್ ಕ್ವಾಟ್ರಸ್​ನಲ್ಲಿ ತಮ್ಮ ನಾಯಕನ ಪರ ದಾಳ ಉರುಳಿಸಿದ್ದಾರೆ. ಹೀಗಾಗಿ ಕರ್ನಾಟಕ ಕಾಂಗ್ರೆಸ್​​ನಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಬಣ ಬಡಿದಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಎರಡ್ಮೂರು ದಿನಗಳಿಂದ ಸಿಎಂ ಬಗ್ಗೆ ಮಾರ್ಮಿಕವಾಗಿ ಮಾತನಾಡುತ್ತ ಬಂದಿದ್ದ ಡಿಸಿಎಂ ಡಿಕೆ ಶಿವಕುಮಾರ್ ಇದೀಗ ಏಕಾಏಕಿ ವರಸೆ ಬದಲಿಸಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ಟಾಂಗ್ ಕೊಡುವ ರೀತಿಯಲ್ಲೇ ಮಾತನಾಡುತ್ತಿದ್ದ ಡಿಕೆಶಿ, ಈಗ ಸಿದ್ದರಾಮಯ್ಯ ಮಾರ್ಗದರ್ಶನದಲ್ಲಿ ಕೆಲಸ ಮಾಡ್ತೀವಿ, ಅವರು ಪಕ್ಷಕ್ಕೆ ದೊಡ್ಡ ಆಸ್ತಿ ಎಂದು ಸಾಫ್ಟ್​ ಹೇಳಿಕೆ ನೀಡಿದ್ದು, ಅಚ್ಚರಿಗೆ ಕಾರಣವಾಗಿದೆ. ದಿಢೀರ್ ಡಿಕೆಶಿ ಸಾಫ್ಟ್​ ಆಗಿದ್ಯಾಕೆ ಎನ್ನುವ ಕುತೂಹಲ ಮೂಡಿಸಿದೆ.

Loading...
Unable to load recommendations.
Follow Us