ಪ್ರಭುದೇವ ಅಜ್ಜಿ ನಿಧನ; ಅಂತಿಮ ದರ್ಶನಕ್ಕಾಗಿ ಮೈಸೂರಿಗೆ ಬಂದ ನಟ
ಪ್ರಭುದೇವ ಹಾಗೂ ಶಿವಣ್ಣ ನಟನೆಯ ‘ಕರಟಕ ದಮನಕ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಯಿತು. ಈ ಚಿತ್ರವನ್ನು ಯೋಗರಾಜ್ ಭಟ್ ನಿರ್ದೇಶನ ಮಾಡಿದ್ದಾರೆ. ಈಗ ಅವರು ಮೈಸೂರಿಗೆ ಬಂದಿದ್ದಾರೆ. ಇದಕ್ಕೆ ಕಾರಣ ಆಗಿರೋದು ಅವರ ಅಜ್ಜಿಯ ಸಾವು. ಅವರ ಅಂತಿಮ ದರ್ಶನ ಪಡೆಯಲು ಮೈಸೂರಿಗೆ ಬಂದಿದ್ದಾರೆ.
ನಟ, ನಿರ್ದೇಶಕ, ಡ್ಯಾನ್ಸ್ ಕೊರಿಯೋಗ್ರಾಫರ್ ಪ್ರಭುದೇವ ಅವರ ಅಜ್ಜಿ ಪುಟ್ಟಮ್ಮಣ್ಣಿ ನಿಧನ ಹೊಂದಿದ್ದಾರೆ. ಅಜ್ಜಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಇಂದು (ಜುಲೈ10) ಮೈಸೂರಿಗೆ ಪ್ರಭುದೇವ ಆಗಮಿಸಿದ್ದಾರೆ. ಈ ವೇಳೆ ಅವರ ಸಹೋದರ ನಾಗೇಂದ್ರ ಕೂಡ ಇದ್ದರು. ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಆ ಬಳಿಕ ಅಜ್ಜಿ ಇದ್ದ ದೂರ ಗ್ರಾಮದತ್ತ ತೆರಳಿದರು ಪ್ರಭುದೇವ. ಇಂದು ಸಂಜೆ ದೂರ ಗ್ರಾಮದಲ್ಲಿ ಪುಟ್ಟಮ್ಮಣ್ಣಿಯವರ ಅಂತ್ಯಕ್ರಿಯೆ ನಡೆಯಲಿದೆ. ಪ್ರಭುದೇವ ಹಾಗೂ ಶಿವಣ್ಣ ನಟನೆಯ ‘ಕರಟಕ ದಮನಕ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಯಿತು. ಈ ಚಿತ್ರವನ್ನು ಯೋಗರಾಜ್ ಭಟ್ ನಿರ್ದೇಶನ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.