ನಿಮ್ಮಪ್ಪನಿಗೂ, ನಮ್ಮಪ್ಪನಿಗೂ ಕಾನೂನು ಒಂದೇ, ಛಲವಾದಿ ನಾರಾಯಣಸ್ವಾಮಿಗೆ ಟಾಂಗ್ ನೀಡಿದ ಪ್ರದೀಪ್ ಈಶ್ವರ್
ಛಲವಾದಿ ನಾರಾಯಣಸ್ವಾಮಿ ಸುದೀಪ್ ಟಾರ್ಗೆಟ್ ಆರೋಪಕ್ಕೆ ಪ್ರದೀಪ್ ಈಶ್ವರ್ ಟಾಂಗ್ ನೀಡಿದ್ದಾರೆ. ಸುದೀಪ್ ಕನ್ನಡ ಚಿತ್ರರಂಗದ ಹೆಮ್ಮೆ, ಕಾನೂನು ಎಲ್ಲರಿಗೂ ಸಮಾನ. ಬಿಗ್ ಬಾಸ್ ವಿಚಾರದಲ್ಲಿ ಡಿ.ಕೆ. ಶಿವಕುಮಾರ್ ಸಮಸ್ಯೆ ಬಗೆಹರಿಸಿದ್ದಾರೆ. ಬಿಜೆಪಿ ಲಿಂಗಾಯತರು, ಹಿಂದುಳಿದವರು, ಅಲ್ಪಸಂಖ್ಯಾತರನ್ನು ಗುರಿಯಾಗಿಸುತ್ತಿದೆ ಎಂದು ಪ್ರದೀಪ್ ಈಶ್ವರ್ ಆರೋಪಿಸಿದ್ದಾರೆ.

ಬೆಂಗಳೂರು, ಅ.9: ನಟ ಸುದೀಪ್ ಅವರನ್ನು ರಾಜ್ಯ ಸರ್ಕಾರ ಗುರಿಯಾಗಿಸಿಕೊಂಡಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾಡಿದ್ದ ಆರೋಪಕ್ಕೆ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಛಲವಾದಿ ನಾರಾಯಣಸ್ವಾಮಿ ಅವರ ಹೇಳಿಕೆಯನ್ನು ತಳ್ಳಿಹಾಕಿದ ಪ್ರದೀಪ್ ಈಶ್ವರ್, ಸುದೀಪ್ ಅವರನ್ನು ಗೌರವಿಸುವವರು ಮತ್ತು ಅಭಿಮಾನಿಸುವವರು ನಾವು. ಸುದೀಪ್ ಅವರು ಕನ್ನಡ ಚಿತ್ರರಂಗದ ಕೀರ್ತಿಯನ್ನು ಪ್ಯಾನ್ ಇಂಡಿಯಾ ಮಟ್ಟಕ್ಕೆ ಕೊಂಡೊಯ್ದ ನಟ ಎಂದು ಹೇಳಿದ್ದಾರೆ.
ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಉಂಟಾಗಿದ್ದ ಸಮಸ್ಯೆ ಸಂವಹನದ ಕೊರತೆಯಿಂದ ಆಗಿತ್ತು. ಈ ಸಮಸ್ಯೆಯನ್ನು ಡಿ.ಕೆ. ಶಿವಕುಮಾರ್ ಅವರು ಪರಿಹರಿಸಿದ್ದಾರೆ, ಮತ್ತು ಈಗ ಕಾರ್ಯಕ್ರಮ ಪುನರಾರಂಭವಾಗಿದೆ. ಸರ್ಕಾರ ಸುದೀಪ್ ಅಥವಾ ಬಿಗ್ ಬಾಸ್ ಅನ್ನು ಯಾಕೆ ಈ ವಿಚಾರದಲ್ಲಿ ಗುರಿ ಮಾಡುತ್ತದೆ. ಪರಿಸರ ಇಲಾಖೆಯ ಅನುಮತಿ ಇರದ ಕಾರಣ ನೋಟಿಸ್ ನೀಡಲಾಗಿತ್ತು. ಆ ಕಾರಣಕ್ಕೆ ಕ್ರಮ ಕೈಗೊಳ್ಳಲಾಗಿತ್ತು. ಸರ್ಕಾರದ ಗಮನಕ್ಕೆ ಬಂದ ಕೂಡಲೇ ಅವಶ್ಯಕ ಅನುಮತಿಯನ್ನು ಒದಗಿಸಿ, ಕಾರ್ಯಕ್ರಮ ಮುಂದುವರಿಸಲು ಅವಕಾಶ ನೀಡಲಾಗಿದೆ. ಕಾನೂನು ಎಲ್ಲರಿಗೂ ಸಮಾನವಾಗಿದ್ದು, ಬಿಗ್ ಬಾಸ್‌ಗೆ ಪ್ರತ್ಯೇಕ ಕಾನೂನು ಇರುವುದಿಲ್ಲ. ನಾವು ಕನ್ನಡ ಚಿತ್ರರಂಗ ಮತ್ತು ಸುದೀಪ್ ಅವರ ಪರ ಇದ್ದೇವೆ.
ಇದನ್ನೂ ಓದಿ: ಖಾಸಗಿ ಸ್ಥಳದಲ್ಲಿ ಕೆಲ ಸಚಿವರ ಸಭೆ: ಕುತೂಹಲ ಮೂಡಿಸಿದ ‘ಕೈ’ ನಾಯಕರ ನಡೆ
ಇಲ್ಲಿದೆ ನೋಡಿ ವಿಡಿಯೋ:
ಮನರಂಜನಾ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುತ್ತೇವೆ ಎಂದು ಹೇಳಿದರು. ಇನ್ನು ಈ ಸಂದರ್ಭದಲ್ಲಿ ಪ್ರದೀಪ್ ಈಶ್ವರ್ ಅವರು ಬಿಜೆಪಿಯ ವಿರುದ್ಧವೂ ವಾಗ್ದಾಳಿ ನಡೆಸಿದರು. ಬಿಜೆಪಿ ಲಿಂಗಾಯತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರನ್ನು ಗುರಿಯಾಗಿಸುತ್ತಿದೆ. ಬಿ.ಎಸ್. ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಇಳಿಸಿದಾಗ ಮತ್ತು ಯತ್ನಾಳ್ ಅವರನ್ನು ಅಮಾನತುಗೊಳಿಸಿದಾಗ ಛಲವಾದಿ ನಾರಾಯಣಸ್ವಾಮಿ ಎಲ್ಲಿದ್ದರು. ಬಿಜೆಪಿ ಎಲ್ಲಾ ಸಮುದಾಯಗಳನ್ನು ಗುರಿಯಾಗಿಸುತ್ತಿದೆ ಅನಗತ್ಯವಾಗಿ ವಿಷಯಗಳನ್ನು ಸೃಷ್ಟಿಸಿ ಮಾತನಾಡುವುದನ್ನು ನಿಲ್ಲಿಸುವಂತೆ ಛಲವಾದಿ ನಾರಾಯಣಸ್ವಾಮಿಗೆ ಟಾಂಗ್ ನೀಡಿದ್ದಾರೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:58 pm, Thu, 9 October 25




