ಯೋಗೇಶ್ವರ್ ಗೆದ್ದರೆ ಶಿವಕುಮಾರ್ ಮತ್ತೊಂದು ಹಂತಕ್ಕೆ ಹೋಗ್ತಾರೆ ಎಂದ ಪ್ರದೀಪ್ ಈಶ್ವರ್

|

Updated on: Nov 02, 2024 | 5:00 PM

ಯೋಗೇಶ್ವರ್ ಗೆದ್ದರೆ ಡಿಕೆ ಶಿವಕುಮಾರ್ ಮತ್ತೊಂದು ಹಂತಕ್ಕೆ ಹೋಗುತ್ತಾರೆ ಎಂದು ಪ್ರದೀಪ್ ಈಶ್ವರ್ ಹೇಳುತ್ತಾರೆ. ಅವರ ಮಾತಿನ ಅರ್ಥವೇನು ಅಂತ ಕನ್ನಡಿಗರಿಗೆ ಅರ್ಥವಾಗಲಿಲ್ಲ. ಶಿವಕುಮಾರ್​ಗೆ ಮತ್ತೊಂದು ಹಂತವೆಂದರೆ ಮುಖ್ಯಮಂತ್ರಿಯ ಸ್ಥಾನ. ಪ್ರದೀಪ್ ಈಶ್ವರ್ ಅದನ್ನೇ ಬಯಸುತ್ತಾರೆಯೇ?

ರಾಮನಗರ: ಚನ್ನಪಟ್ಟಣ ಕ್ಷೇತ್ರದಲ್ಲಿ ಇಂದು ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಪರ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಸಿನಿಮೀಯ ಶೈಲಿಯಲ್ಲಿ ಮತ ಯಾಚಿಸಿದರು. ಸಿದ್ದರಾಮಯ್ಯ ಸರ್ಕಾರ ಅನುಷ್ಠಾನಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳನ್ನು ನೆರೆದಿದ್ದ ಜನರಿಗೆ ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಜ್ಞಾಪಿಸಿದ ಅವರು ಕೃತಜ್ಞತೆಯ ರೂಪವಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯೋಗೇಶ್ವರ್ ಗೆ ವೋಟು ನೀಡಿ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಮೊದಲು ಕುಮಾರಸ್ವಾಮಿ ರಾಜೀನಾಮೆ ಕೊಡಲಿ ಎಂದ ಪ್ರದೀಪ್ ಈಶ್ವರ್