‘ಕೇಕ್ ಹಾಗೂ ಹಾರ ತರಬೇಡಿ’; ಬರ್ತ್ಡೇ ಆಚರಣೆಗೆ ಪ್ರಜ್ವಲ್ ದೇವರಾಜ್ ವಿಶೇಷ ಮನವಿ
ಜುಲೈ 4ರಂದು ಪ್ರಜ್ವಲ್ ಜನ್ಮದಿನ. ಈ ಬಾರಿಯ ಜನ್ಮದಿನವನ್ನು ಫ್ಯಾನ್ಸ್ ಜೊತೆ ಆಚರಿಸಿಕೊಳ್ಳುತ್ತಿದ್ದಾರೆ. ಈ ವೇಳೆ ಅವರು ಅಭಿಮಾನಿಗಳ ಬಳಿ ವಿಶೇಷ ಮನವಿ ಮಾಡಿಕೊಂಡಿದ್ದಾರೆ.
ನೆಚ್ಚಿನ ನಟನ ಬರ್ತ್ಡೇನ ಆಚರಿಸಬೇಕು ಎನ್ನುವ ಕನಸು ಅಭಿಮಾನಿಗಳಿಗೆ ಇರುತ್ತದೆ. ಈಗ ಇಂಥ ಅವಕಾಶವನ್ನು ಮಾಡಿಕೊಡುತ್ತಿದ್ದಾರೆ ಪ್ರಜ್ವಲ್ ದೇವರಾಜ್ (Prajwal Devaraj). ಅವರು ಹಲವು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಜುಲೈ 4ರಂದು ಅವರ ಜನ್ಮದಿನ. ಈ ಬಾರಿಯ ಜನ್ಮದಿನವನ್ನು ಫ್ಯಾನ್ಸ್ ಜೊತೆ ಆಚರಿಸಿಕೊಳ್ಳುತ್ತಿದ್ದಾರೆ. ‘ಕಳೆದ ಐದು ವರ್ಷಗಳಿಂದ ಹುಟ್ಟುಹಬ್ಬದ ದಿನ ನಿಮ್ಮನ್ನು ಭೇಟಿ ಆಗೋಕೆ ಆಗಿಲ್ಲ. ಈ ವರ್ಷ ಜುಲೈ 4ರಂದು ನಿಮ್ಮನ್ನು ಭೇಟಿ ಮಾಡುತ್ತಿದ್ದೇನೆ. ಕೇಕ್, ಹಾರ ತರಬೇಡಿ. ಆ ಹಣವನ್ನು ಒಳ್ಳೆಯ ಕೆಲಸಕ್ಕೆ ಬಳಸಿ’ ಎಂದು ಪ್ರಜ್ವಲ್ ಕೋರಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos