ಪ್ರಜ್ವಲ್ ಪ್ರಕರಣದಲ್ಲಿ ಡಿಕೆಶಿ ಹೆಸರು: ಗೃಹಸಚಿವ ಜಿ ಪರಮೇಶ್ವರ್ ಹೇಳಿದ್ದಿದು
Prajwal Revanna scandal, Home Minister G Parameshwar Reaction: ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ತನಿಖೆ ನಡೆಸುತ್ತಿರುವ ಎಸ್ಐಟಿ ತಂಡವನ್ನು ಸಿದ್ದರಾಮಯ್ಯ ಇನ್ವೆಸ್ಟಿಗೇಟಿಂಗ್ ಟೀಮ್, ಶಿವಕುಮಾರ್ ಇನ್ವೆಸ್ಟಿಗೇಟಿಂಗ್ ಟೀಮ್ ಎಂದು ಕರೆದಿದ್ದ ಕುಮಾರಸ್ವಾಮಿ ಅಭಿಪ್ರಾಯವನ್ನು ಗೃಹ ಸಚಿವ ಜಿ ಪರಮೇಶ್ವರ್ ಅಲ್ಲಗಳೆದಿದ್ದಾರೆ. ಸರ್ಕಾರ ಇಂಥ ಘಟನೆಯನ್ನು ಲಘುವಾಗಿ ತೆಗೆದುಕೊಳ್ಳುವುದಿಲ್ಲ. ಕುಮಾರಸ್ವಾಮಿ ಅವರಿಗೂ ಇದು ಗೊತ್ತಿದೆ. ತನಿಖೆ ಬಗ್ಗೆ ಅನುಮಾನ ಪಡುವುದು ಬೇಡ. ಎಸ್ಐಟಿ ಮೇಲೆ ವಿಶ್ವಾಸ ಇರಲಿ. ಮೊದಲು ಎಸ್ಐಟಿ ತನಿಖೆ ಆಗಲಿ. ಸತ್ಯಾಂಶ ಹೊರಬರಲಿ. ಆ ಬಳಿಕ ಚರ್ಚೆಯಾಗಲಿ ಎಂದು ಗೃಹ ಸಚಿವರು ಹೇಳಿದ್ದಾರೆ.
ಬೆಂಗಳೂರು, ಮೇ 7: ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣವನ್ನು (Prajwal Revanna sex scandal) ತನಿಖೆ ನಡೆಸುತ್ತಿರುವ ಎಸ್ಐಟಿ ತಂಡದ ಬಗ್ಗೆ ವಿಶ್ವಾಸ ಇರಲಿ ಎಂದು ರಾಜ್ಯ ಸರ್ಕಾರದ ಗೃಹ ಸಚಿವ ಜಿ ಪರಮೇಶ್ವರ್ (G Parameshwar) ಮನವಿ ಮಾಡಿದ್ದಾರೆ. ದೇವರಾಜೇಗೌಡರು ಕೊಟ್ಟಿರುವ ದೂರಿನಲ್ಲಿ ಡಿಕೆ ಶಿವಕುಮಾರ್ ಹೆಸರು ಇರುವ ಪ್ಯಾರಾವನ್ನು ಡಿಲೀಟ್ ಮಾಡಬೇಕೆಂದಿದ್ದ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಈ ಎಲ್ಲಾ ವಿಚಾರವನ್ನು ಎಸ್ಐಟಿಯವರು ಗಮನಿಸಿ ತನಿಖೆ ನಡೆಸುತ್ತಾರೆ ಎಂದು ಸಮಜಾಯಿಷಿ ನೀಡಿದ್ಧಾರೆ. ಪೆನ್ ಡ್ರೈವ್ ಕೇಸ್ನಲ್ಲಿ ಡಿಕೆಶಿ ಪಾತ್ರ ಇದೆ ಎನ್ನುವ ಆರೋಪದ ಬಗ್ಗೆಯೂ ಪರಮೇಶ್ವರ್ ಅವರು ಎಸ್ಐಟಿ ತನಿಖೆಯತ್ತಲೇ ಬೊಟ್ಟು ಮಾಡಿದ್ದಾರೆ.
ಸಿಬಿಐ ತನಿಖೆಗೆ ಆಗ್ರಹಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಗೃಹಸಚಿವರು, ಎಸ್ಐಟಿಯಂತಹ ಕಾನೂನಾತ್ಮಕ ಸಂಸ್ಥೆ ಮೇಲೆ ಅನುಮಾನ ಪಟ್ಟರೆ ಹೇಗೆ? ಎಸ್ಐಟಿಯಿಂದ ಮೊದಲು ತನಿಖೆ ಆಗಲಿ. ಸತ್ಯಾಂಶ ಹೊರಬರಲಿ. ಅದು ಪಬ್ಲಿಕ್ ಡೊಮೈನ್ಗೆ ಬಂದ ಬಳಿಕ ಚರ್ಚೆಯಾಗಲಿ ಎಂದಿದ್ದಾರೆ.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣಗೆ ಮತ್ತಷ್ಟು ಸಂಕಷ್ಟ: 196 ರಾಷ್ಟ್ರಗಳಿಗೆ ಮಾಹಿತಿ ರವಾನಿಸಿದ ಇಂಟರ್ ಪೋಲ್
ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದವರು. ತನಿಖೆ ಹೇಗೆ ನಡೆಯುತ್ತೆ ಎಂದು ಅವರಿಗೆ ಗೊತ್ತಿದೆ. ಇಲ್ಲಿ ಯಾವುದನ್ನೂ ಮುಚ್ಚಿಡಲು ಆಗುವುದಿಲ್ಲ ಎಂದೂ ಜಿ ಪರಮೇಶ್ವರ್ ಹೇಳಿದ್ದಾರೆ. ಕುಮಾರಸ್ವಾಮಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ಎಸ್ಐಟಿಯನ್ನು ಸಿದ್ದರಾಮಯ್ಯ ಇನ್ವೆಸ್ಟಿಗೇಟಿಂಗ್ ಟೀಮ್ ಮತ್ತು ಶಿವಕುಮಾರ್ ಇನ್ವೆಸ್ಟಿಗೇಟಿಂಗ್ ಟೀಮ್ ಎಂದು ಕರೆದಿದ್ದರು.
ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ