ಕಳಂಕಿತ ಪ್ರಜ್ವಲ್ ರೇವಣ್ಣನನ್ನು ಹುಡುಕಿಕೊಟ್ಟವರಿಗೆ 1 ಲಕ್ಷ ಬಹುಮಾನ ಎಂದ ಜನತಾ ಪಕ್ಷ! ಮುಂದೇನಾಯ್ತು ನೋಡಿ

|

Updated on: May 11, 2024 | 12:39 PM

Prajwal Revanna Video Case: ಪ್ರಕರಣದ ಎರಡನೆಯ ಆರೋಪಿ ಪ್ರಜ್ವಲನನ್ನು ಹುಡುಕುವಲ್ಲಿ ಕೇಂದ್ರ, ರಾಜ್ಯ ಸರ್ಕಾರ ವಿಫಲವಾಗಿದೆ. ಹಾಗಾಗಿ ಆತನನ್ನು ಹುಡುಕಿಕೊಟ್ಟವರಿಗೆ 1 ಲಕ್ಷ ರೂಪಾಯಿ ಬಹುಮಾನ ಕೊಡುವುದಾಗಿ ಜನತಾ ಪಕ್ಷ ಪ್ರಕಟಿಸಿದೆ.

ಬೆಂಗಳೂರು: ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಮೊದಲ ಹಂತದ ಮತದಾನ ಏಪ್ರಿಲ್ ​26ರಂದು ಮುಗಿಯುತ್ತಿದ್ದಂತೆ ಅಶ್ಲೀಲ ವಿಡಿಯೋಗಳ (Prajwal Revanna Video Case) ಕಳಂಕಿತ ವ್ಯಕ್ತಿ (Prajwal Revanna) ವಿದೇಶಕ್ಕೆ ಪರಾರಿಯಾದರು. ಅವರು ಹಾಸನ ಸಂಸದ ಪ್ರಜ್ವಲ್ ರೇವಣ್ಣ! ಅದಾದ ನಂತರ ಪ್ರಕರಣದ ಬೆನ್ನುಹತ್ತಿದ ಎಸ್​ಐಟಿ ಪೊಲೀಸರಿಗೆ ಇದುವರೆಗೂ ಅವರನ್ನು ಪತ್ತೆ ಹಚ್ಚಿ, ಬಂಧಿಸಲು ಸಾಧ್ಯವಾಗಿಲ್ಲ. ಈ ಮಧ್ಯೆ, ಜನತಾ ಪಕ್ಷದ ವತಿಯಿಂದ ಆರೋಪಿಯ ಬಗ್ಗೆ ಪೋಸ್ಟರ್ ಹಚ್ಚುವ/ಹಂಚುವ ಕೆಲಸ ನಡೆದಿದೆ.

ಪ್ರಜ್ವಲ್ ಹುಡುಕುವಲ್ಲಿ ಕೇಂದ್ರ, ರಾಜ್ಯ ಸರ್ಕಾರ ವಿಫಲವಾಗಿದೆ. ಹಾಗಾಗಿ ಪ್ರಕರಣದ ಎರಡನೆಯ ಆರೋಪಿ ಪ್ರಜ್ವಲ್ ರೇವಣ್ಣನನ್ನು ಹುಡುಕಿಕೊಟ್ಟವರಿಗೆ 1 ಲಕ್ಷ ರೂಪಾಯಿ ಬಹುಮಾನ ಕೊಡುವುದಾಗಿ ಪ್ರಕಟಿಸಿದೆ. ಬೆಂಗಳೂರಿನ ಶಿವಾನಂದ ಸರ್ಕಲ್​ನಲ್ಲಿ (Shivananda Circle, Bangalore) ಜನತಾ ಪಕ್ಷದ (Janata Party) ನಾಗೇಶ್ ಎಂಬಾತ ಪೋಸ್ಟರ್ (Poster) ಅಂಟಿಸಿ, ಮಾಧ್ಯಮಗಳ ಜೊತೆ ಮಾತನಾಡುತ್ತದ್ದಾಗಲೇ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪ್ರಜ್ವಲ್ ತಪ್ಪು ಮಾಡಿದ್ದರೆ ಗಲ್ಲಿಗೇರಿಸಿ ಆದರೆ ಸಿಎಂ ಕುರ್ಚಿಗಾಗಿ ಶಿವಕುಮಾರ್ ದುಡುಕುವುದು ಬೇಡ: ವಿ ಸೋಮಣ್ಣ