Datta Peetha: ಚಿಕ್ಕಮಗಳೂರಿನ ದತ್ತಪೀಠದಲ್ಲಿ ದತ್ತಪಾದುಕೆಗೆ ವಿಶೇಷ ಪೂಜೆ ಸಲ್ಲಿಸಿದ ಪ್ರಮೋದ್ ಮುತಾಲಿಕ್
Pramod Muthalik: ಪಾದುಕೆಗೆ ರುದ್ರಾಭಿಷೇಕ ಮಾಡಲಾಗಿದೆ. ಅರ್ಚಕರ ನೇಮಕದ ನಂತರ ಶ್ರೀರಾಮ ಸೇನೆಯಿಂದ ವಿಶೇಷ ಪೂಜೆ ನೆರವೇರಿದೆ. ದತ್ತಪಾದುಕೆ ಪೂಜೆಯಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಸೇರಿ ಹಲವರು ಭಾಗಿಯಾಗಿದ್ದರು.
ಚಿಕ್ಕಮಗಳೂರು: ಇನಾಂ ದತ್ತಾತ್ರೇಯ ಪೀಠದಲ್ಲಿ ಶ್ರೀ ರಾಮ ಸೇನೆಯಿಂದ ದತ್ತಪಾದುಕೆ ಪೂಜೆ ನೆರವೇರಿದೆ. ಅರ್ಚಕರ ನೇತೃತ್ವದಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ದತ್ತಪಾದುಕೆಗೆ ಪೂಜೆಸಲ್ಲಿಸಿದ್ದಾರೆ. ಪಾದುಕೆಗೆ ರುದ್ರಾಭಿಷೇಕ ಮಾಡಲಾಗಿದೆ. ಅರ್ಚಕರ ನೇಮಕದ ನಂತರ ಶ್ರೀರಾಮ ಸೇನೆಯಿಂದ ವಿಶೇಷ ಪೂಜೆ ನೆರವೇರಿದೆ. ದತ್ತಪಾದುಕೆ ಪೂಜೆಯಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಸೇರಿ ಹಲವರು ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಮುತಾಲಿಕ್, ದತ್ತಪೀಠದಲ್ಲಿ ಅರ್ಚಕರು, ರುದ್ರಾಭಿಷೇಕ, ಶಂಖನಾದ, ಆರತಿ ನೋಡಿ ಧನ್ಯನಾದೆ. ಸರ್ಕಾರ ಹಾಗೂ ಶಾಸಕ ಸಿ.ಟಿ.ರವಿಗೆ ಧನ್ಯವಾದ. 30 ವರ್ಷಗಳ ಹೋರಾಟಕ್ಕೆ ಫಲ ಸಿಕ್ಕಿದ್ದು, ಅತೀವ ಸಂತೋಷವಾಗಿದೆ. ದತ್ತಪೀಠದಲ್ಲಿ ಆರತಿ, ಘಂಟೆ, ಪೂಜೆ, ರುದ್ರಾಭಿಷೇಕ ಶಂಖನಾದ ನಡೆಯುತ್ತಿದೆ. ಇದೆಲ್ಲಾ ಇಸ್ಲಾಂಗೆ ನಿಷಿದ್ಧ, ದತ್ತಪೀಠ ಬಿಟ್ಟು ನಾಗೇನಹಳ್ಳಿಯಲ್ಲಿ ಪೂಜೆ ಮಾಡಿಕೊಳ್ಳಿ. ಗೋ ಹಂತಕರು, ಗೋ ಭಕ್ಷಕರು, ಮೂರ್ತಿ ಪೂಜೆ ನಂಬದವರಿಗೆ ಗರ್ಭಗುಡಿಗೆ ನಿಷೇಧಿಸಬೇಕು ಎಂದರು.