Pranav Mohanlal: ‘ಹೃದಯಂ’ ಹೀರೋ ರೀತಿಯೇ ಕಾಣ್ತಾರೆ ಈ ಕನ್ನಡಿಗ; ಆದರೆ ಇವರು ಅವರಲ್ಲ
Prathap Gopal: ಪ್ರಣವ್ ಮೋಹನ್ಲಾಲ್ ರೀತಿಯೇ ಪ್ರತಾಪ್ ಗೋಪಾಲ್ ಕೂಡ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳಬೇಕು ಎಂದುಕೊಂಡಿದ್ದಾರೆ. ಒಳ್ಳೆಯ ಸಿನಿಮಾ ಮಾಡುವ ಕುರಿತು ಅವರು ಮಾತನಾಡಿದ್ದಾರೆ.
ಮಲಯಾಳಂ ಚಿತ್ರರಂಗದ ಖ್ಯಾತ ನಟ ಮೋಹಲ್ಲಾಲ್ (Mohanlal) ಅವರ ಪುತ್ರ ಪ್ರಣವ್ ಮೋಹನ್ಲಾಲ್ ಅವರು ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಅವರು ನಟಿಸಿದ ‘ಹೃದಯಂ’ ಸಿನಿಮಾ ಜನಮನ ಗೆದ್ದಿದೆ. ಬೆಂಗಳೂರಿನಲ್ಲಿ ಪ್ರಣವ್ ಮೋಹನ್ಲಾಲ್ (Pranav Mohanlal) ಅವರನ್ನೇ ಹೋಲುವಂತಹ ಓರ್ವ ವ್ಯಕ್ತಿ ಇದ್ದಾರೆ. ಇವರ ಹೆಸರು ಪ್ರತಾಪ್ ಗೋಪಾಲ್. ಎಷ್ಟೋ ಜನರು ಇವರನ್ನು ಪ್ರಣವ್ ಎಂದುಕೊಂಡು ಮಾತನಾಡಿಸುತ್ತಾರೆ. ಪ್ರತಾಪ್ ಗೋಪಾಲ್ (Prathap Gopal) ಅವರು ಕೂಡ ಚಿತ್ರರಂಗಕ್ಕೆ ಬರುವ ಉತ್ಸಾಹದಲ್ಲಿ ಇದ್ದಾರೆ. ಆ ಕುರಿತು ಅವರು ‘ಟಿವಿ9 ಕನ್ನಡ’ದ ಜೊತೆ ಮಾತನಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos