- Kannada News Photo gallery Renowned Malayalam actress Darshana Rajendran debut movie in Telugu film industry
Darshana Rajendran: ‘ಹೃದಯಂ’ ಚಿತ್ರದ ಸುಂದರಿ ದರ್ಶನಾಗೆ ಬಂಪರ್ ಚಾನ್ಸ್; ಮುಂದಿನ ಸಿನಿಮಾ ಯಾವುದು?
Darshana Rajendran Telugu Debut: ಚಿತ್ರರಂಗಕ್ಕೆ ಭಾಷೆಯ ಗಡಿ ಇಲ್ಲ. ಮಲಯಾಳಂ ಸಿನಿಮಾಗಳಲ್ಲಿ ಖ್ಯಾತಿ ಗಳಿಸಿರುವ ದರ್ಶನಾ ರಾಜೇಂದ್ರನ್ ಅವರಿಗೆ ಈಗ ಬೇರೆ ಭಾಷೆಗಳಿಂದ ಆಫರ್ ಸಿಗುತ್ತಿದೆ.
Updated on: Jun 11, 2023 | 7:00 AM

ನಟಿ ದರ್ಶನಾ ರಾಜೇಂದ್ರನ್ ಅವರು ಮಾಲಿವುಡ್ನಲ್ಲಿ ಖ್ಯಾತಿ ಗಳಿಸಿದ್ದಾರೆ. ನಟನೆ ಮೂಲಕ ಗಮನ ಸೆಳೆದ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಈಗ ಅವರಿಗೆ ಹೊಸ ಹೊಸ ಅವಕಾಶಗಳು ಹರಿದುಬರುತ್ತಿವೆ.

‘ವೈರಸ್’, ‘ಸೀ ಯೂ ಸೂನ್’, ‘ಜಯ ಜಯ ಜಯ ಜಯ ಹೇ’, ‘ಹೃದಯಂ’ ಮುಂತಾದ ಸಿನಿಮಾಗಳಲ್ಲಿ ನಟಿಸುವ ಮೂಲಕ ದರ್ಶನಾ ರಾಜೇಂದ್ರನ್ ಅವರು ಫೇಮಸ್ ಆಗಿದ್ದಾರೆ. ಈ ಸಿನಿಮಾಗಳು ವಿಮರ್ಶಕರ ಮೆಚ್ಚಿಗೆ ಗಳಿಸಿವೆ.

ಈಗ ದರ್ಶನಾ ರಾಜೇಂದ್ರ ಅವರು ತೆಲುಗು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಅವರು ನಟಿಸಲಿರುವ ಮೊದಲ ಟಾಲಿವುಡ್ ಚಿತ್ರಕ್ಕೆ ‘ಸಿನಿಮಾ ಬಂಡಿ’ ಖ್ಯಾತಿಯ ಪ್ರವೀಣ್ ಅವರು ನಿರ್ದೇಶನ ಮಾಡಲಿದ್ದಾರೆ.

ಚಿತ್ರರಂಗಕ್ಕೆ ಭಾಷೆಯ ಗಡಿ ಇಲ್ಲ. ಈಗಾಗಲೇ ಅನೇಕ ಮಲಯಾಳಂ ನಟ-ನಟಿಯರು ಟಾಲಿವುಡ್ನಲ್ಲಿ ಜನಪ್ರಿಯತೆ ಗಳಿಸಿದ್ದಾರೆ. ಅವರ ಸಾಲಿಗೆ ಈಗ ನಟಿ ದರ್ಶನಾ ರಾಜೇಂದ್ರನ್ ಕೂಡ ಸೇರ್ಪಡೆ ಆಗುತ್ತಿದ್ದಾರೆ.

ಟಾಲಿವುಡ್ನಲ್ಲಿ ದರ್ಶನಾ ಅವರ ಮೊದಲ ಸಿನಿಮಾದ ಚಿತ್ರೀಕರಣ ಶೀಘ್ರದಲ್ಲೇ ಆರಂಭ ಆಗಲಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಫ್ಯಾನ್ಸ್ ಕಾದಿದ್ದಾರೆ. ದರ್ಶನಾ ಕೈಯಲ್ಲಿ ಈಗ ಹಲವು ಸಿನಿಮಾಗಳಿವೆ.



















