ಪ್ರಶಾಂತ್ ಸಂಬರಗಿಗೆ ಆಕ್ಟಿಂಗ್ ಬರಲ್ಲ ಅಂದ್ರು ಶಮಂತ್ ಗೌಡ: ವಿಡಿಯೊ ನೋಡಿ
ಬಿಗ್ಬಾಸ್ ಸೀಸನ್ 8 ಮುಗಿದಿದೆ. ಆರನೇಯವರಾಗಿ ಮನೆಯಿಂದ ಹೊರಬಂದ ಶಮಂತ್ಗೌಡ ಟಿವಿ 9ನೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ದೂರವಾಣಿ ಮುಖಾಂತರ ಪ್ರಶಾಂತ್ ಸಂಬರಗಿ ಕೂಡಾ ಮಾತನಾಡಿದ್ದು, ಶಮಂತ್ ಅವರೊಂದಿಗಿನ ಗೆಳೆತನದ ಕುರಿತು ಮತ್ತು ಚಕ್ರವರ್ತಿ ಅವರ ಪಂಥಾಹ್ವಾನದ ಬಗ್ಗೆ ಮಾತನಾಡಿದ್ದಾರೆ.
ಆರನೇಯವರಾಗಿ ಬಿಗ್ಬಾಸ್ ಮನೆಯಿಂದ ಹೊರಬಂದ ಶಮಂತ್ಗೌಡ ಅಲ್ಲಿ ಲಕ್ಕಿ ಬಾಯ್ ಎಂದೇ ಕರೆಸಿಕೊಂಡಿದ್ದರು. ಮೊದಲ ಇನ್ನಿಂಗ್ಸ್ನಲ್ಲಿ ಎಲಿಮಿನೇಷನ್ ತೂಗುಗತ್ತಿ ಅವರ ಮೇಲೆ ತೂಗುತ್ತಿದ್ದಾಗ ವೈಜಯಂತಿ ಅಡಿಗ ಅವರನ್ನು ಸೇವ್ ಮಾಡಿದ್ದರು. ಅಲ್ಲಿಂದ ಮುಂದೆ ಚೆನ್ನಾಗಿ ಪ್ರದರ್ಶನ ನೀಡಿದ ಶಮಂತ್, ಫಿನಾಲೆಗೂ ಒಂದು ವಾರ ಮುನ್ನದ ತನಕ ಮನೆಯಲ್ಲಿದ್ದರು. ತಮ್ಮ ಹಾಡು, ಮಾತುಗಳಿಂದ ಎಲ್ಲರನ್ನು ರಂಜಿಸಿದ್ದ ಅವರು, ಟಿವಿ9ನೊಂದಿಗೆ ಮಾತನಾಡಿದ್ದಾರೆ. ಸ್ನೇಹಿತ ಪ್ರಶಾಂತ್ ಸಂಬರಗಿ ಅವರೊಂದಿಗೆ ದೂರವಾಣಿ ಕರೆಯಲ್ಲಿ ಮಾತನಾಡಿ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಶಮಂತ್ ಹಾಗೂ ಸಂಬರಗಿ ಅವರ ಮನೆಯವರು ಬಿಗ್ಬಾಸ್ ನಡೆಯುವಾಗ ಬಹಳ ಆತ್ಮೀಯರಾದ ವಿಷಯ ಸೇರಿದಂತೆ, ಹಲವು ಕುತೂಹಲಕರ ವಿಚಾರಗಳನ್ನು ಈರ್ವರೂ ಹೇಳಿಕೊಂಡಿದ್ದಾರೆ. ಶಮಂತ್ ಅವರ ಸಿನಿ ಜೀವನಕ್ಕೆ ಶುಭ ಹಾರೈಸಿರುವ ಸಂಬರಗಿ, ಶಮಂತ್ ಅವರಿಗೆ ಕೆಲ ಕಿವಿಮಾತುಗಳನ್ನೂ ಹೇಳಿದ್ದಾರೆ. ಚಕ್ರವರ್ತಿ ಚಂದ್ರಚೂಡ್ ನೀಡಿರುವ ಪಂಥಾಹ್ವಾನದ ಕುರಿತಂತೆಯೂ ಪ್ರಶಾಂತ್ ಸಂಬರಗಿ ಮಾತನಾಡಿದ್ದಾರೆ. ಅದೇನೆಂದು ತಿಳಿಯಲು ಸಂಪೂರ್ಣ ವಿಡಿಯೊ ನೋಡಿ.
ಇದನ್ನೂ ನೋಡಿ:
‘ಸುದೀಪ್ ಅನುಮತಿ ಕೊಟ್ಟರೆ ಪ್ರಶಾಂತ್ ಸಂಬರಗಿ ವಿರುದ್ಧ ನಾನು ನ್ಯಾಯಾಲಯಕ್ಕೆ ಹೋಗ್ತೀನಿ’: ಚಕ್ರವರ್ತಿ ಚಂದ್ರಚೂಡ್
Manju Pavagada: ನನ್ನ ಗೆಲುವಿಗೆ ಅರವಿಂದ್ ಸ್ಫೂರ್ತಿ ಎಂದ ಬಿಗ್ ಬಾಸ್ ಕನ್ನಡ 8 ವಿಜೇತ ಮಂಜು ಪಾವಗಡ
(Prashanth Sambaragi does not know to Acting says Shamanth Gowda)