ಧಮ್ ಇದ್ರೆ ಜಮೀರ್ಗೆ ಬಿಳಿ ಟೋಪಿ ಸಾಬಣ್ಣ ಎಂದು ಹೇಳಿ: ಡಿಕೆಶಿಗೆ ಪ್ರತಾಪ್ ಸಿಂಹ ಸವಾಲು
ಬಿಜೆಪಿ ಶಾಸಕ ಮುನಿರತ್ನಗೆ ಕರಿಟೋಪಿ MLA ಎಂದು ಕರೆದಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್ ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಚಾಲೆಂಜ್ ಹಾಕಿದ್ದಾರೆ. ನಿಮಗೆ ಧಮ್ ಇದ್ದರೆ ಧಮ್ ಇದ್ದರೆ ಶಾಸಕ ಜಮೀರ್ಗೆ ಬಿಳಿ ಟೋಪಿ ಸಾಬಣ್ಣ ಎಂದು ಕರೆಯಿರಿ ಎಂದಿದ್ದಾರೆ. ಅಲ್ಲದೆ ಕುಸುಮಾರನ್ನು ಬೇಕಾದ್ರೆ MLC ಮಾಡಿಸಿ, ರಾಜ್ಯಸಭೆ ಸ್ಥಾನ ಕೊಡಿಸಿ. ಇದನ್ನು ಬಿಟ್ಟು ಸ್ಥಳೀಯ ಶಾಸಕರಿಗೆ ಏಕೆ ಕಿರುಕುಳ ಕೊಡುತ್ತಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.
ಮೈಸೂರು, ಅಕ್ಟೋಬರ್ 13: ಬಿಜೆಪಿ ಶಾಸಕ ಮುನಿರತ್ನಗೆ ಕರಿಟೋಪಿ MLA ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕರೆದ ವಿಚಾರವಾಗಿ ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ಮೈಸೂರಿನಲ್ಲಿ ಕಿಡಿ ಕಾರಿದ್ದಾರೆ. ಡಿಸಿಎಂಗೆ ಸವಾಲ್ ಹಾಕಿರೋ ಪ್ರತಾಪ್ ಸಿಂಹ, ಧಮ್ ಇದ್ದರೆ ಶಾಸಕ ಜಮೀರ್ ಗೆ ಬಿಳಿ ಟೋಪಿ ಸಾಬಣ್ಣ ಎಂದು ಕರೆಯಿರಿ ಎಂದಿದ್ದಾರೆ. ಅಲ್ಲದೆ ಕುಸುಮಾರನ್ನು ಬೇಕಾದ್ರೆ MLC ಮಾಡಿಸಿ, ರಾಜ್ಯಸಭೆ ಸ್ಥಾನ ಕೊಡಿಸಿ. ಇದನ್ನು ಬಿಟ್ಟು ಸ್ಥಳೀಯ ಶಾಸಕರಿಗೆ ಏಕೆ ಕಿರುಕುಳ ಕೊಡುತ್ತಿದ್ದೀರಾ? 2028ಕ್ಕೆ ಡಿ.ಕೆ.ಶಿವಕುಮಾರ್ ಕೂಡ ಜಾಬ್ ಲೆಸ್ ಆಗುತ್ತಾರೆ. ಆಗ ಡಿ.ಕೆ.ಶಿವಮಾರ್ ರನ್ನು ಇದೇ ರೀತಿ ನಡೆಸಿಕೊಂಡರೆ ಹೇಗಿರುತ್ತೆ? ಎಂದು ಅವರು ಪ್ರಶ್ನಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
