ಹೇಳಿಕೆಗಳನ್ನು ನೀಡುವ ಮೊದಲು ಪ್ರತಾಪ್ ಸಿಂಹ ಚರಿತ್ರೆಯನ್ನು ಕೊಂಚ ಓದಲಿ: ಹೆಚ್ ವಿಶ್ವನಾಥ್
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೌನ ದಿಗಿಲು ಹುಟ್ಟಿಸುತ್ತಿದೆ, ದಸರಾ ಉನ್ನತ ಸಮಿತಿ ಮತ್ತು ಸರ್ಕಾರ ತೆಗೆದುಕೊಂಡಿರುವ ನಿರ್ಣಯ ಅದು, ಟೀಕೆಗಳಿಂದ ತಮ್ಮ ನಿರ್ಧಾರವೇನೂ ಬದಲಾಗಲ್ಲ ಅಂತ ಅವರು ಹೇಳಿ ಈ ವಿವಾದಕ್ಕೆ ಅಂತ್ಯ ಹಾಡಬೇಕು, ಮುಖ್ಯಮಂತ್ರಿಯವರ ಮೌನ ಬೇರೆಯವರು ಹೇಳಿಕೆಗಳನ್ನು ನೀಡಲು ಪ್ರೇರಣೆಯಾಗುತ್ತಿದೆ ಎಂದ ವಿಶ್ವನಾಥ್ ಬೇರೆ ಪಕ್ಷಗಳ ನಾಯಕರು ಜಿದ್ದಿಗೆ ಬಿದ್ದವರಂತೆ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಅಂತ ಹೇಳಿದರು.
ಮೈಸೂರು, ಆಗಸ್ಟ್ 30: ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ (H Vishwanath) ತಮ್ಮ ಪಕ್ಷದರನ್ನು ತರಾಟೆಗೆ ತೆಗೆದುಕೊಳ್ಳೋದು ಹೊಸದೇನಲ್ಲ. ಬಾನು ಮುಷ್ತಾಕ್ ಅವರು ಈ ಬಾರಿಯ ದಸರಾ ಉತ್ಸವ ಉದ್ಘಾಟಿಸುತ್ತಿರುವುದರ ವಿರುದ್ಧ ತೀವ್ರ ಸ್ವರೂಪದ ಆಕ್ಷೇಪಣೆ ಎತ್ತಿರುವ ಪ್ರತಾಪ್ ಸಿಂಹ ವಿರುದ್ಧ ವಿಶ್ವನಾಥ್ ಕಿಡಿಕಾರಿದರು. ಪ್ರತಾಪ್ಗೆ ಚರಿತ್ರೆಯೇ ಗೊತ್ತಿಲ್ಲ, ಇತಿಹಾಸವನ್ನು ಓದುವುದೊಳಿತು, ಮೈಸೂರು ಸಂಸ್ಥಾನದ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ರನ್ನು ಮಹಾರಾಜರು ಅಂಬಾರಿ ಮೇಲೆ ಪಕ್ಕದಲ್ಲಿ ಕೂರಿಸಿಕೊಳ್ಳುತ್ತಿದ್ದರು ಎಂದು ವಿಶ್ವನಾಥ್ ಹೇಳಿದರು. ಬಿಜೆಪಿ ಒಂದೇ ಅಂತಲ್ಲ, ಎಲ್ಲ ಪಕ್ಷಗಳು ಈ ವಿಷಯದ ಬಗ್ಗೆ ತಮಗೆ ತೋಚಿದನ್ನು ಹೇಳುತ್ತಿವೆ ಮತ್ತು ಬಾನು ಮುಷ್ತಾಕ್ಗೆ ಸಿಕ್ಕಿರುವ ಬೂಕರ್ ಪ್ರಶಸ್ತಿಗೆ ಅಪಮಾನ ಮಾಡುತ್ತಿವೆ. ಎರಡು ವರ್ಷಗಳ ಹಿಂದೆ ಅವರು ಕನ್ನಡಾಂಬೆಗೆ ಅವಮಾನ ಮಾಡಿದ್ದು ನಿಜ, ಅವರು ಪತ್ರಬರೆದು ಸ್ಪಷ್ಟನೆ ನೀಡಿದ್ದರೆ ಅದು ಒಳ್ಳೆಯದು, ಆದರೆ ಅದನ್ನು ಮಾತ್ರ ಮುಂದೆ ಮಾಡಿದರೆ ಹೇಗೆ? ಅವರಿಂದ ಕನ್ನಡಭಾಷೆಗೆ ಸಿಕ್ಕಿರುವ ಸನ್ಮಾನವನ್ನು ಯಾಕೆ ಕಡೆಗಣಿಸಲಾಗುತ್ತಿದೆ ಎಂದು ವಿಶ್ವನಾಥ್ ಹೇಳಿದರು.
ಇದನ್ನೂ ಓದಿ: ಕನ್ನಡವನ್ನು ಭುವನೇಶ್ವರಿಯಾಗಿ ಒಪ್ಪದವರು ಚಾಮುಂಡೇಶ್ವರಿಯನ್ನು ಒಪ್ಪಿ ಪುಷ್ಪಾರ್ಚನೆ ಮಾಡಿಯಾರೇ: ಪ್ರತಾಪ್ ಸಿಂಹ ಪ್ರಶ್ನೆ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
