ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿಯಾದ ನಟರು ಯಾರು?

Updated By: ಮದನ್​ ಕುಮಾರ್​

Updated on: May 20, 2025 | 9:54 PM

ಕನ್ನಡಪರ ಹೋರಾಟಗಾರ ಪ್ರವೀಣ್ ಶೆಟ್ಟಿ ಅವರ ಪುತ್ರ ಪ್ರವೀರ್ ಶೆಟ್ಟಿ ಅಭಿನಯಿಸಿರುವ ‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದ ಹಾಡು ರಿಲೀಸ್ ಆಗಿದೆ. ಈ ವೇಳೆ ನಟ ಪ್ರವೀರ್ ಅವರು ಟಿವಿ9 ಜತೆ ಮಾತನಾಡಿದ್ದಾರೆ. ತಾವು ಸಿನಿಮಾರಂಗಕ್ಕೆ ಬರಲು ಸ್ಫೂರ್ತಿ ನೀಡಿದ ನಟರು ಯಾರು ಎಂಬುದನ್ನು ಅವರು ಹೇಳಿದ್ದಾರೆ.

ಕನ್ನಡಪರ ಹೋರಾಟಗಾರ ಪ್ರವೀಣ್ ಶೆಟ್ಟಿ (Praveen Shetty) ಅವರ ಮಗ ಪ್ರವೀರ್ ಶೆಟ್ಟಿ ನಟಿಸಿರುವ ‘ನಿದ್ರಾದೇವಿ ನೆಕ್ಸ್ಟ್​ ಡೋರ್’ (Nidradevi Next Door) ಸಿನಿಮಾದ ಹಾಡು ಬಿಡುಗಡೆ ಆಗಿದೆ. ಈ ವೇಳೆ ನಟ ಪ್ರವೀರ್ ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ಚಿತ್ರರಂಗಕ್ಕೆ ಬರಲು ತಮಗೆ ಸ್ಫೂರ್ತಿ ನೀಡಿದ ನಟರು ಯಾರು ಎಂಬುದನ್ನು ಅವರು ಹೇಳಿದ್ದಾರೆ. ಸಾಕಷ್ಟು ತಯಾರಿ ಮಾಡಿಕೊಂಡು ಪ್ರವೀರ್ (Praveer Shetty) ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅನುಪಮ್ ಖೇರ್ ಅವರ ಸಂಸ್ಥೆಗೆ ಹೋಗಿ ನಟನೆಯಲ್ಲಿ ಅವರು ಡಿಪ್ಲೊಮಾ ಪಡೆದು ಬಂದಿದ್ದಾರೆ. ಆ ಕುರಿತು ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.