‘ಪ್ರೇಮದ ಊರಲಿ ಪಾರ್ಟ್ 2’ ಬರುತ್ತಾ? ನೇರವಾಗಿ ಉತ್ತರ ನೀಡಿದ ನಿರ್ದೇಶಕ ಮನೋಜ್
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಯಶಸ್ಸಿನ ಖುಷಿಯಲ್ಲಿ ಈ ತಂಡದವರು ಟಿವಿ9 ಜೊತೆ ಮಾತನಾಡಿದ್ದಾರೆ. ಈ ಚಿತ್ರಕ್ಕೆ 2ನೇ ಪಾರ್ಟ್ ಬರುತ್ತಾ ಎಂಬ ಕೌತುಕ ಎಲ್ಲರಿಗೂ ಇದೆ. ಅದಕ್ಕೆ ನಿರ್ದೇಶಕ ಮನೋಜ್ ಕುಮಾರ್ ಉತ್ತರ ನೀಡಿದ್ದಾರೆ.
‘ಪ್ರೇಮದ ಊರಲಿ’ ಸಿನಿಮಾ ಸೂಪರ್ ಹಿಟ್ ಆಗಿದ್ದು, 100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಸಿನಿಮಾದ ಯಶಸ್ಸಿನ ಖುಷಿಯಲ್ಲಿ ಇಡೀ ತಂಡದವರು ಟಿವಿ9 ಜೊತೆ ಮಾತನಾಡಿದ್ದಾರೆ. ಈ ಚಿತ್ರಕ್ಕೆ 2ನೇ ಪಾರ್ಟ್ ಬರುತ್ತಾ ಎಂಬ ಕೌತುಕ ಎಲ್ಲರಿಗೂ ಇದೆ. ಅದಕ್ಕೆ ನಿರ್ದೇಶಕ ಮನೋಜ್ ಕುಮಾರ್ ಉತ್ತರ ನೀಡಿದ್ದಾರೆ. ‘ಕೆಲವು ಕಥೆಗಳು ಅಂತ್ಯವಾದರೆ ಒಳ್ಳೆಯದು. ಮತ್ತೆ ಆರಂಭಿಸಬಾರದು. ಅದು ಏನಾಗುತ್ತದೆ ಅನ್ನೋದು ಗೊತ್ತಿರಲ್ಲ. ಪ್ರೇಮದ ಊರಲಿ ಒಂದು ಕಥೆ. ಅದು ಜನರಿಗೆ ಇಷ್ಟ ಆಗಿದೆ. ಅದರ ಪಾರ್ಟ್ 2 ಅಂತ ಬೇರೆ ರೀತಿಯ ಲಾಭ ಪಡೆಯೋದಕ್ಕಿಂತ ಒಂದು ಕಥೆಗೆ ನ್ಯಾಯ ಕೊಡುವುದು ತುಂಬಾ ಮುಖ್ಯ ಅಂತ ನಾನು ಅಂದುಕೊಂಡಿದ್ದೇನೆ’ ಎಂದು ನಿರ್ದೇಶಕ ಮನೋಜ್ ಕುಮಾರ್ ಅವರು ಹೇಳಿದ್ದಾರೆ. ಆ ಮೂಲಕ, ‘ಪ್ರೇಮದ ಊರಲಿ ಪಾರ್ಟ್ 2’ ಮಾಡುವ ಆಲೋಚನೆ ಇಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

