ಮಂತ್ರಾಲಯದಲ್ಲಿ ರಾಯರ 352ನೇ ಆರಾಧನೆಗೆ ಸಕಲ ಸಿದ್ಧತೆ, ಆದ್ರೆ ತುಂಗಭದ್ರಾ ನದಿ ಖಾಲಿ, ಪುಣ್ಯಸ್ನಾನ ತಪ್ಪುವ ಆತಂಕದಲ್ಲಿ ಭಕ್ತರು

| Updated By: ಸಾಧು ಶ್ರೀನಾಥ್​

Updated on: Aug 19, 2023 | 1:21 PM

ಇತ್ತ ರಾಯರ ಆರಾಧನಾ ಮಹೋತ್ಸವದ ಅಂಗವಾಗಿ ರಾಯರ ಮಠ ಸಕಲ ರೀತಿಯಲ್ಲಿ ಸಜ್ಜಾಗ್ತಿದೆ..ಆದ್ರೆ ತುಂಗಭದ್ರಾ ನದಿಯಲ್ಲಿ ನೀರಿಲ್ಲದ ಹಿನ್ನೆಲೆ ಭಕ್ತರಿಗೆ ಇದರ ಎಫೆಕ್ಟ್ ತಟ್ಟಲಿದೆ.. ರಾಜ್ಯದಲ್ಲಿ ಮುಂಗಾರು ಸಮರ್ಪಕವಾಗಿ ಆಗದೇ ಇರೋ ಕಾರಣಕ್ಕೆ ಕೆಳಭಾಗದ ತುಂಗಭದ್ರಾ ನದಿಯಲ್ಲಿ ನೀರೇ ಇಲ್ಲ..  ಇತ್ತೀಚೆಗೆ ನದಿ ಬರಿದಾಗಿರೊ ಹಿನ್ನೆಲೆ ರಾಯರ ಭಕ್ತರು ತುಂಗಭದ್ರಾ ನದಿಯಲ್ಲಿ (Tungabhadra river ) ಪುಣ್ಯಸ್ನಾನ ಮಾಡಲಾಗದೇ ಬೇಸರಗೊಂಡಿದ್ದಾರೆ.

ಭಕ್ತರ ಆರಾಧ್ಯ ದೈವ ಅಂತ ಕರೆಸಿಕೊಳ್ಳುವ ಮಂತ್ರಾಲಯದ ರಾಯರ (Sri Raghavendra Swamy) ಆರಾಧನಾ ಮಹೋತ್ಸವಕ್ಕೆ (Mantralaya) ಕ್ಷಣ ಗಣನೆ ಆರಂಭವಾಗಿದೆ..ಆದ್ರೆ ತುಂಗಭದ್ರಾ ನದಿಯಲ್ಲಿ ನೀರಿಲ್ಲದ ಹಿನ್ನೆಲೆ ಭಕ್ತರಿಗೆ ಈ ಬಾರಿ ಪುಣ್ಯಸ್ನಾನದ ಸಮಸ್ಯೆ ಎದುರಾಗಲಿದೆ..ಮುಂಗಾರು ಕೈ ಕೊಟ್ಟ ಹಿನ್ನೆಲೆ ಇದರ ಬಿಸಿ ರಾಯರ ಭಕ್ತರಿಗೆ ತಟ್ಟಿದೆ‌… ಹೌದು ಭಕ್ತರ ಆರಾಧ್ಯ ದೈವ ಮಂತ್ರಾಲಯ ರಾಯರ ಆರಾಧನಾ ಮಹೋತ್ಸವಕ್ಕ ದಿನಗಣನೆ ಆರಂಭವಾಗಿದೆ..ರಾಯರ 352ನೇ ಆರಾಧನಾ ಮಹೋತ್ಸವಕ್ಕೆ ಮಂತ್ರಾಲಯದ ರಾಯರ ಮಠದಲ್ಲಿ ಸಕಲ ರೀತಿಯಲ್ಲಿ ಸಜ್ಜಾಗ್ತಿದೆ..ಈ ಬಗ್ಗೆ ಇಂದು ಮಂತ್ರಾಲಯ ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ರಾಯರ ಆರಾಧನಾ ಮಹೋತ್ಸವದ ಮಾಹಿತಿ ನೀಡಿದ್ರು..ಆಗಸ್ಟ್ 29 ರಿಂದ ಸೆಪ್ಟೆಂಬರ್ 4 ರ ವರೆಗೆ ರಾಯರ ಆರಾಧನೆ ನಡೆಯಲಿದ್ದು,ಸಪ್ತರಾತ್ರೋತ್ಸವ ನಡೆಯಲಿದೆ..ರಾಯರ 352ನೇ ಮಹೋತ್ಸವದ ನಿಮಿತ್ತವಾಗಿ ಮಠದಲ್ಲಿ ವಿವಿಧ ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ..ಆಗಸ್ಟ್ 31 ರಂದು ರಾಯರ ಪೂರ್ವಾರಾಧನೆ, ಸೆಪ್ಟೆಂಬರ್ 1ರಂದು ಮಧ್ಯಾರಾಧನೆ ಹಾಗೂ ಸೆ.2 ರಂದು ಉತ್ತರ ಆರಾಧನೆ ನಡೆಯಲಿದೆ..ಇದೇ ಮಹೋತ್ಸವದ ಅಂಗವಾಗಿ ಆಗಸ್ಟ್ 30 ರಂದು ಅಂಚೆ ಇಲಾಖೆಯಿಂದ ರಾಯರ ಭಾವಚಿತ್ರವಿರೊ ಅಂಚೆ ಚೀಟಿ ಬಿಗುಗಡೆ ಮಾಡಲಾಗ್ತಿದೆ ಎಂದು ಡಾ. ಸುಬುಧೇಂದ್ರ ತೀರ್ಥರು,ಮಂತ್ರಾಲಯದ ರಾಯರ ಮಠದ ಪೀಠಾಧಿಪತಿ ಮಾಹಿತಿ ನೀಡಿದ್ದಾರೆ.

ಹೌದು..ಇತ್ತ ರಾಯರ ಆರಾಧನಾ ಮಹೋತ್ಸವದ ಅಂಗವಾಗಿ ರಾಯರ ಮಠ ಸಕಲ ರೀತಿಯಲ್ಲಿ ಸಜ್ಜಾಗ್ತಿದೆ..ಆದ್ರೆ ತುಂಗಭದ್ರಾ ನದಿಯಲ್ಲಿ ನೀರಿಲ್ಲದ ಹಿನ್ನೆಲೆ ಭಕ್ತರಿಗೆ ಇದರ ಎಫೆಕ್ಟ್ ತಟ್ಟಲಿದೆ.. ರಾಜ್ಯದಲ್ಲಿ ಮುಂಗಾರು ಸಮರ್ಪಕವಾಗಿ ಆಗದೇ ಇರೋ ಕಾರಣಕ್ಕೆ ಕೆಳಭಾಗದ ತುಂಗಭದ್ರಾ ನದಿಯಲ್ಲಿ ನೀರೇ ಇಲ್ಲ..ಮಂತ್ರಾಲಯದ ರಾಯರ ಮಠದ ಪಕ್ಕ ಹರಿಯೋ ತುಂಗಭದ್ರೆಯ ಒಡಲು ಸಂಪೂರ್ಣವಾಗಿ ಖಾಲಿಯಾಗಿದೆ..ಅದ್ರಲ್ಲೂ ರಾಯರ ದರ್ಶನಕ್ಕೆ ಬರೊ ಭಕ್ತರು ಮೊದಲು ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ನಂತ್ರ ರಾಯರ ಸನ್ನಿಧಿಗೆ ಹೊಗೊದು ಪ್ರತೀತಿ ಹಾಗೂ ಸಂಪ್ರದಾಯವಿದೆ..ಆದ್ರೆ ಇತ್ತೀಚೆಗೆ ನದಿ ಬರಿದಾಗಿರೊ ಹಿನ್ನೆಲೆ ರಾಯರ ಭಕ್ತರು ತುಂಗಭದ್ರಾ ನದಿಯಲ್ಲಿ (Tungabhadra river ) ಪುಣ್ಯಸ್ನಾನ ಮಾಡಲಾಗದೇ ಬೇಸರಗೊಂಡಿದ್ದಾರೆ..ನದಿಯಲ್ಲಿ ಬರೀ ಗಿಡಗಂಟಿಗಳು, ಬಂಡೆಗಳೇ ಕಾಣ್ತಿವೆ..ಪುಣ್ಯಸ್ನಾನಕ್ಕೆಂದು ನದಿ ಬಳಿ ಬರೋ ಭಕ್ತರು ನದಿ ಖಾಲಿಯಾಗಿರೋದ್ರಿಂದ.

ಇತ್ತ ತುಂಗಭದ್ರಾ ನದಿಯಲ್ಲಿ ನೀರಿಲ್ಲದ ಹಿನ್ನೆಲೆ ರಾಯರ ಮಠದ ಆಡಳಿತ ಮಂಡಳಿ ಕೂಡ ಈ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ..ಭಕ್ತರಿಗೆ ಅನಾನುಕೂಲತೆ ಆಗದೇ ಇರೋ ಹಾಗೇ ಕ್ರಮಗಳನ್ನ ಕೈಗೊಂಡಿದ್ದಾರೆ..ನದಿಯಲ್ಲಿ ಪುಣ್ಯ ಸ್ನಾನಕ್ಕೆ ನೀರಿನ ಬರವಿರೊ ಹಿನ್ನೆಲೆ ನದಿ ದಡದಲ್ಲಿ ಸ್ನಾನ ಘಟ್ಟಗಳನ್ನ ನಿರ್ಮಿಸಿಲಾಗಿದೆ..ಜೊತೆಗೆ ತುಂಗಭದ್ರಾ ನದಿಗೆ ಹೆಚ್ಚುವರಿ ನೀರು ಹರಿಸುವಂತೆ ಸಂಬಂಧಪಟ್ಟ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಲಾಗುವುದು ಅಂತ ಶ್ರೀಗಳು ತಿಳಿಸಿದ್ದಾರೆ..ಅದೆನೆ ಇರ್ಲಿ ಒಂದು ಕಡೆ ರಾಯರ ಆರಾಧನಾ ಮಹೋತ್ಸವದ ಸಂಭ್ರಮ ಮತ್ತೊಂದು ಕಡೆ ತುಂಗಭದ್ರಾ ನದಿಯಲ್ಲಿ ನೀರಲ್ಲಿ ಪುಣ್ಯಸ್ನಾನವಿಲ್ಲದೇ ಭಕ್ತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ..ಆದ್ರೆ ಮಳೆರಾಯ ಕೃಪೆ ತೋರಿ ಸಮರ್ಪಕ ಮಳೆ ಹರಿಸಬೇಕಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:17 pm, Sat, 19 August 23

Follow us on