ಜೆಡಿ(ಎಸ್) ಶಾಸಕ ವೀರಭದ್ರಯ್ಯ ರಾಜಕೀಯ ನಿವೃತ್ತಿ ಘೋಷಿಸಿರುವುದು ಒತ್ತಡದಿಂದಾಗಿಯೇ ಅಥವಾ ಕೌಟುಂಬಿಕ ಕಾರಣಗಳಿಂದಾಗಿಯೇ?
ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ವೀರಭದ್ರಯಯ್ಯನವರ ಕಾರ್ಯವೈಖರಿ ಮತ್ತು ಸಂಘಟನಾ ಕಾರ್ಯದಲ್ಲಿ ತೋರುತ್ತಿದ್ದ ನಿರ್ಲಿಪ್ತತೆಯಿಂದ ಅಸಂತುಷ್ಟರಾಗಿದ್ದರು.
ತುಮಕೂರು: ಮಧುಗಿರಿಯ ಜೆಡಿ(ಎಸ್) ಶಾಸಕ ಎಮ್ ವಿ ವೀರಭದ್ರಯ್ಯ (MLA MV Veerabhadraiah) ಅವರು ದಿಢೀರನೆ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಪ್ರಾಯಶಃ ಇದನ್ನು ನಿರೀಕ್ಷಿಸಲಾಗಿತ್ತು. ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರು ವೀರಭದ್ರಯಯ್ಯನವರ ಕಾರ್ಯವೈಖರಿ ಮತ್ತು ಸಂಘಟನಾ ಕಾರ್ಯದಲ್ಲಿ ತೋರುತ್ತಿದ್ದ ನಿರ್ಲಿಪ್ತತೆಯಿಂದ ಅಸಂತುಷ್ಟರಾಗಿದ್ದರು ಮತ್ತು ಕಾಂಗ್ರೆಸ್ ಮಾಜಿ ಶಾಸಕ ಕೆ ಎನ್ ರಾಜಣ್ಣ (KN Rajanna) ಎದುರು ವೀರಭದ್ರಯ್ಯ ವೀಕ್ ಅನಿಸುತ್ತಿದ್ದಾರೆ ಎಂಬ ಭಾವನೆ ಅವರಲ್ಲಿ ಮೂಡಿತ್ತು. ಇದನ್ನೆಲ್ಲ ಗ್ರಹಿಸಿಕೊಂಡೇ ವೀರಭಧ್ರಯ್ಯ ಕೌಟುಂಬಿಕ ಕಾರಣಗಳ ನೆಪವೊಡ್ಡಿ ಸಕ್ರಿಯ ರಾಜಕಾರಣವನ್ನು ತೊರೆದಿರುವ ಘೋಷಣೆ ಮಾಡಿದ್ದಾರೆ.
Latest Videos