ತಿಂಗಳು ಕಾಲ ರಾಜಾತಿಥ್ಯ ಸ್ವೀಕರಿಸಿದ್ದ ಆನೆಗಳಿಗೆ ಮೈಸೂರು ಅರಮನೆಯಿಂದ ತಮ್ಮ ಶಿಬಿರಕ್ಕೆ ಹೋಗುವ ಮನಸ್ಸಿಲ್ಲ!

ತಿಂಗಳು ಕಾಲ ರಾಜಾತಿಥ್ಯ ಸ್ವೀಕರಿಸಿದ್ದ ಆನೆಗಳಿಗೆ ಮೈಸೂರು ಅರಮನೆಯಿಂದ ತಮ್ಮ ಶಿಬಿರಕ್ಕೆ ಹೋಗುವ ಮನಸ್ಸಿಲ್ಲ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 07, 2022 | 2:35 PM

ಆದರೆ ಸುಮಾರು ಒಂದು ತಿಂಗಳು ಕಾಲ ಆರಮನೆ ಆವರಣದಲ್ಲಿ ರಾಜಾತಿಥ್ಯ ಮತ್ತು ಬಗೆ ಬಗೆಯ ಭಕ್ಷ್ಯಗಳನ್ನು ಸೇವಿಸುತ್ತಾ ಹಾಯಾಗಿದ್ದ ಅನೆಗಳಿಗೆ ಶಿಬಿರಗಳಿಗೆ ವಾಪಸ್ಸು ಹೋಗಲು ಮನಸ್ಸಾಗುತ್ತಿಲ್ಲ.

ಮೈಸೂರಿನ ವಿಶ್ವಪ್ರಸಿದ್ಧ ದಸರಾ ಮಹೋತ್ಸವ (Dasara Utsav) ಮುಕ್ತಾಯಗೊಂಡಿದೆ, ಹಾಗಾಗಿ ಜಂಬೂ ಸವಾರಿಯಲ್ಲಿ ಪಾಲ್ಗೊಂಡಿದ್ದ ಅಭಿಮನ್ಯು (Abhimanyu) ಮತ್ತು ಇತರ ಆನೆಗಳನ್ನು ಶುಕ್ರವಾರದಂದು ಸಾಂಪ್ರದಾಯಿಕವಾಗಿ ಬೀಳ್ಕೊಡಲಾಯಿತು. ಆದರೆ ಸುಮಾರು ಒಂದು ತಿಂಗಳು ಕಾಲ ಆರಮನೆ ಆವರಣದಲ್ಲಿ ರಾಜಾತಿಥ್ಯ ಮತ್ತು ಬಗೆ ಬಗೆಯ ಭಕ್ಷ್ಯಗಳನ್ನು ಸೇವಿಸುತ್ತಾ ಹಾಯಾಗಿದ್ದ ಅನೆಗಳಿಗೆ ಶಿಬಿರಗಳಿಗೆ (camps) ವಾಪಸ್ಸು ಹೋಗಲು ಮನಸ್ಸಾಗುತ್ತಿಲ್ಲ. ಆ ಮನಸ್ಥಿತಿಯ ಆನೆಯೊಂದು ಲಾರಿ ಹತ್ತಿ ಸ್ವಸ್ಥಾನಕ್ಕೆ ತೆರಳುವ ಬದಲು ಅರಮನೆಯತ್ತ ವಾಪಸ್ಸು ಹೋಗುವುದನ್ನು ವಿಡಿಯೋದಲ್ಲಿ ನೋಡಬಹುದು.