Jaggesh: ‘ಆ ಮಠ ನನ್ನ ಜಾತಿ ನೋಡಿಲ್ಲ, ಶೂದ್ರನಾದ ನನಗೆ ದೊಡ್ಡ ಸ್ಥಾನ ನೀಡಿದೆ’: ಜಗ್ಗೇಶ್
ದೇವರ ಮೇಲೆ ತಮಗೆ ಇರುವ ಭಕ್ತಿ ಬಗ್ಗೆ ಜಗ್ಗೇಶ್ ಅವರು ಅನೇಕ ಬಾರಿ ಹೇಳಿಕೊಂಡಿದ್ದುಂಟು. ಈಗ ಅವರು ಮತ್ತೊಮ್ಮೆ ಆ ಬಗ್ಗೆ ಪ್ರಸ್ತಾಪಿಸಿದ್ದಾರೆ.
ವಿಜಯ್ ಪ್ರಸಾದ್ ನಿರ್ದೇಶನದ ‘ತೋತಾಪುರಿ’ (Totapuri) ಚಿತ್ರತಂಡ ಸುದ್ದಿಗೋಷ್ಠಿ ಆಯೋಜಿಸಿತ್ತು. ಈ ಸಿನಿಮಾದಲ್ಲಿನ ಕೆಲವು ಅಂಶಗಳ ಬಗ್ಗೆ ಜಗ್ಗೇಶ್ ಮಾತನಾಡಿದರು. ಈ ವೇಳೆ ಅವರು ರಾಘವೇಂದ್ರ ಸ್ವಾಮಿಗಳ (Raghavendra Swamy) ಬಗ್ಗೆ ಹಾಗೂ ರಾಯರ ಮಠದ ಬಗ್ಗೆ ಒಂದಷ್ಟು ವಿಷಯಗಳನ್ನು ಹಂಚಿಕೊಂಡರು. ‘ಶೂದ್ರನಾದ ನನಗೆ ಆ ಮಠ ಒಂದು ಅದ್ಭುತ ಸ್ಥಾನ ಕೊಟ್ಟಿದೆ. ಆ ಮಠ ನನ್ನ ಜಾತಿ ನೋಡಿಲ್ಲ. ನನ್ನಂಥವನನ್ನು ಕರೆದುಕೊಂಡು ಹೋಗಿ ಬೃಂದಾವನದ ಮುಂದೆ ಕೂರಿಸುತ್ತಾರೆ’ ಎಂದು ಜಗ್ಗೇಶ್ (Jaggesh) ಹೇಳಿದ್ದಾರೆ. ಗುರು ರಾಯರ ಬಗ್ಗೆ ತಮಗೆ ಇರುವ ಭಕ್ತಿಯ ಕುರಿತು ಈ ಹಿಂದೆ ಕೂಡ ಅವರು ಅನೇಕ ಬಾರಿ ಹೇಳಿಕೊಂಡಿದ್ದುಂಟು.
Latest Videos
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ

