ದಿನೇದಿನೆ ತುಟ್ಟಿಯಾಗುತ್ತಿರುವ ಇಂಧನದ ಹಿನ್ನೆಲೆಯಲ್ಲಿ ಇನ್ನು ಇಲೆಕ್ಟ್ರಿಕ್ ವಾಹನಗಳದ್ದೇ ಕಾರುಬಾರು ಮತ್ತು ದರ್ಬಾರು!

ದಿನೇದಿನೆ ತುಟ್ಟಿಯಾಗುತ್ತಿರುವ ಇಂಧನದ ಹಿನ್ನೆಲೆಯಲ್ಲಿ ಇನ್ನು ಇಲೆಕ್ಟ್ರಿಕ್ ವಾಹನಗಳದ್ದೇ ಕಾರುಬಾರು ಮತ್ತು ದರ್ಬಾರು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 18, 2021 | 8:53 PM

ಎಲೆಕ್ಟ್ರಿಕ್ ಕಾರುಗಳ ರೇಸ್ನಲ್ಲಿ ಟಾಟಾ ನಿಕ್ಸಾನ್ ಮುಂಚೂಣಿಯಲ್ಲಿದೆ. ನೋಡಲು ಅತ್ಯಾಕರ್ಷಕವಾಗಿರುವ ಈ ಎಲೆಕ್ಟ್ರಿಕ್ ಕಾರಿನ ಬೆಲೆ ರೂ. 13.99 ಲಕ್ಷದಿಂದ ರೂ 16.25 ಲಕ್ಷ. ಈ ಕಾರಿನ ಮತ್ತೊಂದು ಸೊಬಗು ಅಂದರೆ ಸಿಂಗಲ್ ಚಾರ್ಜ್​ನಲ್ಲಿ ಅದು 312 ಕಿಮೀ ಕ್ರಮಿಸುತ್ತದೆ.

ಇನ್ನೇನಿದ್ದರೂ ಎಲೆಕ್ಟ್ರಿಕ್ ಬೈಕ್ ಮತ್ತು ಎಲೆಕ್ಟ್ರಿಕ್ ಕಾರುಗಳದ್ದೇ ಕಾರುಬಾರು ಅನ್ನೋದು ದಿನದಿಂದ ದಿನಕ್ಕೆ ಖಚಿತವಾಗುತ್ತಿದೆ. ಅನೇಕ ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನ ಉತ್ಪಾದಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುವ ಪೈಪೋಟಿಗೆ ಬಿದ್ದಿವೆ. ಕಂಪನಿಗಳ ನಿರ್ಧಾರ ಸರಿಯಾದುದ್ದೇ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕೈಗೆಟುಕದಂತಾದಾಗ ಕೇವಲ ಸ್ಥಿತಿವಂತರು, ಶ್ರಮವಿಲ್ಲದೆ ಅಡ್ಡದಾರಿಗಳ ಮೂಲಕ ಸಂಪಾದನೆ ಮೂಲಗಳನ್ನು ಕಂಡುಕೊಂಡಿರುವವರು ಮಾತ್ರ ಇಲೆಕ್ಟ್ರಿಕ್ ವಾಹನಗಳ ಬಗ್ಗೆ ಯೋಚನೆ ಮಾಡಲಾರರು.

ಅಂದಹಾಗೆ, ಭಾರತದಲ್ಲಿ ಯಾವ್ಯಾವ ಕಂಪನಿಗಳ ಎಲೆಕ್ಟ್ರಿಕ್ ಕಾರುಗಳು ಟಾಪ್ 5 ಅನಿಸಿಕೊಂಡಿವೆ, ಅವುಗಳ ಬೆಲೆ ಎಷ್ಟು ಎನ್ನವುದನ್ನು ತಿಳಿದುಕೊಳ್ಳೋಣ. ಎಲೆಕ್ಟ್ರಿಕ್ ಕಾರುಗಳ ರೇಸ್ನಲ್ಲಿ ಟಾಟಾ ನಿಕ್ಸಾನ್ ಮುಂಚೂಣಿಯಲ್ಲಿದೆ. ನೋಡಲು ಅತ್ಯಾಕರ್ಷಕವಾಗಿರುವ ಈ ಎಲೆಕ್ಟ್ರಿಕ್ ಕಾರಿನ ಬೆಲೆ ರೂ. 13.99 ಲಕ್ಷದಿಂದ ರೂ 16.25 ಲಕ್ಷ. ಈ ಕಾರಿನ ಮತ್ತೊಂದು ಸೊಬಗು ಅಂದರೆ ಸಿಂಗಲ್ ಚಾರ್ಜ್ನಲ್ಲಿ ಅದು 312 ಕಿಮೀ ಕ್ರಮಿಸುತ್ತದೆ. ಅಂದರೆ ಒಮ್ಮೆ ರೀಚಾರ್ಜ್ ಮಾಡಿಕೊಂಡು ಬೆಂಗಳೂರಿನಿಂದ ಮೈಸೂರಿಗೆ ಹೋಗಿ ಬರಬಹುದು.

ಟಾಟಾ ಸಂಸ್ಥೆಯದ್ದೇ ಆಗಿರುವ ಟಾಟಾ ಟಿಗೋರ್ ನಿಮಗೆ ಸ್ವಲ್ಪ ಕಡಿಮೆ ದರದಲ್ಲಿ ಸಿಗುತ್ತದೆ. ಇದರ ಎಕ್ಸ್ ಶೋರೂಮ್ ಬೆಲೆ ರೂ. 11.99 ಲಕ್ಷ. ಈ ಕಾರನ್ನು ಒಮ್ಮೆ ರಿಚಾರ್ಜ್ ಮಾಡಿಸಿ 250 ಕಿಮೀ ಕ್ರಮಿಸಬಹುದು. ಎಮ್ ಜಿ ಜೆಡ್ ಎಸ್ ಎಲೆಕ್ಟ್ರಿಕ್ ಕಾರು ಸಹ ಬೇಡಿಕೆಯಲ್ಲಿದ್ದು ಇದರ ಬೆಲೆ ರೂ. 20.88 ಲಕ್ಷಗಳಿಂದ ರೂ. 23.58 ಲಕ್ಷಗಳಂತೆ.

ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರಿನ ಕುರಿತು ನಾವು ಹಿಂದೆಯೂ ಚರ್ಚಿಸಿದ್ದೇವೆ. ಇದರ ಬೆಲೆ ರೂ. 23.75 ಲಕ್ಷಗಳಿಂದ 23.94 ಲಕ್ಷ. ಎಲೆಕ್ಟ್ರಿಕ್ ಕಾರುಗಳ ಸೆಗ್ಮೆಂಟ್ನಲ್ಲಿ ಅತಿ ಕಡಿಮೆ ಬೆಲೆಯ ಕಾರು ಅಂದರೆ ಮಹಿಂದ್ರಾ ಇ-ವೆರಿಟ್ಟೋ. ಇದರ ಬೆಲೆ ರೂ 9.13 ಲಕ್ಷಗಳಿಂದ ರೂ. 11.6 ಲಕ್ಷಗಳು.

ಎಮ್ ಜಿ ಜೆಡ್ ಎಸ್, ಹ್ಯುಂಡೈ ಕೋನಾ ಮತ್ತು ಮಹಿಂದ್ರಾ ಇ-ವೆರಿಟ್ಟೋ ಕಾರು ಒಮ್ಮೆ ರಿಚಾರ್ಜ್ ಮಾಡಿದರೆ ಎಷ್ಟು ಕಿಮೀ ಓಡುತ್ತವೆ ಎನ್ನುವುದನ್ನು ಕಂಪನಿಗಳು ಬಹಿರಂಗಪಡಿಸಿಲ್ಲ.

ಇದನ್ನೂ ಓದಿ:  ವೇದಿಕೆ ಮೇಲೆಯೇ ಸ್ಪರ್ಧಿಗೆ ಕಿಸ್ ಮಾಡಿ, ಕೆನ್ನೆ ಕಚ್ಚಿದ ಕನ್ನಡದ ‘ಜೋಶ್​’ ಸಿನಿಮಾ ನಟಿ; ವಿಡಿಯೋ ವೈರಲ್