[lazy-load-videos-and-sticky-control id=”abWr-eS9zJ8″]
ಗದಗ: ಕೊರೊನಾ ಸಂಕಷ್ಟದ ಸಮಯದಲ್ಲೂ ಆಸ್ಪತ್ರೆಗಳು ಜನ ಬಳಿ ಹಣ ಪೀಕುತ್ತಿವೆ. ಕೊರೊನಾ ಮಹಾಮಾರಿಯಿಂದ ಎಲ್ಲವನ್ನೂ ಕಳೆದುಕಕೊಂಡ ಮಂದಿಗೆ ಆಸ್ಪತ್ರೆಯ ಖರ್ಚು ಭರಿಸುವುದು ಅಸಾಧ್ಯ. ಸರ್ಕಾರ ಕೂಡ ಈ ಬಗ್ಗೆ ಕಠಿಣ ಕ್ರಮ ಕೈಗೊಂಡ್ರು ಕೆಲ ಖಾಸಗಿ ಆಸ್ಪತ್ರೆಗಳು ಹಣ ವಸೂಲಿ ಮಾಡುತ್ತಿವೆ.
ಜಿಲ್ಲೆಯ ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ಪ್ಯಾಕೇಜ್ ರೇಟ್ ಫಿಕ್ಸ್ ಮಾಡಲಾಗಿದೆ. 1 ದಿನದ ಚಿಕಿತ್ಸೆಗೆ ₹20,000, ₹15,000 ಹೀಗೆ ದರ ನಿಗದಿ ಮಾಡಲಾಗಿದೆ. ಒಂದು ವಾರ ಸೋಂಕಿತರು ಚಿಕಿತ್ಸೆ ಪಡೆದ್ರೆ ಲಕ್ಷ ಲಕ್ಷ ವಸೂಲಿ ಮಾಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳ ಚಿಕಿತ್ಸೆ ವೆಚ್ಚ ಕೇಳಿ ಸಾರ್ವಜನಿಕರು ಕಂಗಾಲಾಗಿದ್ದಾರೆ. ಇಷ್ಟಾದ್ರೂ ಖಾಸಗಿ ಆಸ್ಪತ್ರೆಗಳ ಬಗ್ಗೆ ಜಿಲ್ಲಾಡಳಿತ ಮೌನವಾಗಿದೆ.
ಜಿಮ್ಸ್ ಆಸ್ಪತ್ರೆ ಈಗಾಗಲೇ ಸೋಂಕಿತರಿಂದ ಭರ್ತಿಯಾಗಿದೆ. ಸದ್ಯ ಸೋಂಕಿತರಿಗೆ ಮೊರಾರ್ಜಿ ವಸತಿ ಶಾಲೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಸೂಕ್ತ ಮಾಹಿತಿ ಇಲ್ಲದೆ ಜಿಲ್ಲೆಯ ಕೊರೊನಾ ಸೋಂಕಿತರು ಖಾಸಗಿ ಆಸ್ಪತ್ರೆಗಳಿಗೆ ತೆರಳುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಿಗೆ ಮೂಗುದಾರ ಹಾಕುವಲ್ಲಿ ಜಿಲ್ಲಾಡಳಿತ ನಿರ್ಲಕ್ಷ್ಯವಹಿಸುತ್ತಿದೆ. ಪ್ರಸ್ತುತ 628 ಆಕ್ಟಿವ್ ಕೇಸ್ಗಳಿವೆ.
Published On - 7:57 am, Mon, 27 July 20