ಬಿಜೆಪಿ ಮತ್ತುRSS ಸದಸ್ಯರ ಮಕ್ಕಳು ಶಸ್ತ್ರಾಸ್ತ್ರ ಹಿಡಿದುಕೊಳ್ಳುತ್ತಾರಾ?: ಪ್ರಿಯಾಂಕ್ ಖರ್ಗೆ ಕಿಡಿ

Updated on: Oct 01, 2025 | 5:58 PM

ರಾಜ್ಯ ಸಭಾ ಸದಸ್ಯರೊಬ್ಬರು ಹಿಂದೂಗಳು ಧರ್ಮ ರಕ್ಷಣೆಗಾಗಿ ಶಸ್ತ್ರಾಸ್ತ್ರಗಳನ್ನಿಟ್ಟುಕೊಳ್ಳಬೇಕು ಎಂದಿದ್ದಕ್ಕೆ ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ, ಯಾರೇ ಶಸ್ತ್ರಾಸ್ತ್ರಗಳನ್ನಿಟ್ಟುಕೊಂಡು ಓಡಾಡಿದರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತದೆ. ಧರ್ಮ ರಕ್ಷಣೆಗಾಗಿ ಶಸ್ತ್ರಾಸ್ತ್ರ ಹಿಡಿಯಿರಿ ಎನ್ನುವ ಬಿಜೆಪಿ ಮತ್ತುRSS ಸದಸ್ಯರುಗಳು ತಮ್ಮ ಮಕ್ಕಳ ಕೈಗೆ ಶಸ್ತ್ರಾಸ್ತ್ರ ನೀಡಿ ಧರ್ಮ ರಕ್ಷಣೆಗೆ ಬಿಡಲಿ ಎಂದಿದ್ದಾರೆ.

ಬೆಂಗಳೂರು, ಅಕ್ಟೋಬರ್ 1: ಬಿಜೆಪಿ ಮತ್ತು ಆರ್​ಎಸ್​ಎಸ್​ನವರಿಬ್ಬರೂ ಧರ್ಮ ರಕ್ಷಣೆಗಾಗಿ ಶಸ್ತ್ರಾಸ್ತ್ರವನ್ನಿಟ್ಟುಕೊಳ್ಳಿ, 3-4 ಮಕ್ಕಳು ಮಾಡಿಕೊಳ್ಳಿ ಎನ್ನುತ್ತಾರೆ. ಆದರೆ ಆರ್​ಎಸ್​ಎಸ್​ನವರು ಮದುವೆ ಮಕ್ಕಳಿಲ್ಲದೆ ಜೀವನ ಮಾಡುತ್ತಾರೆ. ಬೇಕಾದರೆ ಅವರು ತಮ್ಮ ಮಕ್ಕಳ ಕೈಗೆ ಶಸ್ತ್ರಾಸ್ತ್ರ ನೀಡಿ ಧರ್ಮ ರಕ್ಷಣೆಗಾಗಿ ಬಿಡಲಿ ಎಂದು ಪ್ರಿಯಾಂಕ್ ಖರ್ಗೆ ಬಿಜೆಪಿ ಮತ್ತು RSS ಗೆ  ಟಾಂಗ್ ಕೊಟ್ಟಿದ್ದಾರೆ. ಹಿಂದೂಗಳು ಧರ್ಮ ರಕ್ಷಣೆಗಾಗಿ ಶಸ್ತ್ರಾಸ್ತ್ರಗಳನ್ನಿಟ್ಟುಕೊಳ್ಳಬೇಕು ಎಂಬ  ರಾಜ್ಯಸಭಾ ಸದಸ್ಯ ನಾರಾಯಣ ಸಾ ಬಾಂಡಿಗೆ ಅವರ ಮಾತಿಗೆ ಪ್ರತಿಕ್ರಿಯಿದ ಖರ್ಗೆ ಹಿಂದೂಗಳಾಗಲಿ, ಮುಸ್ಲಿಮರಾಗಲಿ ಶಸ್ತ್ರಾಸ್ತ್ರಗಳನ್ನಿಟ್ಟುಕೊಂಡು ಓಡಾಡಿದಲ್ಲಿ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ