ನಿಮಗಾಗಿ ದುಡಿಯುತ್ತಿದ್ದೇವೆ, ದುಡಿತವನ್ನು ಪರಿಗಣಿಸಿ ಪಗಾರ ಕೊಡಿ ಅಂತ ಜನರಲ್ಲಿಗೆ ಹೋಗಿ: ಕಾರ್ಯಕರ್ತರಿಗೆ ಪ್ರಿಯಾಂಕ್ ಖರ್ಗೆ ಸಲಹೆ

|

Updated on: Apr 11, 2024 | 11:07 AM

ಈಗ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ, ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ, ಹಾಗಾಗಿ ಪಕ್ಷದ ಕಾರ್ಯಕರ್ತರು ಜನರಲ್ಲಿಗೆ ಯಾವುದೇ ಅಳುಕಿಲ್ಲದೆ ಹೋಗಿ ಆತ್ಮವಿಶ್ವಾಸದಿಂದ ಮತ ಕೇಳಬೇಕು, ನಿಮಗಾಗಿ ದುಡಿದಿದ್ದೇವೆ, ನಮ್ಮ ಶ್ರಮ ಮತ್ತು ದುಡಿಮೆಗೆ ಸಂಬಳ ಕೊಡಿ ಅಂತ ಅವರಿಗೆ ಮನವಿ ಮಾಡಬೇಕು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಕಲಬುರಗಿ: ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಬಿರುಸುಗೊಂಡಿದೆ. ಇಂದು ಕ್ಷೇತ್ರದ ಕಾಳಗಿ-ಕೊಡ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಾರ್ಯಕರ್ತರ ಸಭೆಯಲ್ಲಿ ಮಾತಾಡಿದ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರು ತಪ್ಪು ಮತ್ತು ಸುಳ್ಳು ಮಾಹಿತಿಯ ಜಾಹೀರಾತುಗಳನ್ನು (misleading ads) ನೀಡಿ ಜನರಿಗೆ ಮೋಸ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯವು ಪತಂಜಲಿ ಸಂಸ್ಥೆಯ ಬಾಬಾ ರಾಮದೇವ್ ಅವರಿಗೆ ಛೀಮಾರಿ ಹಾಕಿದನ್ನು ಉಲ್ಲೇಖಿಸಿ ಅಲ್ಲಿ ಚೋರ್ ಗುರು ಇಲ್ಲಿ… ಹೇಳುತ್ತಾ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾರನ್ನು (Bhagwant Khuba) ಮೂದಲಿಸಿದರು. ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ನಾವು ಜನರಿಗೆ ನೀಡಿದ ಆಶ್ವಾಸನೆಗಳನ್ನು ಈಡೇರಿಸಿದೆ, ಮತ್ತು 2013-2018 ರಲ್ಲಿ ಸಿದ್ದರಾಮಯ್ಯ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಮತ್ತು ಈಗ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ, ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ, ಹಾಗಾಗಿ ಪಕ್ಷದ ಕಾರ್ಯಕರ್ತರು ಜನರಲ್ಲಿಗೆ ಯಾವುದೇ ಅಳುಕಿಲ್ಲದೆ ಹೋಗಿ ಆತ್ಮವಿಶ್ವಾಸದಿಂದ ಮತ ಕೇಳಬೇಕು, ನಿಮಗಾಗಿ ದುಡಿದಿದ್ದೇವೆ, ನಮ್ಮ ಶ್ರಮ ಮತ್ತು ದುಡಿಮೆಗೆ ಸಂಬಳ ಕೊಡಿ ಅಂತ ಅವರಿಗೆ ಮನವಿ ಮಾಡಬೇಕು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಬಿಜೆಪಿ ಅಧಿಕಾರದಲ್ಲಿ ಇಲ್ಲದ ಕಡೆ ರಾಜ್ಯಪಾಲರ ಮೂಲಕ ಆಳ್ವಿಕೆ; ರಾಜ್ಯಪಾಲರ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ