AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯಲ್ಲಿ ಧೂಪ ಹಾಕುವುದರ ಪ್ರಯೋಜನವೇನು? ಇಲ್ಲಿದೆ ಮಾಹಿತಿ

ಮನೆಯಲ್ಲಿ ಧೂಪ ಹಚ್ಚುವ ಬಗ್ಗೆ ಶಾಸ್ತ್ರದಲ್ಲಿ ಏನು ಹೇಳಲಾಗಿದೆ? ಧೂಪ ಹಚ್ಚುವುದರಿಂದ ಇರುವ ಪ್ರಯೋಜನಗಳೇನು? ಇದರ ಹಿಂದಿರುವ ವೈಜ್ಞಾನಿಕ ಕಾರಣವೇನು? ಮನೆಯ ಯಾವ ಭಾಗದಲ್ಲಿ ಧೂಪ ಹಚ್ಚಬೇಕು ಎಂಬಿತ್ಯಾದಿ ವಿಚಾರಗಳ ಬಗ್ಗೆ ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ.

ಗಣಪತಿ ಶರ್ಮಾ
|

Updated on: Apr 11, 2024 | 7:02 AM

Share

ಪ್ರತಿಯೊಂದು ಮನೆಗಳಲ್ಲಿಯೂ ಕಲಹ, ಸಂಘರ್ಷ ಏನಾದರೂ ಒಂದು ತಾಪತ್ರಯ ದಿನ ಬೆಳಗಾದರೆ ಇದ್ದೇ ಇರುತ್ತದೆ. ಹಾಗಾದರೆ ಇದಕ್ಕೆಲ್ಲ ಪರಿಹಾರವೇನು ಎಂದು ಕೇಳಿದರೆ, ನಮ್ಮ ಶಾಸ್ತ್ರಗಳಲ್ಲಿ ಹೇಳಿರುವ ಪ್ರಕಾರ, ಧೂಪ ಶಾಸ್ತ್ರ ಎಂಬುದು ಒಂದಿದೆ. ಅಂದರೆ ಮನೆಯಲ್ಲಿ ದೂಪ ಹಚ್ಚುವುದು. ಮನೆಯಲ್ಲಿ ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಧೂಪ ಹಚ್ಚುವುದರಿಂದ ಅನೇಕ ಸಂಕಷ್ಟಗಳ ನಿವಾರಣೆಯಾಗುತ್ತದೆ. ಇದಕ್ಕೆ ಕೇವಲ ಶಾಸ್ತ್ರ ಮಾತ್ರವಲ್ಲದೆ ವೈಜ್ಞಾನಿಕ ಕಾರಣಗಳೂ ಇವೆ. ಆ ಬಗ್ಗೆ ಬಸವರಾಜ ಗುರೂಜಿ ವಿವರಿಸಿದ್ದಾರೆ.

ಧೂಪವನ್ನು ಬೆಳಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ ಹಚ್ಚುವುದು ಸೂಕ್ತ. ಇದರಿಂದ ಮನೆಯಲ್ಲಿ ಉತ್ತಮವಾದ ವಾತಾವರಣವಿರುತ್ತದೆ. ವೈಜ್ಞಾನಿಕವಾಗಿ ನೋಡಲು ಹೋದರೆ, ಧೂಪ ಹಚ್ಚುವುದರಿಂದ ಮನೆಯಲ್ಲಿ ಪಸರಿಸುವ ಸುಗಂಧ ದುಷ್ಟ ಶಕ್ತಿಗಳು ಮನೆಯನ್ನು ಪ್ರವೇಶಿಸಿದಂತೆ ತಡೆಯುತ್ತದೆ. ವೈಜ್ಞಾನಿಕವಾಗಿ ನೋಡುವುದಾದರೆ, ವೈರಸ್​​ನಂತ ರೋಗಕಾರಕಗಳು ಮನೆಗಳ ಪ್ರವೇಶಿಸಿದಂತೆ ಧೂಪದ ಹೊಗೆ ತಡೆಯುತ್ತದೆ.

ಆದರೆ ಯಾವುದೂ ಅತಿಯಾಗಬಾರದು. ಮಿತಿಯಲ್ಲಿ ಧೂಪವನ್ನು ಹಚ್ಚುವುದರಿಂದ ಆರೋಗ್ಯಕ್ಕೂ, ಮನಸ್ಸಿನ ನೆಮ್ಮದಿಗೂ ಬಹಳ ಉತ್ತಮ ಎಂದು ಗುರೂಜಿ ಹೇಳುತ್ತಾರೆ.

ಧೂಪ ಜಾಸ್ತಿ ಹಚ್ಚಿದರೆ ಸಣ್ಣ ಪುಟ್ಟ ಮಕ್ಕಳ ಉಸಿರಾಟಕ್ಕೆ ತೊಂದರೆ ಆಗಬಹುದು, ಶ್ವಾಸಕೋಶಕ್ಕೆ ಹಾನಿಯಾಗಬಹುದು. ಹಬ್ಬ ಹರಿದಿನಗಳಲ್ಲಿ ಮಿತವಾಗಿ ಧೂಪ ಹಚ್ಚುವುದು ಶ್ರೇಯಸ್ಕರ. ಮನೆಯ ಈಶಾನ್ಯ ಮೂಲೆಯಲ್ಲಿ ಧೂಪ ಹಚ್ಚುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಪಸರಿಸುತ್ತದೆ. ಆಯುರ್ವೇದದಲ್ಲಿ ಕೂಡ ಧೂಪ ಬಹಚ್ಚುವುದರ ಬಗ್ಗೆ ವಿಶೇಷ ಉಲ್ಲೇಖವಿದೆ ಎಂದು ಅವರು ಹೇಳಿದ್ದಾರೆ.

Follow Us
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!