ಮನೆಯಲ್ಲಿ ಎನರ್ಜಿ ಚೇಂಜ್​ ಆಗ್ಬೇಕು ಅಂದ್ರೆ ಏನು ಮಾಡ್ಬೇಕು?; ಪ್ರಿಯಾಂಕಾ ಉಪೇಂದ್ರ ಕೊಟ್ರು ಟಿಪ್ಸ್​

| Updated By: ರಾಜೇಶ್ ದುಗ್ಗುಮನೆ

Updated on: Mar 25, 2022 | 3:00 PM

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಿಯಾಂಕಾ, ಫರ್ನಿಚರ್​​ಗಳನ್ನು ಬದಲಾಯಿಸಿದರೆ ಮನೆಯ ಎನರ್ಜಿ ಚೇಂಜ್​ ಆಗುತ್ತದೆ ಎಂದಿದ್ದಾರೆ.

ಕೆಲ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ಒಂದು ಹೊಸ ಎನರ್ಜಿ ಬರುತ್ತದೆ. ಯಾವುದೋ ಹೊಸ ಫರ್ನಿಚರ್ (Furniture) ಮನೆಗೆ ಸೇರ್ಪಡೆ ಆದರೆ, ಲವಲವಿಕೆ ಬರುತ್ತದೆ. ಈ ವಿಚಾರವನ್ನು ನಟಿ ಪ್ರಿಯಾಂಕಾ ಉಪೇಂದ್ರ ಕೂಡ ಹೇಳಿದ್ದಾರೆ. ಬೆಂಗಳೂರಿನ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಲೈಫ್ ಸ್ಟೈಲ್, ಆಟೋ ಮೊಬೈಲ್, ಫರ್ನೀಚರ್ ಎಕ್ಸ್​ಪೋ ನಡೆಯುತ್ತಿದೆ.  ಬೆಳಗ್ಗೆ 10ರಿಂದ ಸಂಜೆ7ರವರೆಗೆ ಟಿವಿ9 ಎಕ್ಸ್​​ಪೋ (Tv9 Expo) ನಡೆಯುತ್ತಿದೆ. ನೂರಾರು ಬ್ರ್ಯಾಂಡ್​ನ ವಸ್ತುಗಳು ಒಂದೇ ವೇದಿಕೆಯಲ್ಲಿ ಲಭ್ಯವಿದೆ. ಪ್ರತಿಷ್ಠಿತ ಕಂಪನಿಯ ಕಾರ್, ಬೈಕ್, ಇಂಟೀರಿಯರ್ ವಸ್ತುಗಳು, ಫರ್ನಿಚರ್ಸ್, ಎಲೆಕ್ಟ್ರಿಕ್ ಐಟಮ್ಸ್ ಒಂದೇ ಸೂರಿನಡಿ ಲಭ್ಯವಿದೆ. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಿಯಾಂಕಾ ಉಪೇಂದ್ರ (Priyanaka Upendra), ಫರ್ನಿಚರ್​​ಗಳನ್ನು ಬದಲಾಯಿಸಿದರೆ ಮನೆಯ ಎನರ್ಜಿ ಚೇಂಜ್​ ಆಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಕೊಂಬು ಇರುವ ಕುದುರೆ ಏರಿ ಬಂದ ಉಪೇಂದ್ರ; ನಿರ್ದೇಶನದ ಹೊಸ ಚಿತ್ರದಲ್ಲಿ ಹೇಗಿದೆ ನೋಡಿ ಉಪ್ಪಿ ಫಸ್ಟ್​ ಲುಕ್​

ಉಪೇಂದ್ರ ಹೊಸ ಚಿತ್ರಕ್ಕೆ ರಾಮ್​ ಗೋಪಾಲ್ ವರ್ಮ ನಿರ್ದೇಶನ; ಗ್ಯಾಂಗ್​ಸ್ಟರ್​ ಕಥೆಯಲ್ಲಿ ಉಪ್ಪಿ