‘ಯಾವ ಸ್ಟಾರ್​ ಕೂಡ ಕನ್ನಡಕ್ಕಿಂತ ದೊಡ್ಡವರಲ್ಲ’; ಚಿತ್ರರಂಗದವರ ಬಗ್ಗೆ ಸಾ.ರಾ. ಗೋವಿಂದು ನೇರನುಡಿ
ಸಾ.ರಾ. ಗೋವಿಂದು

‘ಯಾವ ಸ್ಟಾರ್​ ಕೂಡ ಕನ್ನಡಕ್ಕಿಂತ ದೊಡ್ಡವರಲ್ಲ’; ಚಿತ್ರರಂಗದವರ ಬಗ್ಗೆ ಸಾ.ರಾ. ಗೋವಿಂದು ನೇರನುಡಿ

| Updated By: ಮದನ್​ ಕುಮಾರ್​

Updated on: Dec 31, 2021 | 2:37 PM

‘ಕನ್ನಡದ ಎದುರಿನಲ್ಲಿ ವ್ಯಕ್ತಿಗತವಾಗಿ ಯಾರನ್ನೂ ದೊಡ್ಡವರು ಎಂದು ನಾವು ಹೇಳಲ್ಲ. ರಾಜ್​ಕುಮಾರ್​ ಹಾಕಿದ ಭದ್ರ ತಳಹದಿಯ ಮೇಲೆ ಎಲ್ಲ ಕಲಾವಿದರು ನಿಂತಿದ್ದಾರೆ’ ಎಂದು ಸಾ.ರಾ. ಗೋವಿಂದು ಹೇಳಿದ್ದಾರೆ.

ಮಹಾರಾಷ್ಟ್ರ ಏಕೀಕರಣ ಸಮಿತಿ ನಿಷೇಧಕ್ಕೆ ಕನ್ನಡ ಪರ ಹೋರಾಟಗಾರರು (Pro Kannada Activists) ಪಟ್ಟು ಹಿಡಿದಿದ್ದಾರೆ. ಬೆಳಗಾವಿಯಲ್ಲಿ ಎಂಇಎಸ್​ (MES) ಕಾರ್ಯಕರ್ತರು ನಡೆಸಿದ ಪುಂಡಾಟಿಕೆಯನ್ನು ತೀವ್ರವಾಗಿ ಖಂಡಿಸಲಾಗುತ್ತಿದೆ. ಆದರೆ ಈ ಹೋರಾಟಕ್ಕೆ ಚಿತ್ರರಂಗದವರ (Kannada Film Industry) ಬೆಂಬಲ ಎಷ್ಟರಮಟ್ಟಿಗೆ ಇದೆ ಎಂಬ ಪ್ರಶ್ನೆ ಆಗಾಗ ಕೇಳಿಬರುವುದುಂಟು. ಸಿನಿಮಾ ರಿಲೀಸ್​ ಆಗುತ್ತಿದೆ ಎಂಬ ಕಾರಣಕ್ಕೆ ಕರ್ನಾಟಕ ಬಂದ್​ಗೆ (Karnataka Bandh) ಕೆಲವರು ವಿರೋಧ ವ್ಯಕ್ತಪಡಿಸಿದರು. ಈ ಎಲ್ಲ ಘಟನೆಗಳ ಕುರಿತು ಸಾ.ರಾ. ಗೋವಿಂದು (Sa Ra Govindu) ಪ್ರತಿಕ್ರಿಯೆ ನೀಡಿದ್ದಾರೆ. ‘ಕರ್ನಾಟಕದಲ್ಲಿ ಕನ್ನಡಕ್ಕಿಂತ ದೊಡ್ಡವರು ಯಾರೂ ಇಲ್ಲ ಅಂತ ರಾಜ್​ಕುಮಾರ್​ ಹೇಳುತ್ತಿದ್ದರು. ಕನ್ನಡದ ಎದುರಿನಲ್ಲಿ ವ್ಯಕ್ತಿಗತವಾಗಿ ಯಾರನ್ನೂ ದೊಡ್ಡವರು ಎಂದು ನಾವು ಹೇಳಲ್ಲ. ರಾಜ್​ಕುಮಾರ್​ (Dr. Rajkumar) ಹಾಕಿದ ಭದ್ರ ತಳಹದಿಯ ಮೇಲೆ ಎಲ್ಲ ಕಲಾವಿದರ ನಿಂತಿದ್ದಾರೆ. ನಿಮಗೂ ಜವಾಬ್ದಾರಿ ಇದೆ. ಕರ್ನಾಟಕದ ವಿರುದ್ಧ ದಬ್ಬಾಳಿಕೆ ನಡೀತಾ ಇದೆ. ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ಕೊಡಬೇಡಿ. ಇನ್ನೂ ಕಾಲಾವಕಾಶ ಇದೆ. ಸ್ವಾಭಿಮಾನಿಗಳಾಗಿದ್ದರೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಿ. ಇಬ್ಬರು-ಮೂವರಿಗೋಸ್ಕರ ನಾಡಿನ ಹಿತಾಸಕ್ತಿಯನ್ನು ಬಲಿಕೊಡಲು ಸಾಧ್ಯವಿಲ್ಲ’ ಎಂದು ಸಾ.ರಾ. ಗೋವಿಂದು ಹೇಳಿದ್ದಾರೆ.

ಇದನ್ನೂ ಓದಿ: 

ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯತ್ವ ಪಡೆದು, ಮೇಕೆದಾಟು ಹೋರಾಟಕ್ಕೆ ಬೆಂಬಲ ಕೋರಿದ ಡಿಕೆ ಶಿವಕುಮಾರ್​

ಕಾಂಗ್ರೆಸ್​ನ ಮೇಕೆದಾಟು ಪಾದಯಾತ್ರೆಗೆ ಹಂಸಲೇಖ ಸಾಥ್​; 2 ಹಾಡು ಬರೆಯಲಿರುವ ‘ನಾದಬ್ರಹ್ಮ’