ಟೋಲ್ ಸಂಗ್ರಹ ಮತ್ತು ಹೆದ್ದಾರಿ ಪ್ರಾಧಿಕಾರ ಧೋರಣೆ ವಿರುದ್ಧ ಪ್ರತಿಭಟನೆಗೆ ಪಟ್ಟಾಪಟ್ಟಿ ಚೆಡ್ಡಿಯಲ್ಲಿ ಆಗಮಿಸಿದ ಕನ್ನಡ ಪರ ಸಂಘಟನೆ ಸದಸ್ಯ!
ಪ್ರತಿಭಟನೆಕಾರರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಧೋರಣೆ ಮತ್ತು ಅದನ್ನು ಸಮರ್ಥಿಸಿಕೊಳ್ಳುವ ಸಂಸದ ಪ್ರತಾಪ್ ಸಿಂಹ ವಿರುದ್ಧ ಘೋಷಣೆ ಕೂಗಿದರು.
ಮಂಡ್ಯ: ಹಿಂದೆ ಪಟ್ಟಾಪಟ್ಟಿ ಚೆಡ್ಡಿಯೇ ಮಂಡ್ಯ ಜಿಲ್ಲೆಯ ರೈತರ ಐಡೆಂಟಿಟಿ (identity) ಆಗಿತ್ತು. 80 ಮತ್ತು 90 ರ ದಶಕದ ಸಿನಿಮಾಗಳಲ್ಲಿ ನೀವು ಗಮನಿಸಿರಬಹುದು. ಆ ಭಾಗದ ರೈತರ ಪಾತ್ರಧಾರಿಗಳಿಗೆ ಪಟ್ಟಾಪಟ್ಟಿ ಚೆಡ್ಡಿ ತೊಡಿಸಲಾಗುತ್ತಿತ್ತು. ಜನ ಸಹ ತಮ್ಮ ಐಡೆಂಟಿಟಿ ಬಗ್ಗೆ ಭಾರೀ ಅಭಿಮಾನವಿಟ್ಟುಕೊಂಡಿದ್ದರು ಮತ್ತು ಈಗಳು ಗ್ರಾಮೀಣ ಭಾಗಗಳಲ್ಲಿ ರೈತರು ಆ ಚೆಡ್ಡಿ ಧರಿಸುತ್ತಾರೆ. ಇದನ್ನೆಲ್ಲ ಯಾಕೆ ಹೇಳಬೇಕಾಯಿತೆಂದರೆ, ಟೋಲ್ ಸಂಗ್ರಹ ವಿರೋಧಿಸಿ ಶ್ರೀರಂಗಪಟ್ಟಣ ತಾಲ್ಲೂಕಿನ ಗಣಂಗೂರು ಟೋಲ್ ಪ್ಲಾಜಾ (toll plaza) ಬಳಿ ಕನ್ನಡ ಪರ ಸಂಘಟನೆಗಳ (pro Kannada organisation) ಸದಸ್ಯರು ಪ್ರತಿಭಟನೆ ನಡೆಸಿದರು. ಅವರಲ್ಲಿ ಒಬ್ಬ ಸದಸ್ಯ ಸಾಂಪ್ರದಾಯಿಕ ಪಟ್ಟಾಪಟ್ಟಿ ಚೆಡ್ಡಿಯಲ್ಲಿ ಪ್ರತಿಭಟನೆಗೆ ಆಗಮಿಸಿ ಗಮನ ಸೆಳೆದರು. ಪ್ರತಿಭಟನೆಕಾರರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಧೋರಣೆ ಮತ್ತು ಅದನ್ನು ಸಮರ್ಥಿಸಿಕೊಳ್ಳುವ ಸಂಸದ ಪ್ರತಾಪ್ ಸಿಂಹ ವಿರುದ್ಧ ಘೋಷಣೆ ಕೂಗಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ