ಕಾವೇರಿ ನಮ್ಮದು ಅಂತ ಬಿಎಮ್ ಟಿಸಿ ಬಸ್ ನಿಲ್ದಾಣದಲ್ಲಿ ವಿನೂತನ ಮಾದರಿ ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್

|

Updated on: Sep 02, 2023 | 7:38 PM

ಕಾವೇರಿ ನಮ್ಮದು, ಕಾವೇರಿ ನದಿ ನೀರಿಗಾಗಿ ಹೋರಾಟ, ಹಟಮಾರಿತನ ಪ್ರದರ್ಶಿಸುತ್ತಿರುವ ತಮಿಳುನಾಡು ಸರ್ಕಾರಕ್ಕೆ ಧಿಕ್ಕಾರ ಅಂತ ಘೋಷಣೆಗಳನ್ನು ಕಾರ್ಯಕರ್ತರು ಕೂಗಿದರು. ಪ್ರತಿಭಟನೆ ನಡೆಸಿದವರಲ್ಲಿ ಕೆಲ ಮಹಿಳೆಯರೂ ಇದ್ದರು. ಪೋಲಿಸರು ಬಂದು ವಾಟಾಳ್ ರ ಮನವೊಲಿಸಿ ಪಕ್ಕಕ್ಕೆ ಕರೆದೊಯ್ದರು.

ಬೆಂಗಳೂರು: ಕನ್ನಡ ಪರ ಹೋರಾಟಗಾರ ಮತ್ತು ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ (Vatal Nagaraj) ಪ್ರತಿಭಟನೆಗಳನ್ನು ವಿನೂತನವಾಗಿ ಮಾಡುವುದರಲ್ಲಿ ಸಿದ್ಧಹಸ್ತರು. ಇಂದು ಬಿಎಮ್ ಟಿಸಿ ಬಸ್ ನಿಲ್ದಾಣಕ್ಕೆ (BMTC bus stop) ತಮ್ಮ ಕಾರ್ಯಕರ್ತರೊಡನೆ ನುಗ್ಗಿ ಹೊರಡಲು ಅಣಿಯಾಗಿದ್ದ ಬಸ್ಸೊಂದರ ಮುಂದೆ ಪ್ರತಿಭಟನೆ ನಡೆಸಿದರು. ಕಾವೇರಿ ನದದಿ ನೀರನ್ನು (Cauvery River Water) ತಮಿಳುನಾಡು ಹರಿಬಿಟ್ಟಿದ್ದು ಮತ್ತು ನೀರಿನ ಬಗ್ಗೆ ತಮಿಳುನಾಡು ಹಟಮಾರಿ ಧೋರಣೆ ಪ್ರದರ್ಶಿಸುತ್ತಿರುವದನ್ನು ವಿರೋಧಿಸಿ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು. ಕಾವೇರಿ ನಮ್ಮದು, ಕಾವೇರಿ ನದಿ ನೀರಿಗಾಗಿ ಹೋರಾಟ, ಹಟಮಾರಿತನ ಪ್ರದರ್ಶಿಸುತ್ತಿರುವ ತಮಿಳುನಾಡು ಸರ್ಕಾರಕ್ಕೆ ಧಿಕ್ಕಾರ ಅಂತ ಘೋಷಣೆಗಳನ್ನು ಕಾರ್ಯಕರ್ತರು ಕೂಗಿದರು. ಪ್ರತಿಭಟನೆ ನಡೆಸಿದವರಲ್ಲಿ ಕೆಲ ಮಹಿಳೆಯರೂ ಇದ್ದರು. ಪೋಲಿಸರು ಬಂದು ವಾಟಾಳ್ ರ ಮನವೊಲಿಸಿ ಪಕ್ಕಕ್ಕೆ ಕರೆದೊಯ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ