‘ಸುಮಲತಾ ತಾಯಿ, ನಾನೂ, ದರ್ಶನ್ ಮಕ್ಕಳು: ಸಿನಿಮಾ ಬಗ್ಗೆ ಕೇಳಿದ್ದಕ್ಕೆ ಸುದೀಪ್ ತಮಾಷೆಯ ಉತ್ತರ
Kichcha Sudeep: ದರ್ಶನ್ ಹಾಗೂ ಸುದೀಪ್ ನಡುವೆ ಸಂಧಾನ ಚಾಲ್ತಿಯಲ್ಲಿದೆ ಎನ್ನಲಾಗುತ್ತಿದ್ದು, ಇಬ್ಬರೂ ಸೇರಿ 'ದಿಗ್ಗಜರು' ಹೆಸರಿನ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಸುದೀಪ್ಗೆ ಈ ಪ್ರಶ್ನೆ ಕೇಳಿದಾಗ ಅವರ ಉತ್ತರ ಹೀಗಿತ್ತು.
ನಟ ಸುದೀಪ್ (Sudeep) ಹಾಗೂ ದರ್ಶನ್ (Darshan) ನಡುವೆ ಸಂಧಾನ ನಡೆಯಲಿದೆ ಎಂಬ ಮಾತುಗಳು ತುಸು ಜೋರಾಗಿಯೇ ಇತ್ತೀಚೆಗೆ ಕೇಳಿ ಬಂದಿದ್ದವು. ಸಂಸದೆ, ನಟಿ ಸುಮಲತಾರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಸುದೀಪ್ ಹಾಗೂ ದರ್ಶನ್ ಪಾಲ್ಗೊಂಡಿದ್ದರು. ಇಬ್ಬರೂ ಸೇರಿ ‘ದಿಗ್ಗಜರು’ ಸಿನಿಮಾ ಮಾಡಲಿದ್ದಾರೆ ಎಂದೂ ಸಹ ಹೇಳಲಾಯ್ತು. ಇಂದು (ಸೆಪ್ಟೆಂಬರ್ 2) ಸುದೀಪ್ ಹುಟ್ಟುಹಬ್ಬದಂದು ಮಾಧ್ಯಮಗಳೊಟ್ಟಿಗೆ ಕಿಚ್ಚ ಮಾತನಾಡುವಾಗ ಮತ್ತೆ ಈ ಪ್ರಶ್ನೆ ಎದುರಾಯ್ತು. ಪ್ರಶ್ನೆಗೆ ತಮಾಷೆಯಾಗಿಯೇ ಉತ್ತರ ಕೊಟ್ಟರು ಸುದೀಪ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos